

ಇಸ್ಲಾಮಾಬಾದ್: ಕೆಲ ದಿನಗಳ ಹಿಂದೆ ಇರಾನ್ನಲ್ಲಿ ನಡೆದ ಉನ್ನತ ಮಟ್ಟದ ರಕ್ಷಣಾ ಒಪ್ಪಂದದ ಮಾತುಕತೆಗೆ ಪಾಕಿಸ್ತಾನದ ರಕ್ಷಣಾ ಮಂತ್ರಿ ಖವಾಜಾ ಆಸಿಫ್ ಗೈರಾಗಿರುವುದು ದೊಡ್ಡಮಟ್ಟದ ಚರ್ಚೆಯಾಗಿ ಪರಿವರ್ತನೆಯಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ, ನ್ಯಾಷನಲ್ ಅಸೆಂಬ್ಲಿಯಲ್ಲಿ ಮಾತನಾಡಿದ ಜಮಿಯತ್ ಉಲೇಮಾ-ಎ-ಇಸ್ಲಾಂ-ಫಜಲ್ (JUI-F) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್, ರಕ್ಷಣಾ ಸಚಿವರಿಗೆ ನಾಚಿಕೆ ಎನ್ನುವುದು ಇಲ್ಲವೇ? ಎಂದು ವ್ಯಂಗ್ಯವಾಡಿದ್ದಾರೆ.
ಇರಾನ್ ನಡೆದಿದ್ದ ಪ್ರಾದೇಶಿಕ ರಕ್ಷಣಾ ಒಪ್ಪಂದ ಮಾತುಕತೆಯ ಸಭೆಗೆ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಹಾಗೂ ಗೃಹ ಸಚಿವ ಮೊಹ್ಸಿನ್ ನಖ್ವಿ ಭಾಗವಹಿಸಿದ್ದರು. ಈ ಮಾತುಕತೆಯಲ್ಲಿ ಸೌದಿ ಅರೇಬಿಯಾ ಹಾಗೂ ತುರ್ಕಿಯೇ (ಟರ್ಕಿ) ದೇಶದ ಪ್ರತಿನಿಧಿಗಳು ಹಾಜರಿದ್ದರು. ಇಂತಹ ಬಹುಮುಖ್ಯ ಸಭೆಗೆ ದೇಶದ ರಕ್ಷಣಾ ಸಚಿವ ಹಾಜರಾಗುವುದಿಲ್ಲ ಎಂದರೆ ಏನರ್ಥ?
ನಿಮಗೆ ಸ್ವಲ್ಪವೂ ನಾಚಿಕೆ ಯಾಗುತ್ತಿಲ್ಲವೇ? ಎಂದು ಮೌಲಾನಾ ಫಜ್ಲುರ್ ರೆಹಮಾನ್, ನೇರವಾಗಿ ಅಸೆಂಬ್ಲಿಯಲ್ಲಯೇ ಕುಣಿತಿದ್ದ ಖವಾಜಾ ಆಸಿಫ್ಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮಾತನ್ನು ಕೇಳುತ್ತಲೇ ಪಾಕಿಸ್ತಾನದ ಅಸೆಂಬ್ಲಿಯಲ್ಲಿದ್ದ ಸಚಿವರು ಜೋರಾಗಿ ನಕ್ಕಿ, ಟೇಬಲ್ಅನ್ನು ಕುಟ್ಟಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ಸಖತ್ ವೈರಲ್ ಆಗುತ್ತಿದ್ದು, ದೇಶದ ರಕ್ಷಣಾ ಮಂತ್ರಿಗೆ, ಅಸೆಂಬ್ಲಿಯಲ್ಲಿ ಮರ್ಯಾದೆಯೇ ಇಲ್ಲ ಎಂದು ಅಪಹಾಸ್ಯ ಮಾಡಲಾಗುತ್ತಿದೆ.
ಇನ್ನು ಈ ಮಾನ ಹಾನಿಕರ ಮಾತಿಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ಖವಾಜಾ ಆಸಿಫ್, ಮೊದಲನೇದಾಗಿ ಇರಾನ್ನಲ್ಲಿ ಯಾವುದೇ ರಕ್ಷಣಾ ಒಪ್ಪಂದ ನಡೆದಿಲ್ಲ. ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಹಾಗೂ ಮೊಹ್ಸಿನ್ ನಖ್ವಿ ರಾಜತಾಂತ್ರಿಕ ವಿಷಯಗಳ ಹಾಗೂ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮಾಹಿತಿ ಪಡೆಯಲು ಹೋಗಿದ್ದರೇ ವಿನಃ ಅಲ್ಲಿ ಯಾವುದೇ ಮಿಲಿಟರಿ ಮಾತುಕತೆ ನಡೆದಿಲ್ಲ.
ನಾನು ಕಳೆದ ವರ್ಷ ಭಾರತದೊಂದಿಗೆ ನಡೆದ ಸಂಘರ್ಷದ ಸಮಯದಲ್ಲಿ ಕೂಡ ಪರಾಕ್ರಮ ತೋರಿದ್ದೇವೆ. ಪಾಕ್ ಸೇನೆ ಹಾಗೂ ರಕ್ಷಣಾ ಸಚಿವ ಇಬ್ಬರು ಎಂಥಹ ಪರಿಸ್ಥಿತಿಯನ್ನು ಎದುರಿಸಲು ಶಕ್ತರಾಗಿದ್ದೇವೆಂದು ಉತ್ತರಿಸಿದ್ದಾರೆ.
ಈ ಮಾತುಕತೆ ಪಾಕಿಸ್ತಾನ, ಟರ್ಕಿ ಹಾಗೂ ಸೌದಿ ಅರೇಬಿಯಾ ದೇಶಗಳ ನಡುವೆ ಏರ್ಪಟ್ಟಿರುವ ಮಕ್ಕಾ ಒಪ್ಪಂದದ ಬಗ್ಗೆ ಚೆರ್ಚೆ ನಡೆಸಲು ಕರೆದಿದ್ದ ಸಭೆಯಾಗಿತ್ತು. ಭಾರತ ಮತ್ತು ಮಧ್ಯಪ್ರಾಚ್ಯದ ಸಮಸ್ಯೆಗಳ ಪರಿಹಾರ ಹಾಗೂ ಶಾಂತಿ ಸ್ಥಾಪನೆ ಜವಾಬ್ದಾರಿಯನ್ನು ಆಸಿಮ್ ಮುನೀರ್ ಹೊತ್ತಿರುವ ಕಾರಣ ಅವರೇ, ಈ ಸಭೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾಗಿ ಆಸಿಫ್ ತಿಳಿಸಿದ್ದಾರೆ, (ಏಜೆನ್ಸೀಸ್).