ಅಂದಹಾಗೆ, ಪ್ರಪಂಚದ ಎಲ್ಲ ಪ್ರಮುಖ ನಾಗರಿಕತೆಗಳು ಚಿನ್ನವನ್ನು ಶಕ್ತಿ, ಸೌಂದರ್ಯ, ಶುದ್ಧತೆ ಮತ್ತು ಸಾಧನೆಯ ಸಂಕೇತವೆಂದು ಗುರುತಿಸಿವೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ, ಈ ಜಗತ್ತಿನಲ್ಲಿ ಮೊದಲು ಚಿನ್ನವನ್ನು ಬಳಸಿದವರು ಯಾರೆಂಬುದನ್ನು ನೀವು ಎಂದಾದರೂ ಯೋಚನೆ ಮಾಡಿದ್ದೀರಾ? ಇಲ್ಲ ಎನ್ನುವುದಾದರೆ, ನಾವಿಂದು ಈ ಕುರಿತಾದ ಆಸಕ್ತಿದಾಯಕ ಮಾಹಿತಿಗಳನ್ನು ತಿಳಿದುಕೊಳ್ಳೋಣ.