ಬಾಗಾ ಬೀಚ್‌ನಲ್ಲಿ ದುರಂತ: ಅಲೆಗಳ ಆರ್ಭಟಕ್ಕೆ ಕೊಚ್ಚಿಹೋದ ಕರ್ನಾಟಕದ ಯುವಕ; ವಿಡಿಯೋ ವೈರಲ್​! Goa Beach Tragedy

ಕರ್ನಾಟಕದ ಯುವಕ ಗೋವಾದ ಬಾಗಾ ಬೀಚ್‌ನಲ್ಲಿ ಜಲಸಮಾಧಿ
ಕರ್ನಾಟಕದ ಯುವಕ ಗೋವಾದ ಬಾಗಾ ಬೀಚ್‌ನಲ್ಲಿ ಜಲಸಮಾಧಿ
Published on

ಪ್ರಮುಖ ಮುಖ್ಯಾಂಶಗಳು

  • ಗೋವಾದ ಬಾಗಾ ಬೀಚ್‌ನಲ್ಲಿ ಭೀಕರ ದುರಂತ!
  • ಬೃಹತ್ ಬಂಡೆ ಮೇಲೆ ಕುಳಿತಿದ್ದ ವಿಜಯಪುರ ಮೂಲದ ಯುವಕ ಸಮುದ್ರದ ಅಲೆಗೆ ಸಿಲುಕಿ ಜಲಸಮಾಧಿ
  • ಕರ್ನಾಟಕದ ಯುವಕ ಸಾಹಸ್ ಮಾಸ್ಲಿ ಸಮುದ್ರದ ಪಾಲು!
ಪಣಜಿ: ಭದ್ರತಾ ಸಿಬ್ಬಂದಿಗಳ ಎಚ್ಚರಿಕೆಯ ನಡುವೆಯೂ ಸಮುದ್ರದಲ್ಲಿ ಹುಚ್ಚಾಟ ಮೆರೆಯಲು ಹೋದ ವಿಜಯಪುರದ ಯುವಕನೊಬ್ಬ ಗೋವಾದ ಬಾಗಾ ಬೀಚ್​ನಲ್ಲಿ (Goa Beach Tragedy) ಜಲಸಮಾಧಿಯಾದ ಘಟನೆ ವರದಿಯಾಗಿದೆ.
ಮಾಹಿತಿ ಪ್ರಕಾರ, ಮೃತನನ್ನು 33 ವರ್ಷದ ಸಾಹಸ್ ಅಶ್ಪಕ್ ಮಾಸ್ಲಿ (Sahas Ashpak Masali) ಎಂದು ಗುರುತಿಸಲಾಗಿದ್ದು, ಇತನು ಬಾಗಾ ಬೀಚ್​ನಲ್ಲಿದ್ದ ಒಂದು ಬಂಡೆ ಮೇಲೆ ಕುಳಿತಿದ್ದು, ನಂತರ ತೆರೆ ಬಂದು ಅಪ್ಪಳಿಸಿದ ಹೊದೆತಕ್ಕೆ ಸಮುದ್ರದ ಪಾಲಾಗಿದ್ದಾನೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋ ವೈರಲ್​!

ಈ ಸಾಹಸ್ ಅಶ್ಪಕ್ ಮಾಸ್ಲಿ (Sahas Ashpak Masali) ಬಾಗಾ ಬೀಚ್​ನ ಬೃಹತ್​ ಬಂಡೆ ಮೇಲೆ ಕುಳಿತುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.
ಈ ವಿಡಿಯೋನಲ್ಲಿ ಬಂಡೆಯೊಂದನ್ನು ಏರಿ ಇತ ಕುಳಿತಿದ್ದು, ತನ್ನ ಬಳಿ ತೆರೆ ಬರುವುದಿಲ್ಲ ಎಂದ ಅತಿಯಾದ ಆತ್ಮವಿಶ್ವಾಸವನ್ನು ನಾವು ನೋಡಬಹುದಾಗಿದೆ. ಇನ್ನೊಂದು ಕಡೆ ಅಲ್ಲಿಂದ ಆದಷ್ಟು ಇಳಿದು ಬರುವಂತೆ ಜನ ಹೇಳುತ್ತಿರುವುದು ವಿಡಿಯೋನಲ್ಲಿ ದಾಖಲಾಗಿದೆ.
ಆದರೆ, ಈ ಮಾತಿಗಳಿಗೆ ಕಿವಿಗೊಡದ ಸಾಹಸ್​ ಅದೇ ಬಂಡೆ ಮೇಲೆ ಕುಳಿತ್ತಿದ್ದಾನೆ. ಕೆಲವೇ ಕ್ಷಣದಲ್ಲಿ ಬೃಹತ್​ ಅಲೆಯೊಂದ ಅಪ್ಪಳಿದ ಪರಿಣಾಮ, ನಿಯಂತ್ರಣ ಕಳೆದುಕೊಂಡ ಇತ ಸಮುದ್ರಕ್ಕೆ ಬಿದ್ದಿದ್ದಾನೆ. ಇವನ ರಕ್ಷಣೆಗೆ ಜನ ಮುಂದಾಗುವ ಮೊದಲೆ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದಾನೆ. ಕೆಲ ಸಮಯದ ಬಳಿದ ರಕ್ಷಣಾ ಕಾರ್ಯ ಆರಂಭವಾಗಿದ್ದು, ದೂರದ ತೀರಕ್ಕೆ ಸಾಹಸ್​ನ ಹೆಣ ಬಂದು ತಲುಪಿದೆ. ಈಗ ಈ ಕುರಿತು ಪೊಲೀಸರಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net