ಚಿಕ್ಕ ಮಕ್ಕಳನ್ನು ಕಬ್ಬಿಣ್ಣದ ಲಾಕರ್‌ನಲ್ಲಿ ಕೂಡಿ ಹಾಕಿದ ಶಾಲಾ ಸಿಬ್ಬಂದಿ! ಕಾರಣ ಕೇಳಿ ಸಿಡಿದೆದ್ದ ಪಾಲಕರು, ಸ್ಥಳೀಯರು ಆಕ್ರೋಶ | Children In Lockers

Children In Lockers
ಚಿಕ್ಕ ಮಕ್ಕಳನ್ನು ಕಬ್ಬಿಣ್ಣದ ಲಾಕರ್‌ನಲ್ಲಿ ಕೂಡಿ ಹಾಕಿದ ಶಾಲಾ ಸಿಬ್ಬಂದಿ! ಕಾರಣ ಕೇಳಿ ಪಾಲಕರು ಭಾರಿ ಆಕ್ರೋಶ | Children In Lockers
Published on: 

ಕೆನಡಾ: ಮಕ್ಕಳನ್ನು ಶಾಲೆಗೆ ಕಳುಹಿಸುವುದು ಅವರ ಶಿಕ್ಷಣ ಮತ್ತು ಸುರಕ್ಷಿತ ಹಾಗೂ ಉಜ್ವಲ ಭವಿಷ್ಯ ರೂಪಿಸುವ ಸಲುವಾಗಿ. ತಮ್ಮ ಮಕ್ಕಳು ಮನೆಯಿಂದ ಹೊರಟು ಶಾಲೆಗೆ ಹೋದ ಮೇಲೆ, ಅಲ್ಲಿ ಶಿಕ್ಷಕರು ಮತ್ತು ಸಿಬ್ಬಂದಿಗಳ ಆರೈಕೆ, ಕಣ್ಗಾವಲ್ಲಿನಲ್ಲಿ ಸುರಕ್ಷಿತವಾಗಿರುತ್ತಾರೆ ಎಂಬ ಗಟ್ಟಿಯಾದ ನಂಬಿಕೆ ಪಾಲಕರಲ್ಲಿರುತ್ತದೆ. ಆದರೆ, ಅದೇ ಶಾಲಾ ಸಿಬ್ಬಂದಿ ತಮ್ಮ ಮಕ್ಕಳನ್ನು ಲಾಕರ್​ಗಳಲ್ಲಿ ಕೂಡಿ ಹಾಕುತ್ತಾರೆ ಎಂದರೆ ಯಾರಿಗೆ ತಾನೇ ರಕ್ತ ಕುದಿಯುವುದಿಲ್ಲ ಹೇಳಿ? ಇಂತದ್ದೊಂದು ಘಟನೆ ಕೆನಡಾದ ಶಾಲೆಯೊಂದರಲ್ಲಿ ನಡೆದಿದೆ.

ಕಬ್ಬಿಣದ ಲಾಕರ್​ಗಳಲ್ಲಿ ಮಕ್ಕಳು

ಚೀರಾಡುವ ಪುಟ್ಟ ಮಕ್ಕಳನ್ನು ಸಮಾಧಾನಪಡಿಸುವ ನೆಪದಲ್ಲಿ ಶಾಲೆಯ ಸಿಬ್ಬಂದಿಯೇ ಕಬ್ಬಿಣದ ಲಾಕರ್‌ಗಳಲ್ಲಿ ಕೂಡಿ ಹಾಕುವ ಬಗ್ಗೆ ಶಾಕಿಂಗ್ ಸಂಗತಿಗಳು ಈಗ ತಡವಾಗಿ ಬೆಳಕಿಗೆ ಬಂದಿವೆ. ಈ ಕುರಿತು ಮಕ್ಕಳ ಪೋಷಕರು ಶಾಲಾ ಆಡಳಿತ ಮಂಡಳಿ ಮೇಲೆ ಗಂಭೀರ ಆರೋಪ ಹೊರಿಸಿದ್ದು, ಕೆನಡಾದ ಕ್ವಿಬೆಕ್ ಪ್ರಾಂತ್ಯದಲ್ಲಿ ಪಾಲಕರು ಮತ್ತು ಸಾರ್ವಜನಿಕರು ಘಟನೆಗೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಸಮಾಧಾನ ಪಡಿಸುವ ಉದ್ದೇಶ

ಕೆನಡಾದ ಕ್ವಿಬೆಕ್ ಪ್ರಾಂತ್ಯದ ಬ್ಲೇನ್‌ವಿಲ್‌ನಲ್ಲಿರುವ ಎನ್‌ವೊಲೀ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ ವರದಿಯಾಗಿದೆ. CHMP-FM ರೇಡಿಯೊ ವರದಿಯ ಪ್ರಕಾರ, ಐದರಿಂದ ಏಳು ವರ್ಷದ ಮಕ್ಕಳನ್ನು ಶಾಲಾ ಸಿಬ್ಬಂದಿ ಕಬ್ಬಿಣದ ಲಾಕರ್‌ಗಳಲ್ಲಿ ಸಮಾಧಾನ ಪಡಿಸುವ ಉದ್ದೇಶದಿಂದ ಇರಿಸಿದ್ದಾಗಿ ಹೇಳಲಾಗಿದೆ. ಈ ಬಗ್ಗೆ ಶಿಕ್ಷಣ ಸಂಸ್ಥೆಯಾದ ಸೆಂಟರ್ ಡಿ ಸರ್ವಿಸಸ್ ಸ್ಕೊಲೈರ್ ಡೆಸ್ ಮಿಲ್-ಇಲ್ಸ್ (CSSMI) ಕೂಡ ಮಾಹಿತಿ ದೃಢಪಡಿಸಿದೆ ಎಂದು ವರದಿಯಾಗಿದೆ.

ಮಕ್ಕಳನ್ನು ಇರಿಸಲಾಗಿತ್ತು ಎನ್ನಲಾದ ಲಾಕರ್‌ನ ಚಿತ್ರಗಳು ಕೂಡ ಬಹಿರಂಗವಾಗಿದ್ದು, ಘಟನೆ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿ ಸೇರಿದಂತೆ ನಾಲ್ವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ ಎಂದು CSSMI ಸ್ಪಷ್ಟಪಡಿಸಿದೆ.

Also Read
15ನೇ ವಯಸ್ಸಿನಲ್ಲೇ ಮತ್ತೊಂದು ಐತಿಹಾಸಿಕ ವಿಶ್ವ ದಾಖಲೆ ಬರೆದ ಯುವ ಬ್ಯಾಟಿಂಗ್ ಸೆನ್ಸೇಷನ್​ ವೈಭವ್ ಸೂರ್ಯವಂಶಿ! Vaibhav Sooryavanshi
Children In Lockers

ಘಟನೆಗೆ ಶಿಕ್ಷಣ ಸಚಿವರು ಕಿಡಿ

ಘಟನೆಯನ್ನು ಕ್ವಿಬೆಕ್ ಶಿಕ್ಷಣ ಸಚಿವ ಜೋಯೆಲ್ ಅರ್ಸೆನೋ ತೀವ್ರವಾಗಿ ಖಂಡಿಸಿದ್ದಾರೆ. ಶಾಲೆಗಳಲ್ಲಿ ಇಂತಹ ಪದ್ಧತಿಗಳು ಅನುಸರಿಸಲಾಗುತ್ತಿದೆ ಎಂಬುದನ್ನು ತಿಳಿದು ಆಘಾತವಾಗಿದೆ. ಘಟನೆಯ ಬೆನ್ನಲ್ಲೇ ನಾಲ್ವರನ್ನು ಕರ್ತವ್ಯದಿಂದ ಅಮಾನತು ಮಾಡಿದ್ದೇವೆ. ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳನ್ನು ಲಾಕರ್‌ಗಳಲ್ಲಿ ಕೂಡಿ ಹಾಕಬಾರದು. ಇಂತಹ ಘಟನೆಗಳ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಶಾಲೆಗಳಲ್ಲೇ ಪುಟ್ಟ ಮಕ್ಕಳ ಸುರಕ್ಷತೆ ಮತ್ತು ಶಿಸ್ತು ಪಾಲನೆಯೇ ಹೀಗಾದರೆ, ಯಾವ ಧೈರ್ಯದ ಮೇಲೆ ನಾವು ಮಕ್ಕಳನ್ನು ಸ್ಕೂಲ್​ಗಳಿಗೆ ಕಳುಹಿಸೋದು ಎಂಬ ಆತಂಕ, ಕಳವಳ ಕೆನಡಾದಲ್ಲಿ ಸದ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ,(ಏಜೆನ್ಸೀಸ್).