ರಣಭೀಕರ ಪ್ರವಾಹದ ಆಘಾತದ ಬೆನ್ನಲ್ಲೇ ಭೂಕಂಪ: ಟಿಬೆಟ್-ನೇಪಾಳ ಗಡಿಯಲ್ಲಿ ಕಂಪಿಸಿದ ಭೂಮಿ! Earthquake in Tibet

ಭೂಕಂಪ ಮತ್ತು ಪ್ರವಾಹದಿಂದ ತತ್ತರಿಸಿದ ಟಿಬೆಟ್ ನೇಪಾಳ ಗಡಿ ಪ್ರದೇಶ
ಭೂಕಂಪ ಮತ್ತು ಪ್ರವಾಹದಿಂದ ತತ್ತರಿಸಿದ ಟಿಬೆಟ್ ನೇಪಾಳ ಗಡಿ ಪ್ರದೇಶ
Published on
ಟಿಬೆಟ್​: ಕಳೆದೊಂದು ವಾರದಿಂದ ನೇಪಾಳ ಹಾಗೂ ಟಿಬೆಟ್​ ಗಡಿ ಪ್ರದೇಶದಲ್ಲಿ ಭಾರಿ ಪ್ರವಾಹ ಉಂಟಾದ ಹಿನ್ನಲೆ ಸಾವಿರಾರು ಸಾವು-ನೋವು ಸಂಭವಿಸಿದ್ದು, ಈಗ ಟಿಬೆಟ್​ನಲ್ಲಿ ಭೂಕಂಪ (Earthquake in Tibet) ಕೂಡ ಸಂಭವಿಸಿದೆ ಎಂದು ವರದಿಯಾಗಿದೆ.
ಮಾಹಿತಿ ಪ್ರಕಾರ, ನೇಪಾಳ ಹಾಗೂ ಟಿಬೆಟ್​ ಗಡಿ ಪ್ರದೇಶದಲ್ಲಿ ಈ ಭೂಕಂಪ ಕಂಡುಬಂದಿದ್ದು, 5 ಮ್ಯಾಗ್ನಿಟ್ಯೂಡ್ ತೀವ್ರತೆಯಲ್ಲಿ ಇದು ಸಂಭವಿಸಿದ್ದು, ಸುಮಾರು 10 ಕಿ.ಮೀ ಸುತ್ತಲಿನ ಪ್ರದೇಶ ನಡುಗಿದೆ ಎಂದು ಹೇಳಲಾಗುತ್ತಿದೆ. ​ಅದರೆ, ಈ ಭೂಕಂಪದಿಂದ ಇಲ್ಲಿವೆರೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲವೆಂದು ಜರ್ಮನ್ ಭೂವಿಜ್ಞಾನ ಸಂಶೋಧನಾ ಕೇಂದ್ರ (GFZ) ಮಾಹಿತಿ ಹಂಚಿಕೊಂಡಿದೆ.

ರಣ ಭೀಕರ ಪ್ರವಾಹ; ಸಾವಿರ ದಾಟಿದ ಸತ್ತವರ ಸಂಖ್ಯೆ!

ಕಳೆದೊಂದು ವಾರದಿಂದ ನೇಪಾಳ ಹಾಗೂ ಟಿಬೆಟ್​ ಗಡಿ ಪ್ರದೇಶದಲ್ಲಿ ಹಿಮ ಪರ್ವತಗಳ ಕರಗುವಿಕೆಯಿಂದಾಗಿ ರಣ ಭೀಕರ ಪ್ರವಾಹ ಅಪ್ಪಳಿಸಿದ ಪರಿಣಾಮ ಇಲ್ಲಿವರೆಗೆ 1,200 ಕ್ಕಿಂತ ಹೆಚ್ಚಿನ ಜನರು ಸಾವಿಗೀಡಾಗಿದ್ದಾರೆಂದು ವರದಿಯಾಗಿದೆ. ಮಾಹಿತಿ ಪ್ರಕಾರ, ಪ್ರವಾಹದಲ್ಲಿ ಕಾಣೆಯಾದವರ ಸಂಖ್ಯೆ 6,000 ಕ್ಕೂ ಅಧಿಕವಿದೆ ಎಂಬ ಗುಮಾನಿಯಿದೆ ಎನ್ನಲಾಗಿದೆ.
ನೇಪಾಳ ಇದು ಗುಡ್ಡಗಾಡು ಪ್ರದೇಶವಾಗಿರುವ ಕಾರಣ, ಅನೇಕ ಕಡೆಗಳಲ್ಲಿ ರಕ್ಷಣೆ ನಡೆಸಲು ಸರಿಯಾದ ವ್ಯವಸ್ಥೆ ಇಲ್ಲದೆಯೇ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆಂದು ಹೇಳಲಾಗುತ್ತಿದ್ದು, ವೈಮಾನಿಕ ಮಾರ್ಗವಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.

ಭಾರತ ಸೇರಿ ಇತರರಿಂದ ಸಹಾಯ!

ನೆರೆ ದೇಶ ನೇಪಾಳ ಪ್ರವಾಹಕ್ಕೆ ತುತ್ತಾದ ಹಿನ್ನಲೆ ಭಾರತ ಮಾನವೀಯ ದೃಷ್ಟಿಯಿಂದ ಮೂಲಭೂತ ಸೌಕರ್ಯ, ಆಹಾರ ಹಾಗೂ ತುರ್ತು ಚಿಕಿತ್ಸಾ ಸಾಮಾಗ್ರಿಗಳನ್ನು ನೇಪಾಳಕ್ಕೆ ರವಾನಿಸಿದೆ. ಭಾರತದ ಹಾಗೆ ಅಮೆರಿಕ, ಚೀನಾ, ದಕ್ಷಿಣ ಕೊರಿಯಾ, ಕೆನಡಾ, ಜಪಾನ್​, ಇಂಗ್ಲೆಂಡ್​ ಮೊದಲಾದ ದೇಶಗಳು ನೇಪಾಳಕ್ಕೆ ತುರ್ತಾಗಿ ಅಗತ್ಯವಿರುವ ಸಾಮಾಗ್ರಿಗಳನ್ನು ರವಾನೆ ಮಾಡಿದೆ ಎಂದು ವರದಿಯಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net