

ಪ್ರಮುಖ ಮುಖ್ಯಾಂಶಗಳು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡ್ನಿ ನ್ಯಾಯಾಲಯಕ್ಕೆ ಹಾಜರಾದ ವಾರ್ನರ್ ತಾವು ಮದ್ಯ ಸೇವಿಸಿ ಕಾರನ್ನು ಚಾಲನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ವಾರ್ನರ್ ಅವರ ತಪ್ಪೊಪ್ಪಿಗೆಯನ್ನು ದಾಖಿಲಿಸಿಕೊಂಡ ನ್ಯಾಯಾಲಯ 1,500 ಆಸ್ಟ್ರೇಲಿಯನ್ ಡಾಲರ್ (ಸುಮಾರು ಒಂದು ಲಕ್ಷದ ಎರಡು ಸಾವಿರ ರೂಪಾಯಿ) ದಂಡವನ್ನು ವಿಧಿಸಿದ್ದು, ಆಲ್ಕೋಹಾಲ್ ಇಂಟರ್ಲಾಕ್ ಡಿವೈಸ್ ಅನ್ನು ತಮ್ಮ ಕಾರಿಗೆ ಇನ್ಸ್ಟಾಲ್ ಮಾಡಿಕೊಳ್ಳುವಂತೆ ನಿರ್ದೇಶಿಸಿದೆ ಎಂದು ತಿಳಿದು ಬಂದಿದೆ.