ಆದರೆ, ಈ ಕದನ ವಿರಾಮದ ನಡುವೆಯೇ ಬುಧವಾರ ಇರಾನ್ ಪಡೆಗಳು ಮೂರು ಹಡಗುಗಳ ಮೇಲೆ ಗುಂಡಿನ ದಾಳಿ ನಡೆಸಿ, ಎರಡು ಹಡಗುಗಳನ್ನು ವಶಪಡಿಸಿಕೊಂಡಿರುವುದು ಅಮೆರಿಕವನ್ನು ಕೆರಳಿಸಿದೆ. ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆಯ ಪ್ರಕಾರ, ಇರಾನ್ ಅಧಿಕೃತವಾಗಿ ಯಾವುದೇ ಕದನ ವಿರಾಮ ವಿಸ್ತರಣೆಗೆ ಒಪ್ಪಿಗೆ ಸೂಚಿಸಿಲ್ಲ ಎಂಬುದು ಮತ್ತೊಂದು ಗೊಂದಲಕ್ಕೆ ಕಾರಣವಾಗಿದೆ.