ಸಾಯ್ತೀನಿ ಅಂದ್ಕೊಂಡಿದ್ದೆ, ಆ ಒಬ್ಬ ವ್ಯಕ್ತಿ ಎಲ್ಲವನ್ನೂ ಬದಲಾಯಿಸಿಬಿಟ್ಟ!...ಮೊದಲ ಬಾರಿ ರೋಚಕ ಸಂಗತಿ ಬಿಚ್ಚಿಟ್ಟ ಮಚ್ಚಾರ್! | Captain Smit Machchhar

Captain Smit Machchhar: ಫ್ಲೈದುಬೈ ವಿಮಾನದಲ್ಲಿ ನಡೆದ ಭಯಾನಕ ಹಲ್ಲೆ ಪ್ರಕರಣದ ಕುರಿತು ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಸ್ಕೈ ನ್ಯೂಸ್ ಅರೇಬಿಯಾಗೆ ನೀಡಿದ ಸಂದರ್ಶನದಲ್ಲಿ ರೋಚಕ ವಿವರಗಳನ್ನು ಹಂಚಿಕೊಂಡಿದ್ದು, ಪ್ರಾಣ ಉಳಿಸಿಕೊಳ್ಳಲು ನಡೆಸಿದ ಈ ಹೋರಾಟ, ಆ ಕ್ಷಣದ ಗೊಂದಲ, ಸಹೋದ್ಯೋಗಿಗಳ ಸಮಯಪ್ರಜ್ಞೆ ಮತ್ತು ಪ್ರಯಾಣಿಕರ ಸುರಕ್ಷತೆಯ ಕುರಿತಾದ ಅವರ ಅನುಭವಗಳು ಮೈಯೆಲ್ಲಾ ರೋಮಾಂಚನಗೊಳಿಸುವಂತಿವೆ.
ಮೊದಲ ಬಾರಿ ರೋಚಕ ಸಂಗತಿ ಬಿಚ್ಚಿಟ್ಟ ಕ್ಯಾಪ್ಟನ್
ಮೊದಲ ಬಾರಿ ರೋಚಕ ಸಂಗತಿ ಬಿಚ್ಚಿಟ್ಟ ಕ್ಯಾಪ್ಟನ್
Published on: 

Captain Smit Machchhar: ಫ್ಲೈದುಬೈ ವಿಮಾನದಲ್ಲಿ ನಡೆದ ಭಯಾನಕ ಹಲ್ಲೆ ಪ್ರಕರಣದ ಕುರಿತು ಫ್ಲೈದುಬೈ ವಿಮಾನದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರು ಸ್ಕೈ ನ್ಯೂಸ್ ಅರೇಬಿಯಾಗೆ ನೀಡಿದ ಸಂದರ್ಶನದಲ್ಲಿ ರೋಚಕ ವಿವರಗಳನ್ನು ಹಂಚಿಕೊಂಡಿದ್ದು, ಪ್ರಾಣ ಉಳಿಸಿಕೊಳ್ಳಲು ನಡೆಸಿದ ಈ ಹೋರಾಟ, ಆ ಕ್ಷಣದ ಗೊಂದಲ, ಸಹೋದ್ಯೋಗಿಗಳ ಸಮಯಪ್ರಜ್ಞೆ ಮತ್ತು ಪ್ರಯಾಣಿಕರ ಸುರಕ್ಷತೆಯ ಕುರಿತಾದ ಅವರ ಅನುಭವಗಳು ಮೈಯೆಲ್ಲಾ ರೋಮಾಂಚನಗೊಳಿಸುವಂತಿವೆ.

ಸಂದರ್ಶನದಲ್ಲಿ ಮಾತನಾಡಿದ ಕ್ಯಾಪ್ಟನ್ ಮಚ್ಚಾರ್ ಅವರನ್ನು ತಾವು ಬದುಕಿ ಉಳಿಯುವುದಿಲ್ಲ ಎಂದು ಎಂದಾದರೂ ಅನಿಸಿತ್ತೇ ಎಂದು ಪ್ರಶ್ನಿಸಿದಾಗ, ಹೌದು, ಅಂಥದ್ದೊಂದು ಕ್ಷಣ ಬಂದಿತ್ತು ಎಂದು ಉತ್ತರಿಸಿದ್ದಾರೆ. ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ತಲೆಯ ಹಿಂಭಾಗಕ್ಕೆ ಅತ್ಯಂತ ಬಲವಾದ ಪೆಟ್ಟು ಬಿದ್ದಿತು. ಆಘಾತವು ಎಷ್ಟು ತೀವ್ರವಾಗಿತ್ತೆಂದರೆ, ಅವರು ಪ್ರಜ್ಞೆ ತಪ್ಪಿ ಬೀಳುವ ಹಂತಕ್ಕೆ ತಲುಪಿದ್ದರು. ಆ ಸಂದರ್ಭದಲ್ಲಿ ಸ್ಮಿತ್, ಏನಾದರೂ ಮಾಡು, ನೀನು ಹೀಗೆ ಸಾಯಲು ಸಾಧ್ಯವಿಲ್ಲ ಎಂದು ತಮಗೆ ತಾವೇ ಧೈರ್ಯ ಹೇಳಿಕೊಂಡಿದ್ದಾಗಿ ಸ್ಮರಿಸಿದ್ದಾರೆ. ಸಾವನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದಿದ್ದರೂ, ಏನಾದರೂ ಮಾಡು, ಇಲ್ಲದಿದ್ದರೆ... ಎಂಬ ಆಲೋಚನೆ ಆ ಕ್ಷಣದಲ್ಲಿ ತನ್ನ ಮನಸ್ಸಿನಲ್ಲಿ ಓಡುತ್ತಿತ್ತು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ನನ್ನ ಆದರ್ಶ ಸ್ಮಿತ್ ಮಚ್ಚಾರ್ ಹೊರತು ಧ್ರುವ್​ ರಾಠಿ ಅಲ್ಲ: ಉದ್ಧವ್​ ಬಣಕ್ಕೆ ರಾಜೀನಾಮೆ ನೀಡಿದ ಆನಂದ್ ದುಬೆ! | Anand Dubey

ಪ್ರಜ್ಞೆ ತಪ್ಪುವ ಹಂತದಲ್ಲಿದ್ದ ಭೀಕರ ಕ್ಷಣಗಳು!

ಆ ನಂತರದ ನೆನಪುಗಳು ಕೇವಲ ಗೊಂದಲ ಮತ್ತು ಗದ್ದಲದಿಂದ ಕೂಡಿದ್ದವು. ವಿಮಾನದ ಬಾಗಿಲು ತೆರೆದಾಗ ಸಂಪೂರ್ಣವಾಗಿ ವಿಭಿನ್ನವಾದ ದೃಶ್ಯವಿತ್ತು. ತಾವು ಮುಖ ಕೆಳಗೆ ಮಾಡಿ ಬಿದ್ದಿರುವುದನ್ನು ಮತ್ತು ಸುತ್ತಲೂ ಜನ ಕಿರುಚಾಡುತ್ತಿದ್ದ ಆತಂಕದ ವಾತಾವರಣವನ್ನು ಅವರು ನೆನಪಿಸಿಕೊಂಡಿದ್ದಾರೆ. ಆ ಕಠಿಣ ಪರಿಸ್ಥಿತಿಯಲ್ಲಿ ತನ್ನ ಪ್ರಾಣದ ಜೊತೆಗೆ ವಿಮಾನದಲ್ಲಿದ್ದ ಪ್ರಯಾಣಿಕರ ಸುರಕ್ಷತೆಯೂ ತನ್ನ ಮನಸ್ಸಿನಲ್ಲಿ ಭಾರವಾಗಿ ಕಾಡುತ್ತಿತ್ತು ಎಂದು ಅವರು ವಿವರಿಸಿದ್ದಾರೆ.

ಈ ಸಂಕಷ್ಟದ ಸಮಯದಲ್ಲಿ ಜೊತೆಗಿದ್ದ ಸಹೋದ್ಯೋಗಿಗಳು ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡಿದರು. ಒಬ್ಬ ಸಹೋದ್ಯೋಗಿ ಭಯದ ವಾತಾವರಣದಲ್ಲಿ ದೇವರ ಮೊರೆಹೋಗಿ ಪ್ರಾರ್ಥನೆ ಮಾಡಲು ಶುರು ಮಾಡಿದರು. ಆ ಸಮಯದಲ್ಲಿ ಆ ಕಡೆ ನೋಡಲು ತಮಗೆ ಇಷ್ಟವಿರಲಿಲ್ಲ ಮತ್ತು ಆ ಕ್ಷಣದ ಪಾವಿತ್ರ್ಯತೆಗೆ ಗೌರವ ನೀಡಲು ಬಯಸಿದ್ದೆ ಎಂದು ಮಚ್ಚಾರ್ ತಿಳಿಸಿದ್ದಾರೆ.

Also Read
ನೀವು ಭಾರತ, ಇಸ್ರೇಲ್ ಹಾಗೂ ಜಗತ್ತಿನ ನೈಜ ಹೀರೋ!...ಮಚ್ಚಾರ್​​ ಸ್ವಾಗತಕ್ಕೆ ಜೆರುಸಲೆಮ್‌ ಎದುರು ನೋಡುತ್ತಿದೆ ಎಂದ ಇಸ್ರೇಲ್ ಅಧ್ಯಕ್ಷ | Smit Machchhar
ಮೊದಲ ಬಾರಿ ರೋಚಕ ಸಂಗತಿ ಬಿಚ್ಚಿಟ್ಟ ಕ್ಯಾಪ್ಟನ್

ಆದರೆ, ಇನ್ನೊಬ್ಬ ಸಹೋದ್ಯೋಗಿ ತೋರಿದ ಸಾಹಸ ಮತ್ತು ಸಮಯಪ್ರಜ್ಞೆ ಕ್ಯಾಪ್ಟನ್ ಮಚ್ಚಾರ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಆಪತ್ತಿನ ಸಮಯದಲ್ಲಿ ತಕ್ಷಣವೇ ಎಚ್ಚೆತ್ತುಕೊಂಡು ವಿಮಾನದ ನಿಯಂತ್ರಣವನ್ನು (ಕಂಟ್ರೋಲ್) ತನ್ನ ಕೈಗೆ ತೆಗೆದುಕೊಂಡು ಎಲ್ಲರ ಪ್ರಾಣ ಉಳಿಸಿದ ಸಹೋದ್ಯೋಗಿಯ ಕಾರ್ಯವನ್ನು ಮಚ್ಚಾರ್ ಕೊಂಡಾಡಿದ್ದಾರೆ. ನನ್ನ ಮತ್ತೊಬ್ಬ ಸಹೋದ್ಯೋಗಿ ವಿಮಾನದ ನಿಯಂತ್ರಣವನ್ನು ವಹಿಸಿಕೊಂಡು ಅಂದು ಪರಿಸ್ಥಿತಿಯನ್ನು ಕಾಪಾಡಿದ ಆ ಕ್ಷಣವನ್ನು ನಾನು ಸಾಯುವವರೆಗೂ ಮರೆಯುವುದಿಲ್ಲ ಎಂದು ಅವರು ಕೃತಜ್ಞತೆಯಿಂದ ಸ್ಮರಿಸಿದ್ದಾರೆ.

ಜೀವನದ ಮರೆಯಲಾಗದ ಅನುಭವ!

ಈ ಭಯಾನಕ ಘಟನೆಯು ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರ ಜೀವನದ ಮೇಲೆ ಗಾಢವಾದ ಪ್ರಭಾವ ಬೀರಿದೆ. ಆ ಕ್ಷಣದಲ್ಲಿದ್ದ ಭೀತಿ, ಅನಿಶ್ಚಿತತೆ ಮತ್ತು ಜೊತೆಗಿದ್ದವರ ಸಮಯಪ್ರಜ್ಞೆ ಅವರ ಜೀವಮಾನವಿಡೀ ನೆನಪಿನಲ್ಲಿ ಉಳಿಯಲಿದೆ. ಕಷ್ಟದ ಸಮಯದಲ್ಲಿ ಜೊತೆಯಾಗಿ ನಿಂತು ಸಂಕಷ್ಟದಿಂದ ಪಾರು ಮಾಡಿದ ಆ ದಿನವನ್ನು ಮತ್ತು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕಾಪಾಡಲು ಪಟ್ಟ ಶ್ರಮವನ್ನು ಅವರು ಸ್ಮರಿಸಿಕೊಂಡಿದ್ದಾರೆ(ಏಜೆನ್ಸೀಸ್).

Related Stories

The moments of the terrifying attack inside the cockpit of the Flydubai flight, and Captain Smith Machar’s escape from the brink of death.
ಭೀಕರ ಪರಿಸ್ಥಿತಿಯಲ್ಲಿ ಮಗನ ಒಳಗೆ ಕೆಲಸ ಮಾಡಿದ್ದ ಆ ರಹಸ್ಯ ಶಕ್ತಿ ಯಾವುದು...? ಸಾಹಸಿ ಪೈಲಟ್ ತಂದೆಯ ಹೆಮ್ಮೆಯ ನುಡಿಗಳು ಹೀಗಿವೆ! | Smit Machchhar Father
ದೇಶದ ಹೊಸ ಹೀರೋ ಕ್ಯಾಪ್ಟನ್ ಸ್ಮಿತ್ ಉಪನಾಮದ ಆಸಕ್ತಿದಾಯಕ ಹಿನ್ನೆಲೆ ಇಲ್ಲಿದೆ!
Captain Smith Machar's Flydubai cockpit feat and praise from Israeli Prime Minister Netanyahu.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net