ಕೆನಡಾದಲ್ಲಿ ಭಾರತೀಯರಿಗೆ ಬಂಪರ್ ಆಫರ್! 2 ಲಕ್ಷ ತಾತ್ಕಾಲಿಕ ನಿವಾಸಿಗಳಿಗೆ ಪರ್ಮನೆಂಟ್ ರೆಸಿಡೆನ್ಸಿ ಭಾಗ್ಯ, 2027ರೊಳಗೆ ನೆಲೆಸಲು ಅವಕಾಶ...Canada PR

ವಿದೇಶದಲ್ಲಿ ಉದ್ಯೋಗ ಮಾಡುತ್ತಾ ಶಾಶ್ವತವಾಗಿ ನೆಲೆಸುವ ಕನಸು ಕಾಣುತ್ತಿರುವ ಭಾರತೀಯರಿಗೆ ಕೆನಡಾ ಸರ್ಕಾರ ಸಿಹಿಸುದ್ದಿ ನೀಡಿದೆ. ಈಗಾಗಲೇ ಕೆನಡಾದಲ್ಲಿ ತಾತ್ಕಾಲಿಕ ನಿವಾಸಿಗಳಾಗಿ ವಾಸಿಸುತ್ತಿರುವ 2 ಲಕ್ಷ ಜನರಿಗೆ 2027ರ ಅಂತ್ಯದೊಳಗೆ ಪರ್ಮನೆಂಟ್ ರೆಸಿಡೆನ್ಸಿ (PR) ನೀಡಲು ಸರ್ಕಾರ ವಿಶೇಷ ಯೋಜನೆ ರೂಪಿಸಿದೆ. ಈ ನಿರ್ಧಾರದಿಂದ ಕೆನಡಾದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯ ಕಾರ್ಮಿಕರು ಹಾಗೂ ಕೆಲಸದ ಅನುಮತಿ ಹೊಂದಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.Canada PR
ಕೆನಡಾದಲ್ಲಿರುವ ಭಾರತೀಯರಿಗೆ ಪರ್ಮನೆಂಟ್ ರೆಸಿಡೆನ್ಸಿ ಭಾಗ್ಯ
ಕೆನಡಾದಲ್ಲಿರುವ ಭಾರತೀಯರಿಗೆ ಪರ್ಮನೆಂಟ್ ರೆಸಿಡೆನ್ಸಿ ಭಾಗ್ಯWEB
Published on: 

Canada PR: ವಿದೇಶದಲ್ಲಿ ಉದ್ಯೋಗ ಮಾಡುತ್ತಾ ಶಾಶ್ವತವಾಗಿ ನೆಲೆಸುವ ಕನಸು ಕಾಣುತ್ತಿರುವ ಭಾರತೀಯರಿಗೆ ಕೆನಡಾ ಸರ್ಕಾರ ಸಿಹಿಸುದ್ದಿ ನೀಡಿದೆ. ಈಗಾಗಲೇ ಕೆನಡಾದಲ್ಲಿ ತಾತ್ಕಾಲಿಕ ನಿವಾಸಿಗಳಾಗಿ ವಾಸಿಸುತ್ತಿರುವ 2 ಲಕ್ಷ ಜನರಿಗೆ 2027ರ ಅಂತ್ಯದೊಳಗೆ ಪರ್ಮನೆಂಟ್ ರೆಸಿಡೆನ್ಸಿ (PR) ನೀಡಲು ಸರ್ಕಾರ ವಿಶೇಷ ಯೋಜನೆ ರೂಪಿಸಿದೆ. ಈ ನಿರ್ಧಾರದಿಂದ ಕೆನಡಾದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯ ಕಾರ್ಮಿಕರು ಹಾಗೂ ಕೆಲಸದ ಅನುಮತಿ ಹೊಂದಿರುವ ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

ಕೆನಡಾ ಸರ್ಕಾರ 2026ರ ಬಜೆಟ್ ಮತ್ತು 2027-29ರ ವಲಸೆ ಮಟ್ಟದ ಯೋಜನೆಯಲ್ಲಿ ಈ ಮಹತ್ವದ ಘೋಷಣೆ ಮಾಡಿದೆ. ವಿಶೇಷವೆಂದರೆ, ಈ 2 ಲಕ್ಷ ಪಿ ಆರ್​ ಅವಕಾಶಗಳು ಈಗಾಗಲೇ ನಿಗದಿಪಡಿಸಿರುವ ವಾರ್ಷಿಕ ವಲಸೆ ಗುರಿಗಳಿಗಿಂತ ಹೆಚ್ಚುವರಿಯಾಗಿರಲಿವೆ. ಅಂದರೆ, ಸಾಮಾನ್ಯ ವಲಸೆ ಪ್ರಕ್ರಿಯೆಯಡಿ ನೀಡುವ ಅವಕಾಶಗಳಿಗೆ ಯಾವುದೇ ಕಡಿತವಾಗುವುದಿಲ್ಲ.

ಎರಡು ವಿಭಾಗಗಳಲ್ಲಿ ಪಿಆರ್​ ಅವಕಾಶ

ಒಟ್ಟು 2 ಲಕ್ಷ ಅವಕಾಶಗಳನ್ನು ತಲಾ 1 ಲಕ್ಷದಂತೆ ಎರಡು ವಿಭಾಗಗಳಾಗಿ ಹಂಚಿಕೆ ಮಾಡಲಾಗಿದೆ. ಮೊದಲ ವಿಭಾಗದಲ್ಲಿ ಕೆನಡಾದಲ್ಲಿ ಈಗಾಗಲೇ ಉದ್ಯೋಗ ಮಾಡುತ್ತಿರುವ ತಾತ್ಕಾಲಿಕ ನಿವಾಸಿಗಳಿಗೆ ಆದ್ಯತೆ ನೀಡಲಾಗುತ್ತದೆ. ಎಕ್ಸ್‌ಪ್ರೆಸ್ ಎಂಟ್ರಿ ಅಥವಾ ಪ್ರಾಂತೀಯ ನಾಮನಿರ್ದೇಶನ ಕಾರ್ಯಕ್ರಮ ಮೂಲಕ ಪಿಆರ್​ ಪಡೆಯಲು ಅರ್ಹರಾಗಿರುವ ಕಾರ್ಮಿಕರು ಮತ್ತು ಅವರ ಕುಟುಂಬದ ಸದಸ್ಯರು ಈ ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.

ಇನ್ನು ಎರಡನೇ ವಿಭಾಗದಲ್ಲಿ ಉಳಿದ 1 ಲಕ್ಷ ಅವಕಾಶಗಳನ್ನು ಮಾನವೀಯ ಆಧಾರದ ಅರ್ಜಿಗಳಿಗೆ ಮೀಸಲಿಡಲಾಗಿದೆ. ಇದರಲ್ಲಿ ಹಾಂಗ್‌ಕಾಂಗ್ ನಿವಾಸಿಗಳಿಗೆ ಸಂಬಂಧಿಸಿದ ವಲಸೆ ಮಾರ್ಗ, ಉಕ್ರೇನ್ ಕುಟುಂಬ ಪುನರ್ಮಿಲನ ಯೋಜನೆ, ಮಾನವೀಯ ಮತ್ತು ಅನುಕಂಪದ ಆಧಾರದ ಅರ್ಜಿಗಳು ಹಾಗೂ ಕೆನಡಾದ ನಾಗರಿಕರು ಹೊಂದಿರುವವರ ಕುಟುಂಬ ಸದಸ್ಯರ ಅರ್ಜಿಗಳು ಸೇರಿವೆ.

ಇದನ್ನೂ ಓದಿ : ಬ್ರಹ್ಮಾಂಡದಲ್ಲಿ ಕಂಡಿತೇ ಮ್ಯೂಸಿಕ್ ನೋಟ್? 20 ಲಕ್ಷ ಬೆಳಕಿನ ವರ್ಷಗಳ ಈ ನಿಗೂಢ ರಹಸ್ಯವೇನು..? Treble Clef

ಭಾರತೀಯರಿಗೆ ಹೇಗೆ ಲಾಭ?

ಕೆನಡಾದಲ್ಲಿ ಉದ್ಯೋಗ ಮತ್ತು ಶಿಕ್ಷಣದ ಉದ್ದೇಶದಿಂದ ನೆಲೆಸಿರುವ ವಿದೇಶಿಯರಲ್ಲಿ ಭಾರತೀಯರು ಪ್ರಮುಖ ಸಂಖ್ಯೆಯಲ್ಲಿದ್ದಾರೆ. ಅದರಲ್ಲೂ ವರ್ಕ್ ಪರ್ಮಿಟ್ ಹೊಂದಿರುವ ಭಾರತೀಯರು ಹಾಗೂ ವಿದ್ಯಾಭ್ಯಾಸದ ನಂತರ ಉದ್ಯೋಗದ ಅನುಮತಿ ಪಡೆದಿರುವವರು ಈ ಯೋಜನೆಯ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಆದರೆ, ಎಲ್ಲ ತಾತ್ಕಾಲಿಕ ನಿವಾಸಿಗಳಿಗೂ ಸ್ವಯಂಚಾಲಿತವಾಗಿ ಪಿ ಆರ್​ ಸಿಗುವುದಿಲ್ಲ. ನಿಗದಿತ ವಲಸೆ ಕಾರ್ಯಕ್ರಮಗಳ ಅರ್ಹತಾ ಮಾನದಂಡಗಳನ್ನು ಪೂರೈಸುವುದು ಅಗತ್ಯವಾಗಿದೆ.

2029ರವರೆಗೆ ಮುಂದುವರಿಯಲಿರುವ ವಲಸೆ ಗುರಿ

ಕೆನಡಾ ಸರ್ಕಾರದ ಯೋಜನೆಯ ಪ್ರಕಾರ, 2026ರಿಂದ 2029ರವರೆಗೆ ಪ್ರತಿ ವರ್ಷ 3.7 ಲಕ್ಷ ಹೊಸ ತಾತ್ಕಾಲಿಕ ನಿವಾಸಿಗಳು ಮತ್ತು 3.8 ಲಕ್ಷ ಪರ್ಮನೆಂಟ್ ರೆಸಿಡೆನ್ಸಿ ಹೊಂದಿದವರನ್ನು ಸ್ವೀಕರಿಸುವ ಗುರಿ ಹೊಂದಲಾಗಿದೆ. ಇದರ ಜತೆಗೆ ಈಗಾಗಲೇ ದೇಶದಲ್ಲಿ ವಾಸಿಸುತ್ತಿರುವ 2 ಲಕ್ಷ ತಾತ್ಕಾಲಿಕ ನಿವಾಸಿಗಳಿಗೆ ಹೆಚ್ಚುವರಿ ಪಿಆರ್​ ಅವಕಾಶ ಕಲ್ಪಿಸಲಾಗುತ್ತಿದೆ.ಈ ಯೋಜನೆಯ ಸಂಪೂರ್ಣ ಅರ್ಹತಾ ನಿಯಮಗಳು, ಅರ್ಜಿ ಸಲ್ಲಿಕೆ ವಿಧಾನ ಮತ್ತು ಆಯ್ಕೆ ಪ್ರಕ್ರಿಯೆಯ ಕುರಿತು ಹೆಚ್ಚಿನ ಅಧಿಕೃತ ಮಾಹಿತಿ ಹೊರಬರಬೇಕಿದೆ. ಹೀಗಾಗಿ ಕೆನಡಾದಲ್ಲಿ ಉದ್ಯೋಗ ಮಾಡುತ್ತಿರುವ ಭಾರತೀಯರು ಮುಂದಿನ ಮಾರ್ಗಸೂಚಿಗಳ ಮೇಲೆ ಗಮನಹರಿಸುವುದು ಮುಖ್ಯವಾಗಿದೆ, ( ಏಜೆನ್ಸೀಸ್​).