ಫೇಸ್​ಬುಕ್​ನಲ್ಲಿ ಲಿಂಕ್​ ಹಂಚಿಕೊಳ್ಳಲು ಬಳಕೆದಾರರಿಗೆ ಶುಲ್ಕ ವಿಧಿಸಲು ಮುಂದಾದ ಫೇಸ್​ಬುಕ್; ಸುದ್ದಿ ಸಂಸ್ಥೆಗಳಿಗೆ ಹೊಡೆತ | Facebook

Facebook
Facebook
Published on
Facebook: ವೆಬ್​ ಲಿಂಕ್​ಗಳನ್ನು ಹಂಚಿಕೊಳ್ಳಲು ಬಳಕೆದಾರರಿಗೆ ಶುಲ್ಕ ವಿಧಿಸುವ ವ್ಯವಸ್ಥೆಯನ್ನು ಡಿ. 16ರಿಂದ ಫೇಸ್​ಬುಕ್​ ಪರಿಶೀಲಿಸುತ್ತಿದೆ ಎನ್ನಲಾಗಿದ್ದು, ಇದು ಸುದ್ದಿ ಮಾಧ್ಯಮಗಳು ಮತ್ತು ಪ್ರಕಾಶಕರಿಗೆ ಹೊಡೆತ ನೀಡುವ ಸಾಧ್ಯತೆ ಇದೆ.
ಈ ಕುರಿತು ಮಾಹಿತಿ ನೀಡಿರುವ ಫೇಸ್​ಬುಕ್ ಮಾಲೀಕ ಸಂಸ್ಥೆ ಮೇಟಾ, ಇದನ್ನು ಲಿಮಿಟೆಡ್ ಟೆಸ್ಟ್ ಎಂದು ಕರೆದಿದೆ. ಇದರಲ್ಲಿ ಮೆಟಾ ಪರಿಶೀಲಿಸಿದ ಚಂದದಾರಿಕೆಯನ್ನು ಪಡೆಯದ ಬಳಕೆದಾರರು ತಿಂಗಳಿಗೆ ಎರಡೂ ಲಿಂಕ್​ಗಳನ್ನು ಮಾತ್ರ ಉಚಿತವಾಗಿ ಪೋಸ್ಟ್ ಮಾಡಬಹುದು. ಅನಿಯಮಿತ ಲಿಂಕ್‌ಗಳನ್ನು ಶೇರ್ ಮಾಡಲು ತಿಂಗಳಿಗೆ ಸುಮಾರು $11.99 ಅಥವಾ £9.99 ಶುಲ್ಕ ಪಾವತಿಸಿ ಮೆಟಾ ವೆರಿಫೈಡ್ ಸಬ್‌ಸ್ಕ್ರಿಪ್ಷನ್ ತೆಗೆದುಕೊಳ್ಳಬೇಕು.
ಈ ಟೆಸ್ಟ್ ಮುಖ್ಯವಾಗಿ ಫೇಸ್‌ಬುಕ್ ಪೇಜ್‌ಗಳು ಮತ್ತು ಪ್ರೊಫೆಷನಲ್ ಮೋಡ್ ಬಳಸುವ ಪ್ರೊಫೈಲ್‌ಗಳಿಗೆ ಉದಾಹರಣೆಗೆ ಬಿಜಿನೆಸ್, ಕ್ರಿಯೇಟರ್‌ಗಳು ಫೇಜ್​ಗಳಿಗೆ ಮಾತ್ರ ಅನ್ವಯಿಸುತ್ತಿದ್ದು, ಸುದ್ದಿ ಸಂಸ್ಥೆಗಳು ಮತ್ತು ಪಬ್ಲಿಷರ್‌ಗಳು ಈ ಟೆಸ್ಟ್‌ನಲ್ಲಿ ಸೇರಿಲ್ಲ ಎಂದು ಮೆಟಾ ಸ್ಪಷ್ಟಪಡಿಸಿದೆ. ಆದಾಗ್ಯೂ ಇದು ಪ್ರಭಾವ ಬೀರಬಹುದು ಎನ್ನಲಾಗಿದೆ.
2023ರಲ್ಲಿ ಮೆಟಾ ಸುದ್ದಿ ವಿಷಯಕ್ಕೆ ಆಧ್ಯತೆ ನೀಡದೇ ಕೇವಲ ವಿಡಿಯೋ, ವೈರಲ್, ಶಾರ್ಟ್ ಫಾರ್ಮ್​ಗಳ ಕಡೆ ಗಮನಹರಿಸಿದ್ದರಿಂದ ಪ್ರಕಾಶಕರು ಈಗಾಗಲೇ ಆನ್​​ಲೈನ್ ಟ್ರಾಫಿಕ್​ನಲ್ಲಿ ಭಾರಿ ಕುಸಿತ ಕಂಡಿದ್ದಾರೆ. ಈ ವರ್ಷ ಫೇಸ್​ಬುಕ್​ನಲ್ಲಿ ಸುದ್ದಿ ಸೈಟ್​ಗಳು ಚೇತರಿಸಿಕೊಳ್ಳುತ್ತಿದ್ದವು,
ಪ್ರಕಾಶಕರು ಈಗಾಗಲೇ 2023ರಲ್ಲಿ ಮೆಟಾ ಕಂಪನಿಯ ಒಂದು ನಿರ್ಧಾರದಿಂದು ಭಾರಿ ಕುಸಿತವನ್ನು ಅನುಭವಿಸಿದ್ದರು. ಅದು ಸುದ್ದಿ ವಿಷಯಕ್ಕೆ ಕಡಿಮೆ ಪ್ರಾಮುಖ್ಯತೆ ನೀಡಿ, ಹೆಚ್ಚಾಗಿ ವೀಡಿಯೊಗಳು ಮತ್ತು ವೈರಲ್, ಶಾರ್ಟ್-ಫಾರ್ಮ್ ವಿಷಯಗಳನ್ನು ಪ್ರದರ್ಶಿಸುವತ್ತ ಬದಲಾವಣೆ ಮಾಡಿತ್ತು. ಈ ವರ್ಷ ಫೇಸ್‌ಬುಕ್‌ನಿಂದ ಸುದ್ದಿ ಸೈಟ್‌ಗಜ್ಞಳು ಕುಸಿತವನ್ನು ಚೇತರಿಸಿಕೊಳ್ಳುತ್ತಿದ್ದವು. ಆದಾಗ್ಯೂ 2024ರಲ್ಲಿ ಶೇ. 50ರಷ್ಟು ಕುಸಿತ ಕಂಡಿದೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net