ಕ್ಯಾಲಿಫೋರ್ನಿಯಾದ ಹೈಟೆಕ್ ಕಂಪನಿಗಳಲ್ಲಿನ ನೇಮಕಾತಿ ಪ್ರಕ್ರಿಯೆಯನ್ನು ಟೀಕಿಸಿದ ಸ್ಯಾವೇಜ್, ಅಲ್ಲಿ ಶ್ವೇತವರ್ಣೀಯ ಪುರುಷರು ಕೆಲಸ ಪಡೆಯುವ ಸಾಧ್ಯತೆಯೇ ಕಡಿಮೆಯಾಗಿದ್ದು, ಕಂಪನಿಗಳ ಎಲ್ಲಾ ಆಂತರಿಕ ಕಾರ್ಯವಿಧಾನಗಳನ್ನು ಭಾರತೀಯರು ಮತ್ತು ಚೀನಿಯರೇ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಿಎನ್ಬಿಸಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ವಿಶ್ವದ ಯಾವುದೇ ದೇಶ ಜನ್ಮಸಿದ್ಧ ಪೌರತ್ವ ನೀಡುವುದಿಲ್ಲ, ಅಮೆರಿಕ ಮಾತ್ರ ನೀಡುತ್ತಿದೆ ಎಂದು ಹೇಳಿಕೆ ನೀಡಿದ್ದರು. ಆದರೆ ವಾಸ್ತವದಲ್ಲಿ ಕೆನಡಾ, ಮೆಕ್ಸಿಕೊ ಸೇರಿದಂತೆ ಸುಮಾರು 36 ದೇಶಗಳಲ್ಲಿ ಈ ಕಾನೂನು ಜಾರಿಯಲ್ಲಿದೆ. 2025ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ಟ್ರಂಪ್ ಜನ್ಮಸಿದ್ಧ ಪೌರತ್ವ ನಿಲ್ಲಿಸುವ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿದ್ದರು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಟ್ರಂಪ್ ವರ್ಸಸ್ ಬಾರ್ಬರಾ ಪ್ರಕರಣದ ವಿಚಾರಣೆ ನಡೆಯುತ್ತಿದೆ.