ಗಂಡನ ದೇಹವನ್ನು ಮಣ್ಣಿನಲ್ಲಿ ಮುಚ್ಚಿ ತಲೆಗೆ ಹಾಲಿನ ಅಭಿಷೇಕ ಮಾಡಿದ ಪತ್ನಿ! ಅಚ್ಚರಿ ಕಾರಣ ಹೀಗಿದೆ...VIRAL VIDEO

ಗಂಡನ ಮುಂಡವನ್ನು ಮಣ್ಣಿನಲ್ಲಿ ಹೂತು ರುಂಡಕ್ಕೆ ಹಾಲಿನ ಅಭಿಷೇಕ ಮಾಡಿದ ಪತ್ನಿ ( VIRAL VIDEO )
ಗಂಡನ ಮುಂಡವನ್ನು ಮಣ್ಣಿನಲ್ಲಿ ಹೂತು ರುಂಡಕ್ಕೆ ಹಾಲಿನ ಅಭಿಷೇಕ ಮಾಡಿದ ಪತ್ನಿ ( VIRAL VIDEO )
Published on

ಪ್ರಮುಖ ಮುಖ್ಯಾಂಶಗಳು

  • ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ
  • ಕೆಲವು ವಿಡಿಯೋಗಳು ವಿಶೇಷ ಅಥವಾ ವಿಚಿತ್ರ ಕಾರಣಗಳಿಗೆ ಎಲ್ಲರ ಗಮನ ಸೆಳೆದು ವೈರಲ್​ ಆಗಿಬಿಡುತ್ತವೆ
  • ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ
VIRAL VIDEO :  ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ವಿಡಿಯೋಗಳು ಹರಿದಾಡುತ್ತಲೇ ಇರುತ್ತವೆ. ಆದರೆ, ಕೆಲವೇ ಕೆಲವು ವಿಡಿಯೋಗಳು ವಿಶೇಷ ಅಥವಾ ವಿಚಿತ್ರ ಕಾರಣಗಳಿಗೆ ಎಲ್ಲರ ಗಮನ ಸೆಳೆದು, ಕ್ಷಣ ಮಾತ್ರದಲ್ಲಿ ವೈರಲ್​ ಆಗಿಬಿಡುತ್ತವೆ. ಅಂಥದ್ದೇ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ವೈರಲ್​ ಆಗುತ್ತಿರುವ ವಿಡಿಯೋವೊಂದರಲ್ಲಿ, ಓರ್ವ ಮಹಿಳೆ ತನ್ನ ಗಂಡನ ಮುಂಡವನ್ನು ಮಣ್ಣಿನಿಂದ ಮುಚ್ಚಿದ್ದಾಳೆ. ಆತನ ರುಂಡ ಮಾತ್ರ ಗೋಚರಿಸುತ್ತದೆ. ಗಂಡನ ತಲೆಯ ಮೇಲೆ ಮತ್ತು ಅದರ ಸುತ್ತಲೂ ಹೂವುಗಳನ್ನು ಹಾಕಿ, ತಲೆಗೆ ಹಾಲಿನ ಅಭಿಷೇಕ ಮಾಡುತ್ತಾಳೆ. ಈ ವೇಳೆ ಶಿವನನ್ನು ಸ್ಮರಿಸುತ್ತಾ 'ಹರ ಹರ ಮಹಾದೇವ' ಎಂದು ಜಪಿಸುತ್ತಿದ್ದಳು. 
ಅಂದಹಾಗೆ, ಆ ಮಹಿಳೆ ತನ್ನ ಗಂಡನ ತಲೆಯನ್ನೇ ಶಿವಲಿಂಗವೆಂದು ಪರಿಗಣಿಸಿ ಪೂಜೆ ಮಾಡಿರುವಂತೆ ತೋರುತ್ತದೆ. ಫೆ.15ರಂದು ಶಿವರಾತ್ರಿ ಹಿನ್ನೆಲೆಯಲ್ಲಿ ಅದೇ ದಿನ ಸೆರೆಹಿಡಿದಿರುವ ವಿಡಿಯೋ ಎನ್ನಲಾಗಿದೆ. ಸದ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. 
ಇನ್ನು ಪತ್ನಿಯ ಈ ವಿಚಿತ್ರ ಪೂಜೆಗೆ ಗಂಡನು ಕೂಡ ಸಹಕರಿಸಿದ್ದಾನೆ. ತನ್ನ ಪತ್ನಿ, ತಲೆಗೆ ಅಭಿಷೇಕ ಮಾಡುವುದನ್ನು ಪತಿ ಆನಂದಿಸುತ್ತಿರುವ ದೃಶ್ಯ ವೈರಲ್​ ವಿಡಿಯೋದಲ್ಲಿದೆ. ಆಕೆಯನ್ನು ಬಳಿ ಬೇಡ ಅನ್ನೋ ಒಂದೇ ಒಂದು ಮಾತು ಕೂಡ ಪತಿ ಆಡಲಿಲ್ಲ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ವೈರಲ್ ಆಗಿದೆ. ಇದನ್ನು ನೋಡಿ ನೆಟ್ಟಿಗರು ತಮ್ಮ ಹುಬ್ಬೇರಿಸಿದ್ದಾರೆ. 
ಇನ್ನು ಈ ವಿಡಿಯೋಗೆ ಸಾಕಷ್ಟು ಕಾಮೆಂಟ್​ಗಳು ಹರಿದುಬಂದಿವೆ. ಇದು ಒಂದು ಭಕ್ತಿಯೇ ಎಂದು ಕೆಲವರು ಟೀಕಿಸಿದ್ದಾರೆ. ಇನ್ನು ಕೆಲವರು ಗಂಡನಾದವು ಪತ್ನಿಯಿಂದ ಇನ್ನೂ ಏನೆನೆಲ್ಲ ಸಹಿಸಿಕೊಳ್ಳಬೇಕೋ ಎಂದು ನಗೆಚಟಾಕಿ ಹಾರಿಸಿದ್ದಾರೆ. ಓರ್ವ ಬಳಕೆದಾರರು ಇದು ಮೂರ್ಖತನದ ಪರಮಾವಧಿ ಎಂದು ಕಿಡಿಕಾರಿದ್ದಾರೆ. ಆದರೆ, ಕೆಲವರು ಮಹಿಳೆಯ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದ್ದು, ಈ ದೇಶದ ಪ್ರತಿಯೊಂದು ಜನಾಂಗ ಮತ್ತು ಧರ್ಮಕ್ಕೂ ತನ್ನದೇ ಆದ ಪದ್ಧತಿಗಳಿವೆ. ಅವರವರ ಪದ್ಧತಿಗಳನ್ನು ಗೌರವಿಸಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net