ಹಗ್ಗ ಕಟ್ಟದೇ ಬಂಜಿ ಜಂಪಿಂಗ್: 130 ಅಡಿ ಎತ್ತರದಿಂದ ಬಿದ್ದು 21 ವರ್ಷದ ಯುವತಿ ಸ್ಥಳದಲ್ಲೇ ಸಾವು: ವಿಡಿಯೋ ವೈರಲ್​! Bungee Jumping Tragedy

ಬ್ರೆಜಿಲ್‌ನಲ್ಲಿ ಬಂಜಿ ಜಂಪಿಂಗ್ ವೇಳೆ ಭೀಕರ ದುರಂತ!
ಬ್ರೆಜಿಲ್‌ನಲ್ಲಿ ಬಂಜಿ ಜಂಪಿಂಗ್ ವೇಳೆ ಭೀಕರ ದುರಂತ!
Published on

ಪ್ರಮುಖ ಮುಖ್ಯಾಂಶಗಳು

  • ಬ್ರೆಜಿಲ್‌ನಲ್ಲಿ ಬಂಜಿ ಜಂಪಿಂಗ್ ವೇಳೆ ಭೀಕರ ದುರಂತ!
  • ಸೊಂಟಕ್ಕೆ ಹಗ್ಗ ಕಟ್ಟುವುದನ್ನು ಮರೆತು ಯುವತಿಯನ್ನು 130 ಅಡಿ ಎತ್ತರದಿಂದ ಕೆಳಗೆ ತಳ್ಳಿದ ಆಯೋಜಕರು
  • ಸ್ಥಳದಲ್ಲೇ ಯುವತಿ ಸಾವು, ಶಾಕಿಂಗ್ ವಿಡಿಯೋ ವೈರಲ್
ಬ್ರೆಜಿಲ್​: ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವನ್ನು ಆಕರ್ಷಿಸುತ್ತಿರುವ ಸಾಹಸಮಯ ಚಟುವಟಿಕೆ ಎಂದರೆ ಅದು ಬಂಜಿ ಜಂಪಿಂಗ್​. ಬಲು ಎತ್ತರದಿಂದ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕೆಳಗೆ ಧುಮುಕುವ ಈ ಸಾಹಸದ ವಿಡಿಯೋಗಳನ್ನು ಸೋಷಿಯಲ್​ ಮೀಡಿಯಾನಲ್ಲಿ ನೋಡಿರುತ್ತೆವೆ.
ಆದರೆ ಕೆಲದಿನಗಳ ಹಿಂದೆ ಬ್ರೆಜಿಲ್​ನಲ್ಲಿ ಯುವತಿಯೊಬ್ಬಳ ಸೊಂಟಕ್ಕೆ ಹಗ್ಗ ಕಟ್ಟುವುದನ್ನು ಮರೆತ ಬಂಜಿ ಜಂಪಿಂಗ್​ ತಂಡ ಆಕೆಯನ್ನು ಸುಮಾರು 130 ಅಡಿ ಎತ್ತರಿಂದ ಕೆಳಗೆ ಬಿಸಾಕಿದ ಪರಿಣಾಮ (Bungee Jumping Tragedy) ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

ಸಾಹಸ ಮಾಡಲು ಹೋಗಿ ಸಾವು!

ಈ ಘಟನೆ ಬ್ರೆಜಿಲ್​ನಲ್ಲಿ ಸಂಭವಿಸಿದ್ದು, ಸಾವನ್ನಪ್ಪಿದ ಯುವತಿಯನ್ನು 21 ವರ್ಷದ ಮಾರಿಯಾ ಎಡ್ವರ್ಡಾ ರೋಡ್ರಿಗಸ್ ಡಿ ಫ್ರೀಟಾಸ್ (Maria Eduarda Rodrigues de Freitas) ಎಂದು ಗುರುತಿಸಲಾಗಿದೆ.
ಇಕೆಯನ್ನು ಬಂಜಿ ಜಂಪಿಂಗ್​ಗೆ ಸಿದ್ದಪಡಿಸಿದ ತಂಡ ಸುರಕ್ಷಾ ಹಗ್ಗವನ್ನು ಆಕೆಯ ಸೊಂಟಕ್ಕೆ ಸಿಕ್ಕಿಸುವುದನ್ನು ಮರೆತಿದ್ದು, ಇಬ್ಬರು ಯುವಕರು, ಯುವತಿಯನ್ನು ಎತ್ತಿ ಬಿಸಾಕಿರುವ ವಿಡಿಯೋ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗಿದೆ. ಇದೇ ವಿಡಿಯೋನಲ್ಲಿ ಅಲ್ಲಿದ್ದ ಇತರ ಯುವ ಸಮುದಾಯ, ರೋಪ್​, ರೋಪ್​ (ಹಗ್ಗವನ್ನು ಸಿಕ್ಕಿಸಿಲ್ಲ) ಎಂದು ಚಿರುತ್ತಿರುವುದನ್ನು ಕೇಳಿಸಿಕೊಳ್ಳಬಹುದಾಗಿದೆ.
ಸುಮಾರು 130 ಅಡಿ ಮೇಲಿದ್ದ ನೆಲಕ್ಕೆ ಅಪ್ಪಳಿಸಿರುವ ಯುವತಿ, ತೀವ್ರ ರಸ್ತಸ್ರಾವಕ್ಕೆ ಒಳಗಾಗಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆ ಸೇರಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಆಕೆ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮುಂದುವರಿದ ಪೊಲೀಸ್​ ತನಿಖೆ!
ಈ ಘಟನೆ ಸೋಷಿಯಲ್​ ಮೀಡಿಯಾನಲ್ಲಿ ವೈರಲ್​ ಆಗುತ್ತಿದ್ದಂತೆ, ಅಲ್ಲಿಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಸದ್ಯಕ್ಕೆ ಅರು ಜನರನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ಮುಂದುವರಿದಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೆ ಯಾವುದೇ ಬಂಜಿ ಜಂಪಿಂಗ್​ ನಡೆಸುವಂತಿಲ್ಲ ಎಂದು ಪೊಲೀಸರು ನೋಟಿಸ್​ ನೀಡಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net