ಸೆಟ್ಟೇರಿದ ಪ್ರಧಾನಿ ಮೋದಿಯ ಮತ್ತೊಂದು ಬಯೋಫಿಕ್ ಸಿನಿಮಾ; ಮಲಯಾಳಂ ನಟ ಉನ್ನಿ ಮುಕುಂದನ್ ನಟನೆ | PM Modi biopic
ಮಾ ವಂದೇ ಚಿತ್ರಕ್ಕೆ ಚಾಲನೆ ನೀಡಿರುವುದು.
Published on:
Copied
Follow Us
ಹೈದರಾಬಾದ್: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜೀವನ ಪಯಣವನ್ನು(PM Modi biopic) ಮತ್ತೊಮ್ಮೆ ತೆರೆ ಮೇಲೆ ತರಲು ಸಿದ್ಧವಾಗುತ್ತಿದ್ದು, ಇಂದು(ಡಿ. 20) ಹೈದರಾಬಾದ್ನಲ್ಲಿ ‘ಮಾ ವಂದೇ’ ಎಂಬ ಟೈಟಲ್ನಲ್ಲಿ ಚಿತ್ರೀಕರಣಕ್ಕೆ ಸಿನಿಮಾ ತಂಡ ಸಾಂಪ್ರದಾಯಿಕ ಪೂಜೆಯೊಂದಿಗೆ ಅಧಿಕೃತವಾಗಿ ಚಾಲನೆ ನೀಡಿದೆ.
ರಾಜಕೀಯ ಹೋರಾಟ, ದೇಶದ ಅಭಿವೃದ್ಧಿ ಹೊರತಾಗಿ ಈ ಚಿತ್ರದಲ್ಲಿ ಪ್ರಧಾನಿ ಮೋದಿ ಮತ್ತು ಅವರ ತಾಯಿ ಹಿರಾಬೆನ್ ಮೋದಿಯವರ ನಡುವಿನ ಭಾಂದವ್ಯ, ಬಾಲ್ಯದಿಂದ ರಾಷ್ಟ್ರೀಯ ನಾಯಕನಾದ ಬಗ್ಗೆ ಬೆಳಕು ಚೆಲ್ಲಲಿದೆ ಎನ್ನಲಾಗಿದೆ.
ಸಿಲ್ವರ್ ಕಾಸ್ಟ್ರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ವೀರ್ ರೆಡ್ಡಿ ನಿರ್ಮಾಣ ಮಾಡುತ್ತಿದ್ದು, ತೆಲುಗಿನ ನಿರ್ದೇಶಕ ಕ್ರಾಂತಿ ಕುಮಾರ್ ನಿರ್ದೇಶನ ಮಾಡ್ತಿದ್ದಾರೆ. ಪ್ರಧಾನಿ ಮೋದಿ ಪಾತ್ರದಲ್ಲಿ ಮಲಯಾಳಂ ಸ್ಟಾರ್ ನಟ ಉನ್ನಿ ಮುಕುಂದನ್ ನಟಿಸುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಉನ್ನಿ ಮುಕುಂದನ್, ನಾನು ಅಹ್ಮದಾಬಾದ್ನಲ್ಲಿ ಬೆಳೆದಿದ್ದು, ಪ್ರಧಾನಿ ಮೋದಿಯವರ ಬಗ್ಗೆ ನನಗೆ ಅಪಾರವಾದ ಅಭಿಮಾನವಿದೆ. ಅವರ ಪಾತ್ರದಲ್ಲಿ ಅಭಿನಯಿಸಲು ನನಗೆ ಅವಕಾಶ ನೀಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಮಾ ವಂದೇ ಚಿತ್ರದಲ್ಲಿ ಪ್ರಾಮಾಣಿಕವಾಗಿ ನನ್ನ ಶಕ್ತಿ ಮೀರಿ ಪಾತ್ರಕ್ಕೆ ಜೀವ ತುಂಬುತ್ತೇನೆ ಎಂದು ಹೇಳಿದ್ದಾರೆ.
ಪ್ಯಾನ್ ಇಂಡಿಯಾ ಅಡಿ ಸಿನಿಮಾವನ್ನು ನಿರ್ಮಾಣ ಮಾಡಲಾಗ್ತಿದ್ದು, ಬಾಹುಬಲಿ, ಆರ್ಆರ್ಆರ್ ಸಿನಿಮಾ ಖ್ಯಾತಿಯ ಕೆ.ಕೆ.ಸೆಂಥಿಲ್ ಕುಮಾರ್ ಛಾಯಾಗ್ರಹಣ ಮಾಡ್ತಿದ್ದು, ಶ್ರೀಕರ್ ಪ್ರಸಾದ್ ಸಂಕಲನ ಮಾಡ್ತಿದ್ದು, ರವಿ ಬಸ್ರೂರ್ ಸಂಗೀತ ನೀಡುತ್ತಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).