ಶೌಚಾಲಯದಲ್ಲಿ ಬಿದ್ದು ಸಾವನ್ನಪ್ಪಿದ ಮಾಜಿ ಸೇನಾ ಮುಖ್ಯಸ್ಥ; ಭಾರತ ನ.1 ಶತ್ರು ಎಂದಿದ್ದ ಪಾಕಿಸ್ತಾನದ ಬಾಜ್ವಾ ಇನ್ನಿಲ್ಲ! Qamar Javed Bajwa
ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಕಮರ್ ಬಾಜ್ವಾ
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪಾಕಿಸ್ತಾನದ ಮಾಜಿ ಸೇನಾ ಮುಖ್ಯಸ್ಥ ಕಮರ್ ಬಾಜ್ವಾ ನಿಧನ
ಶೌಚಾಲಯದಲ್ಲಿ ಜಾರಿ ಬಿದ್ದು ಅಸುನಿಗಿದ ಜನರಲ್
ಭಾರತದ ವಿರುದ್ಧ ಸದಾ ವಿಷಕಾರುತ್ತಿದ್ದ ಬಾಜ್ವಾ
ಪಾಕಿಸ್ತಾನ: ಭಾರತ ನಮ್ಮ ಶತ್ರು ನಂಬರ್ 1 ಎಂಬ ಹೇಳಿಕೆ ಮೂಲಕ ವೈರಲ್ ಆಗಿದ್ದ ಪಾಕಿಸ್ತಾನ ಸೇನೆಯ ಮಾಜಿ ಮುಖ್ಯಸ್ಥ ಕಮರ್ ಜಾವೇದ್ ಬಾಜ್ವಾ (Qamar Javed Bajwa) [65] ನಿಧನರಾಗಿದ್ದಾಗಿ ವರದಿಯಾಗಿದೆ.
ಮಾಹಿತಿಯ ಪ್ರಕಾರ, ಶೌಚಾಯಲಕ್ಕೆ ತೆರಳಿದ್ದ ಸಮಯದಲ್ಲಿ ಆಯತಪ್ಪಿ ಬಾಜ್ವಾ ನೆಲಕ್ಕೆ ಬಿದಿದ್ದು, ತೀವ್ರವಾಗಿ ಗಾಯಗೊಂಡಿದ್ದು, ರಾವಲ್ಪಿಂಡಿಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನಲೆ ಮಾಜಿ ಸೇನಾ ಮುಖ್ಯಸ್ಥ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.
ಆಪರೇಷನ್ ಬಳಿಕ ಹದಗೆಟ್ಟ ಆರೋಗ್ಯ!
ಶೌಚಾಲಯದಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಕಮರ್ ಬಾಜ್ವಾ ಅವರನ್ನು ಕುಟುಂಬ ವರ್ಗ ಕೂಡಲೇ ರಾವಲ್ಪಿಂಡಿಯ ಆಸ್ಪತ್ರೆಗೆ ದಾಖಲಿಸಿತ್ತು. ಬಾಜ್ವಾ ಅವರ ಸ್ಥಿತಿಯನ್ನು ಗಮನಿಸಿದ ವೈದ್ಯರು ಶಸ್ತ್ರಚಿಕಿತ್ಸೆ ಅಗತ್ಯವೆಂದು ಹೇಳಿ, ಆಪರೇಷನನ್ನು ಮಾಡಿದ್ದಾರೆ. ಆದರೆ ಆಪರೇಷನ್ ನಂತರ ಬಾಜ್ವಾ ಅವರ ಆರೋಗ್ಯದಲ್ಲಿ ಏರು-ಪೇರಾಗಿದ್ದು, ಕೊನೆಗೆ ಅವರ ಸಾವು ಸಂಭವಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಭಾರತ ನಮ್ಮ ಶತ್ರು ನಂ.1
2016 ರಿಂದ 2022 ರ ವರೆಗೆ ಪಾಕಿಸ್ತಾನ ಮಿಲಿಟರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಜನರಲ್ ಬಾಜ್ವಾ, ಭಾರತ ನಮ್ಮ ಶತ್ರು ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆ ದೇಶವನ್ನು ನಾವು ಸುಮ್ಮನೆ ಬಿಡುವುದಿಲ್ಲ ಎಂಬ ಹೇಳಿಕೆಯನ್ನು ಬಾಜ್ವಾ ನೀಡಿದ್ದರು.
2019 ರಲ್ಲಿ ಭಾರತದ ಪುಲ್ವಾಮಾದಲ್ಲಿ ನಡೆದಿದ್ದ ಭಯೋತ್ಪದಕ ದಾಳಿ ರೂಪಿಸುವಲ್ಲಿ ಈ ಬಾಜ್ವಾ ಅವರ ಪಾತ್ರವಿತ್ತು ಎಂದು ಭಾರತ ಆರೋಪಿಸಿತ್ತು. ಆದರೆ ಜನರಲ್ ಬಾಜ್ವಾ ಈ ದಾಳಿಗೆ ನನಗೆ ಹಾಗೂ ಪಾಕಿಸ್ತಾನಕ್ಕೆ ಯಾವುದೇ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿದ್ದರು.
2016 ರಲ್ಲಿ ಪಾಕಿಸ್ತಾನದ ಪ್ರಧಾನಿಯಾಗಿದ್ದ ನವಾಜ್ ಶರೀಫ್ ಅವರ ಅತ್ಯಂತ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಹಿನ್ನಲೆಯಲ್ಲಿ ಕಮರ್ ಬಾಜ್ವಾ ಅವರನ್ನು ಸೇನೆಯ ಮುಖ್ಯಸ್ಥನಾಗಿ ನವಾಜ್ ಶರೀಫ್ ನೇಮಿಸಿದ್ದರು ಎಂದು ಹೇಳಲಾಗುತ್ತದೆ,(ಏಜನ್ಸೀಸ್).