ಜ್ಯೋತಿಷಿ ರೀನಾ ಶರ್ಮಾ (Astrologer Reena Sharma) ಎನ್ನುವವರು ಇತ್ತೀಚೆಗೆ (6 ಅಕ್ಟೋಬರ್ 2025) ಪಾಡ್ಕಾಸ್ಟ್ವೊಂದರಲ್ಲಿ ಮಾತನಾಡಿರುವ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದ್ದು, ಅವರು ನುಡಿದಿರುವ ಭವಿಷ್ಯವಾಣಿ ಪ್ರಪಂಚವನ್ನೇ ಬೆಚ್ಚಿಸುವಂತಿದೆ.
ರೀನಾ ಶರ್ಮಾ ಅವರ ಪ್ರಕಾರ ಅಮೆರಿಕದ ಪ್ರಸ್ತುತ ಅಧ್ಯಕ್ಷರಿರುವ ಡೊನಾಲ್ಡ್ ಟ್ರಂಪ್ ದೇಶದ ಕೊನೆಯ ಅಧ್ಯಕ್ಷರಾಗಲಿದ್ದು, ನಂತರ ಅಮೆರಿಕ ಎನ್ನುವ ದೇಶವೇ ಇರುವುದಿಲ್ಲ ಎಂದು ಅವರು ಹೇಳಿದ್ದಾರೆ.
ಅಮೆರಿಕ ಸಹ ಯುಎಸ್ಎಸ್ಆರ್ ರೀತಿಯಲ್ಲಿ ಒಡೆದು ಹೋಗಿ ಈಗಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಕೊನೆಗೊಂಡು, ಆಂತರಿಕ ಕಲಹದಿಂದ ಎರಡು-ಮೂರು ಇತರೆ ದೇಶ ಅಥವಾ ಪ್ರಾಂತ್ಯಗಳಾಗಿ ಹೊರಹೊಮ್ಮುತ್ತವೆ. ಈ ಘಟನೆಯು 2027 ರಲ್ಲಿ ಘಟಿಸಲಿದೆ ಎನ್ನುವುದು ರೀನಾ ಶರ್ಮಾ ಅವರ ಭವಿಷ್ಯವಾಣಿಯಾಗಿದೆ.
ಭಾರತದ ಬಗ್ಗೆ ರೀನಾ ಶರ್ಮಾ ಹೇಳಿದ್ದೇನು?
ಕೇವಲ ಅಮೆರಿಕದ ಬಗ್ಗೆ ಮಾತ್ರವಲ್ಲ ಭಾರತದ ಭವಿಷ್ಯದ ಬಗ್ಗೆ ಮಾತನಾಡಿರುವ ರೀನಾ ಶರ್ಮಾ, ಭಾರತ ಸಂಯುಕ್ತ ರಾಷ್ಟ್ರ (United Nations) ದ ಭದ್ರತಾ ಮಂಡಳಿಯ ಖಾಯಂ ದೇಶವಾಗಿ ಹೊರಹೊಮ್ಮಿದೆ ಜೊತೆಗೆ ವಿಟೋ ಅಧಿಕಾರವನ್ನು ಸಹ ಪಡೆಯಲಿದೆ ಎಂದು ಹೇಳಿದ್ದಾರೆ.
ಹಾಗೆಯೇ ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪಕ್ಷ ವಿಜಯವನ್ನುಗಳಿಸಲಿದೆ, ಮಮತಾ ಬ್ಯಾನರ್ಜಿ ಚುನಾವಣೆಯಲ್ಲಿ ಸೋಲುತ್ತಾರೆ ಎಂದು ಹೇಳಿದ್ದ ಭವಿಷ್ಯವಾಣಿ ನಿಜವಾಗಿದೆ. ಹಾಗೆಯೇ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಸಿಎಂ ಸ್ಥಾನದಿಂದ ಕೆಳಗಿಳಿಯಲಿದ್ದಾರೆ ಎಂದು ರೀನಾ ಶರ್ಮಾ ಹೇಳಿದ್ದು, ಇದು ಎಷ್ಟು ನಿಜವಾಗುತ್ತದೆ ಎಂದು ಕಾದು ನೋಡಬೇಕಾಗಿದೆ.
ರೇಖಾ ಗುಪ್ತಾ ತನ್ನ ಆಡಳಿತಾವಧಿಯನ್ನು ಸಂಪೂರ್ಣವಾಗಿ ಮುಗಿಸುವುದಿಲ್ಲ. ಅವರು ಚುನಾವಣಾ ಪೂರ್ವದಲ್ಲಿಯೇ ತಮ್ಮ ಅಧಿಕಾರದಿಂದ ಕೆಳಗಿಳಿಯುತ್ತಾರೆ. ಇದಕ್ಕೆ ರಾಜಕೀಯ ಅಥವಾ ಅವರ ಆರೋಗ್ಯದಲ್ಲಿ ಉಂಟಾಗಲಿರುವ ವ್ಯತ್ಯಯ ಕಾರಣವಾಗಲಿದೆ ಎಂದು ಅವರು ಹೇಳಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ರೀನಾ ಗುಪ್ತಾ ಅವರ ಈ ಭವಿಷ್ಯವಾಣಿ ವಿಡಿಯೋ ಈಗ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆಗುತ್ತಿದ್ದು ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ಇಕೆ ಹೇಳಿರುವ ಕೆಲ ಭವಿಷ್ಯವಾಣಿಗಳು ಸರಿಯಾಗಿದೆ, ಟ್ರಂಪ್ನಿಂದ ಅಮೆರಿಕ ಕೊನೆಯಾಗುವುದನ್ನು ನಾನು ಕಾಯುತ್ತಿದ್ದೆನೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಈ ಭವಿಷ್ಯವಾಣಿ ಎಲ್ಲಾ ಸುಳ್ಳು, ಅಷ್ಟಿದ್ದರೆ ಇವರಿಗೆ ಕೋವಿಡ್ ಬರುವುದು, ಸುನಾಮಿ, ಪ್ರವಾಹ ಇವುಗಳ ಆಗಮನದ ಬಗ್ಗೆ ಮೊದಲೇ ತಿಳಿಯಬೇಕಲ್ಲ? ಎಂದು ಪ್ರಶ್ನಿಸಿದ್ದಾರೆ. ಅಬ್ಬಾ ಅಂತೂ ಟ್ರಂಪ್ ಎಂಬ ಹುಚ್ಚನಿಂದಲೇ ಅಮೆರಿಕ ನಾಶವಾಗುತ್ತದೆ ಎಂದು ಸಾಭಿತಾಯಿತು ಎಂದು ಮತ್ತೊಬ್ಬರು ಹೇಳಿದ್ದಾರೆ, (ಏಜನ್ಸೀಸ್).
ವಿ.ಸೂ: ಈ ಸುದ್ದಿಯನ್ನು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿ ರಚಿಸಲಾಗಿದ್ದು, ನಮ್ಮ ಸುದ್ದಿ ಸಂಸ್ಥೆ ಯಾವುದೇ ರೀತಿಯ ಭವಿಷ್ಯವಾಣಿಗೆ ಬೆಂಬಲ ನೀಡುವುದಿಲ್ಲ, ಹಾಗೂ ನಮಗೆ ಮತ್ತು ಭಿವಿಷ್ಯವಾಣಿಗೆ ಯಾವುದೇ ರೀತಿಯ ಸಂಬಂಧವಿರುವುದಿಲ್ಲ.