ಕೈಗಳು ಛಿದ್ರ ಆಗುವಷ್ಟು ನೋವು! 2 ಬಾರಿ ವಿಷದ ಇಂಜೆಕ್ಷನ್ ಕೊಟ್ರೂ ಬದುಕುಳಿದ ಕೈದಿ ಕ್ರಿಸ್ಟಾ ಪೈಕ್​ ಭಾವುಕ | Christa Pike

Christa Pike
ಕೈಗಳು ಛಿದ್ರ ಆಗುವಷ್ಟು ನೋವು! 2 ಬಾರಿ ವಿಷದ ಇಂಜೆಕ್ಷನ್ ಕೊಟ್ರೂ ಬದುಕುಳಿದ ಕೈದಿ ಕ್ರಿಸ್ಟಾ ಪೈಕ್​ ಭಾವುಕ | Christa Pike
Published on: 

Christa Pike: ಅಮೆರಿಕದ ಟೆನ್ನೆಸ್ಸೀ ರಾಜ್ಯದಲ್ಲಿ ಮಹಿಳೆಗೆ ವಿಧಿಸಲಾದ ಮರಣದಂಡನೆ ಶಿಕ್ಷೆಯು ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಭಾರಿ ಸಂಚಲನ ಸೃಷ್ಟಿಸಿದೆ. ಸ್ನೇಹಿತನ ಭೀಕರ ಕೊಲೆ ಪ್ರಕರಣದಲ್ಲಿ ಅಪರಾಧಿಯಾಗಿರುವ ಕ್ರಿಸ್ಟಾ ಪೈಕ್​ (50)ಗೆ ಎರಡು ಬಾರಿ ಮಾರಣಾಂತಿಕ ವಿಷದ ಇಂಜೆಕ್ಷನ್ ಕೊಟ್ಟರೂ ಸಹ ಬದುಕುಳಿದ ಅಪರೂಪದಲ್ಲೇ ಅಪರೂಪದ ಘಟನೆಯು ಸದ್ಯ ಪವಾಡ, ಅಚ್ಚರಿ ಎನ್ನುವಂತಾಗಿದೆ. ಸಾವಿನ ದವಡೆಯಿಂದ ಬದುಕುಳಿದ ಕ್ರಿಸ್ಟಾ ಇದೇ ಮೊದಲ ಬಾರಿಗೆ ತುಟಿ ಬಿಚ್ಚಿದ್ದಾರೆ.

ಈ ವರ್ಷದ ಅಕ್ಟೋಬರ್​ 08ರಂದು ವಿಧಿಸಿದ ಮರಣದಂಡನೆ ಶಿಕ್ಷೆಯ ಪ್ರಕ್ರಿಯೆಯಲ್ಲಿ ಎರಡನೇ ಬಾರಿಗೆ ವಿಷದ ಇಂಜೆಕ್ಷನ್ ನೀಡಿದರೂ ಆಕೆ ಸಾವನ್ನಪ್ಪಲಿಲ್ಲ. ಈ ಸಮಯದಲ್ಲಿ, ಪೈಕ್​ಳನ್ನು ಮತ್ತೆ ಆಸ್ಪತ್ರೆಗೆ ಕರೆದುಕೊಂಡ ಹೋದ ಕೈದಿಯ ಪರ ವಕೀಲರು ಮತ್ತು ಪೊಲೀಸರಿಗೆ ಮಹಿಳೆಗೆ ಮರಳಿದ ಪ್ರಜ್ಞೆ ಕಂಡು ಅಚ್ಚರಿ ಉಂಟಾಯಿತು. ಈ ಕುರಿತಂತೆ ಕೈದಿಯ ಪರ ವಕೀಲರು ಮಾಧ್ಯಮಗಳ ಮುಂದೆ ಪೈಕ್​ ಬದುಕುಳಿದಿದ್ದಾರೆ ಎಂದು ಸ್ಪಷ್ಟಪಡಿಸಿದರು. ಕಳೆದ ವಾರಗಳಲ್ಲಿ ಆಸ್ಪತ್ರೆಯಲ್ಲಿ ನಿರಂತವಾಗಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ ಇದೀಗ ತಮ್ಮ ವಕೀಲರ ಬಳಿ ದೇಹದಲ್ಲಿ ಉಂಟಾಗುತ್ತಿರುವ ನೋವಿನ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.

ಅಂದು ನಾನು ಮತ್ತೇ ಬದುಕುಳಿದೆ. ಆದರೆ, ಆ ರಾತ್ರಿಯಿಂದ ನಾನು ಅನುಭವಿಸಿದ ಸಂಕಟ ಹೇಳತೀರದು. ನನ್ನ ಇಡೀ ದೇಹ ವಿಪರೀತ ನೋವಿನಿಂದ ಕೂಡಿದೆ. ನನ್ನ ಕೈಗಳು, ಬೆರಳುಗಳು ಮತ್ತು ಗಂಟಲಿನಲ್ಲಿ ತಾಳಲಾರದ ಬೇನೆ. ನನಗೆ ಇನ್ನೂ ಮಾತನಾಡಲು ತೊಂದರೆ ಇದೆ. ಈ ನೋವು ದೈಹಿಕ ಮಾತ್ರವಲ್ಲ, ನನ್ನ ಮನಸ್ಸು ಮತ್ತು ಆತ್ಮದಲ್ಲಿ ಆಳವಾಗಿ ಹೋಗಿದೆ. ಕೈ ಮತ್ತು ತೋಳುಗಳು ಸ್ಫೋಟಗೊಳ್ಳುವಂತೆ ಭಾಸವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಪೈಕ್​ ಪರ ವಕೀಲಯರು ಆಕೆಯ ಹೇಳಿಕೆಯನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದ್ದಾರೆ.

Also Read
ರಕ್ತ ಹರಿದು ಉಸಿರು ಚೆಲ್ಲುವವರೆಗೂ ಕುಣಿಸುತ್ತಿತ್ತು ಈ ಕಾಯಿಲೆ! ಕೋವಿಡ್​ಗಿಂತಲೂ ಮಹಾಮಾರಿ 1518ರ ಈ ಡ್ಯಾನ್ಸಿಂಗ್​ ಪ್ಲೇಗ್ | Dancing plague
Christa Pike

"ನಾನು ಸಾಯೋದಕ್ಕೆ ರೆಡಿ ಇದ್ದೇನೆ. ನಾನೇಕೆ ಬದುಕುಳಿದೆ ಎಂಬುದು ನನಗೆ ಗೊತ್ತಿಲ್ಲ. ಅಧಿಕಾರಿಗಳ ವೈಫಲ್ಯದಿಂದ ಇಂದು ಅನೇಕರು ಒತ್ತಡದ ಪರಿಸ್ಥಿತಿಗೆ ಸಿಲುಕಿರುವುದನ್ನು ನೋಡಿ ನನಗೆ ತುಂಬ ಬೇಸರವಾಗಿದೆ. ನನ್ನ ಆಲೋಚನೆಗಳು ಮೃತರ ಕುಟುಂಬದೊಂದಿಗೆ ಇದೆ. ಅವರು ಅನುಭವಿಸಿದ ನೋವು ಮತ್ತು ನಷ್ಟವನ್ನು ನಾನಿನ್ನು ಮರೆತಿಲ್ಲ. ನನ್ನ ದೇಹ ಮಾತ್ರವಲ್ಲ, ಮಿದುಳು ಮತ್ತು ಮನಸ್ಸು ಎರಡೂ ಸಂಕಟ ಅನುಭವಿಸುತ್ತಿವೆ" ಎಂದು ಪೈಕ್ ಹೇಳಿಕೊಂಡಿದ್ದಾರೆ.

"ಎರಡೂ ಬಾರಿ ಬದುಕುಳಿದ ಪೈಕ್​ಗೆ ಮರಣದಂಡನೆಯನ್ನು ರದ್ದುಗೊಳಿಸಿಲ್ಲ. ಆಕೆಯ ವಕೀಲರು ಮಹಿಳೆಗೆ ವಿಧಿಸಿರುವ ಮರಣದಂಡನೆ ಶಿಕ್ಷೆಯನ್ನು ಜೈಲಿನಲ್ಲೇ ಕಳೆಯುವಂತೆ ಬದಲಾಯಿಸುವಂತೆ ನನ್ನನ್ನು ಕೇಳಿದ್ದಾರೆ. ಆದರೆ, ನ್ಯಾಯಾಲಯಗಳು ಯಾವ ರೀತಿಯಲ್ಲಿ ಪರಿಗಣಿಸಲಿದೆ ಅಥವಾ ಆಕೆಗೆ ನೀಡಿರುವ ಶಿಕ್ಷೆಯು ಹಾಗೆಯೇ ಉಳಿಯಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ" ಎಂದು ರಿಪಬ್ಲಿಕನ್ ಗವರ್ನರ್ ಬಿಲ್ ಲೀ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಬದುಕುಳಿದಿದ್ದು ಹೇಗೆ?

ಪೆಂಟೊಬಾರ್ಬಿಟಲ್ ಎಂಬ ವಿಷಕಾರಿ ಇಂಜೆಕ್ಷನ್ ಆಕೆಯನ್ನು ಎರಡೆರೆಡು ಬಾರಿ ಕೊಟ್ಟರೂ ಏಕೆ ಕೊಲ್ಲಲಿಲ್ಲ ಎಂಬ ಪ್ರಶ್ನೆಯು ತೀವ್ರವಾಗಿ ಕಾಡಲಾರಂಭಿಸಿದೆ. ನರಮಂಡಲದ ಮೇಲೆ ಪರಿಣಾಮ ಬೀರುವ ಈ ಇಂಜೆಕ್ಷನ್, ಪೈಕ್ ವಿಷಯದಲ್ಲಿ ಏಕೆ ಕೆಲಸ ಮಾಡಲಿಲ್ಲ. ಆ ಔಷಧವು ಆಕೆಯ ದೇಹವನ್ನು ಪ್ರವೇಶಿಸಿದ್ದೇ ಸುಳ್ಳಾ? ಅಥವಾ ಒಳಗೆ ಹೋಗಿದ್ದೇ ಆದರೂ ಸಾಕಷ್ಟು ಪ್ರಮಾಣದಲ್ಲಿ ರಕ್ತನಾಳಗಳನ್ನು ಸೇರಲಿಲ್ಲವೇ? ಎಂಬ ಬಗ್ಗೆ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.

ಇಂಜೆಕ್ಷನ್ ನರಕ್ಕೆ ತಲುಪಿಲ್ಲ?

ಅರಿವಳಿಕೆ ತಜ್ಞ ಡಾ. ಜೋಯಲ್ ಗಿವೋಟ್ ಪ್ರಕಾರ, ಪೈಕ್ ಅವರಿಗೆ ನೀಡಲಾದ ಪೆಂಟೊಬಾರ್ಬಿಟಲ್ ಪ್ರಮಾಣವು ಸರಿಯಾಗಿ ರಕ್ತನಾಳಗಳನ್ನು ಸೇರಿದ್ದರೆ ಸಾಮಾನ್ಯವಾಗಿ ಮಾರಣಾಂತಿಕವಾಗುತ್ತಿತ್ತು. ಆದರೆ, ಪೈಕ್​ಳ ಕೈಗಳಲ್ಲಿ ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ತೀವ್ರವಾದ ಊತ ಮತ್ತು ಸುಟ್ಟಗಾಯಗಳು ಕಂಡುಬಂದಿವೆ. ಗುಳ್ಳೆಗಳು ಎದ್ದಿತ್ತು. ಔಷಧವು ನರಗಳ ಬದಲಿಗೆ ಸುತ್ತಮುತ್ತಲಿನ ಅಂಗಾಂಶವನ್ನು ಪ್ರವೇಶಿಸಿದೆ ಎಂಬುದನ್ನು ಇದು ಸೂಚಿಸುತ್ತದೆ. ಅದು ನರಗಳ ಬದಲಿಗೆ ಅಂಗಾಂಶವನ್ನು ಪ್ರವೇಶಿಸಿದ್ದರೆ, ಅದು ತಕ್ಷಣವೇ ರಕ್ತನಾಳಗಳನ್ನು ಸೇರುವುದಿಲ್ಲ ಮತ್ತು ಸಾಯಲು ಬಿಡುವುದಿಲ್ಲ ಎಂದಿದ್ದಾರೆ.

Also Read
ಶುಕ್ರವಾರವೇ ಸಿನಿಮಾಗಳು ರಿಲೀಸ್​ ಆಗುವುದೇಕೆ? ಚಿತ್ರೋದ್ಯಮದ ಈ ಲಾಜಿಕ್​ ಹಿಂದಿದೆ ಸಖತ್​ ಇಂಟ್ರೆಸ್ಟಿಂಗ್​ ಸ್ಟೋರಿ | Friday Release
Christa Pike

ಕ್ರಿಸ್ಟಾ ಪೈಕ್​ಗಿದ್ದ ಸಮಸ್ಯೆಯೇ ಉಳಿಸಿತಾ ಪ್ರಾಣ?

ಕ್ರಿಸ್ಟಾ ಪೈಕ್ ಅವರಿಗೆ "ಥ್ರಂಬೋಸೈಟೋಸಿಸ್" ಎಂಬ ಸಮಸ್ಯೆ ಇದೆ ಎಂದು ಆಕೆಯ ವಕೀಲರು ತಿಳಿಸಿದ್ದಾರೆ. ಇದು ಅವರ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಸಾಮಾನ್ಯಕ್ಕಿಂತ ಹೆಚ್ಚಾಗಿರುವುದನ್ನು ಸೂಚಿಸುತ್ತದೆ. ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಪ್ಲೇಟ್‌ಲೆಟ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಇಂಜೆಕ್ಷನ್ ನೀಡಿದ ಸ್ಥಳದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆ ಇದ್ದರೆ, ಔಷಧವು ಸರಿಯಾಗಿ ರಕ್ತನಾಳಗಳನ್ನು ಪ್ರವೇಶಿಸಲು ಸಾಧ್ಯವಾಗದಿರಬಹುದು ಎಂದು ವೈದ್ಯರು ಹೇಳುತ್ತಾರೆ.

ಅಷ್ಟಕ್ಕೂ ಏನಿದು ಘಟನೆ?

ಕ್ರಿಸ್ಟಾ ಪೈಕ್ ಅಮೆರಿಕದ ಅಪರಾಧ ಇತಿಹಾಸದಲ್ಲೇ ಅತ್ಯಂತ ಕಿರಿಯ ವಯಸ್ಸಿಗೆ ಮರಣದಂಡನೆ ಶಿಕ್ಷೆಗೆ ಗುರಿಯಾದ ಕುಖ್ಯಾತ ಮಹಿಳೆ. 1995ರಲ್ಲಿ ಟೆನ್ನೆಸ್ಸಿ ರಾಜ್ಯದಲ್ಲಿ ಕೇವಲ 18 ವರ್ಷ ವಯಸ್ಸಿನವಳಾಗಿದ್ದಾಗ, ತನ್ನ ಬಾಯ್​ಫ್ರೆಂಡ್​ ತಡಾರಿಯಲ್ ಶಿಪ್ ಜತೆ ಸೇರಿ ವೈಯಕ್ತಿಕ ದ್ವೇಷದಿಂದ ಕೋಲೀನ್ ಸ್ಮೆಸರ್ಸರ್ (19) ಎಂಬ ಯುವತಿಯನ್ನು ಅತ್ಯಂತ ಕ್ರೂರವಾಗಿ ಕೊಲೆಗೈದಳು. ಈ ಘೋರ ಅಪರಾಧಕ್ಕಾಗಿ 1996ರಲ್ಲಿ ನ್ಯಾಯಾಲಯವು ಆಕೆಗೆ ಮರಣದಂಡನೆ ಶಿಕ್ಷೆಯನ್ನು ವಿಧಿಸಿತು. ಜೈಲುವಾಸ ಅನುಭವಿಸುತ್ತಿರುವಾಗಲೂ ಆಕೆಯ ಹಿಂಸಾತ್ಮಕ ವರ್ತನೆ ಕಡಿಮೆಯಾಗದೆ, 2001ರಲ್ಲಿ ಮತ್ತೊಬ್ಬ ಮಹಿಳಾ ಕೈದಿಯ ಕೊಲೆಗೆ ಯತ್ನಿಸಿದ್ದಳು. ಈಗ ಶಿಕ್ಷೆಗೆ ಗುರಿಯಾಗುವ ಸಮಯದಲ್ಲಿ ಪವಾಡದಂತೆ ಬದುಕುಳಿರುವುದು ಸದ್ಯ ಜಾಗತಿಕ ಮಟ್ಟದಲ್ಲಿ ಆಕೆಯ ಹೆಸರನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ,(ಏಜೆನ್ಸೀಸ್).