ಆದಾಗ್ಯೂ, ಇತಿಹಾಸಕಾರರು ಎಲಾನ್ ಮಸ್ಕ್ ಅವರ ಈ ಐತಿಹಾಸಿಕ ಸಾಧನೆಯನ್ನು ವಿಭಿನ್ನ ದೃಷ್ಟಿಕೋನದಿಂದ ವಿಶ್ಲೇಷಿಸುತ್ತಿದ್ದಾರೆ. ಇಂದಿನ ಅಮೆರಿಕನ್ ಡಾಲರ್ ಮೌಲ್ಯಕ್ಕೆ ಹೋಲಿಸಿ ಲೆಕ್ಕಾಚಾರ ಹಾಕಿದರೆ, ಇತಿಹಾಸದಲ್ಲಿ ಜಗತ್ತನ್ನು ಆಳಿದ ಹಲವು ಚಕ್ರವರ್ತಿಗಳು, ರಾಜರು ಮತ್ತು ಸುಲ್ತಾನರು ಹೊಂದಿದ್ದ ಸಂಪತ್ತು ಎಲಾನ್ ಮಸ್ಕ್ ಅವರ ಇಂದಿನ ಆಸ್ತಿಗಿಂತಲೂ ಎಷ್ಟೋ ಪಟ್ಟು ಹೆಚ್ಚಾಗಿತ್ತು ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ಅವರು ಆಳಿದ ಸಾಮ್ರಾಜ್ಯದ ವಿಸ್ತೀರ್ಣ, ಆ ಕಾಲದಲ್ಲಿದ್ದ ತೆರಿಗೆ ವ್ಯವಸ್ಥೆ, ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಸಂಪೂರ್ಣ ನಿಯಂತ್ರಣ ಮತ್ತು ಅಂತಾರಾಷ್ಟ್ರೀಯ ವ್ಯಾಪಾರದ ಮೇಲಿದ್ದ ಪ್ರಭಾವದ ಆಧಾರದ ಮೇಲೆ ಅವರ ಸಂಪತ್ತನ್ನು ಅಂದಾಜಿಸಲಾಗಿದೆ.