ಯಾವಾಗ ಪಾಕಿಸ್ತಾನಕ್ಕೆ ಕಾಲಿಟ್ಟಿದ್ದಾರೋ ಅಂದಿನಿಂದ ಈಕೆ ಮನೆಯ ಹೊರಗೆ ಕಾಲನ್ನೇ ಇಟ್ಟಿಲ್ಲವಂತೆ. ತನಗೆ ನನ್ನ ಪತಿ ದಿನಾಲೂ ಹೊಡೆಯುತ್ತಿದ್ದ, ನನಗೆ ಒಟ್ಟು ಐದು ಜನ ಮಕ್ಕಳಿದ್ದಾರೆ. ಆದರೆ ಒಬ್ಬರೂ ಸಹ ಸರಿಯಾಗಿ ಶಿಕ್ಷಣ ಪಡೆದಿಲ್ಲ. ನನ್ನ ಗಂಡ ಒಬ್ಬ ಕ್ರೂರಿ, ನನ್ನ ಜೀವನವಂತು ಹಾಳಾಯಿತು, ಆದರೆ ನನ್ನ ಮಕ್ಕಳು ಜೀವನವಾದರೂ ಚೆನ್ನಾಗಿ ಸಾಗಲಿ ಎಂದು ಯಾಸ್ಮಿನಾ ಕಣ್ಣೀರನ್ನು ಸುರಿಸಿದ್ದಾಳೆ.