ಈ ಬಗ್ಗೆ ಟ್ರೂತ್ ಸೋಶಿಯಲ್ ಪೋಸ್ಟ್ ಮಾಡಿರುವ ಟ್ರಂಪ್, ಅಮೆರಿಕ ಮತ್ತು ಯುಕ್ರೇನಿಯನ್ ಬಲವಾದ ಮತ್ತು ಸರಿಯಾದ ನಾಯಕತ್ವ ಇದ್ದಿದ್ದರೆ ರಷ್ಯಾ-ಯುಕ್ರೇನ್ ಯುದ್ಧ ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದಿದ್ದಾರೆ. ಯುಕ್ರೇನಲ್ಲಿರುವ ನಾಯಕತ್ವವು ನಮ್ಮ ಪ್ರಯತ್ನಗಳಿಗೆ ಯಾವುದೇ ಕೃತಜ್ಞತೆಯನ್ನು ತೋರಿಸಿಲ್ಲ. ಅಲ್ಲದೆ, ಯುರೋಪ್ ರಷ್ಯಾದಿಂದ ತೈಲವನ್ನು ಖರೀದಿಸುವುದನ್ನು ಮುಂದುವರೆಸಿದೆ ಎಂದು ಟ್ರಂಪ್ ಹೇಳಿದ್ದಾರೆ.