ಹಂಚಿಕೆಯಾಗುತ್ತಿರುವ ಮಾಹಿತಿಗಳ ಪ್ರಕಾರ, ಎಪ್ಸ್ಟೀನ್ ಅವರೊಂದಿಗೆ ಸಬಂಧವನ್ನು ಕಳೆದುಕೊಳ್ಳಲು ಬಿಲ್ ಗೇಟ್ಸ್ ಬಯಸಿದ ಹಿನ್ನಲೆಯಲ್ಲಿ, ತಾನು ಈ ಹಿಂದೆ ಲೈಂಗಿಕವಾಗಿ ಹರಡುವ ರೋಗದ ಬಗ್ಗೆ ಜೆಫ್ರಿ ಎಪ್ಸ್ಟೀನ್ಗೆ ಜತೆ ಹಂಚಿಕೊಂಡ ಮಾಹಿತಿಯನ್ನು ಅಳಿಸುವಂತೆ ಎಪ್ಸ್ಟೀನ್ನಲ್ಲಿ ಕೋರಿಕೊಂಡಿರುವ ಇ-ಮೇಲ್ಗಳು ಇವಾಗಿವೆ ಎಂದು ಹೇಳಲಾಗುತ್ತಿದೆ. ಆದರೆ ಬಿಲ್ ಗೇಟ್ಸ್ ತನ್ನೊಂದಿಗೆ ಸಂಬಂಧವನ್ನು ಕಳೆದುಕೊಳ್ಳಲು ಬಯಸಿದ್ದಾನೆ ಎಂದು ತಿಳಿದ ಜೆಫ್ರಿ ಎಪ್ಸ್ಟೀನ್, ಬಿಲ್ ಗೇಟ್ಸ್ಗೆ ತಗುಲಿರುವ ಲೈಗಿಂಕ ರೋಗದ ಬಗ್ಗೆ ಮತ್ತು ಆತನ ಆಗಿನ ಪತ್ನಿ ಮೆಲಿಂಡಾಗೆ ರಹಸ್ಯವಾಗಿ ಆಂಟಿಬಯೋಟಿಕ್ ನೀಡುವಂತೆ ಕೇಳಿಕೊಂಡ ಇಮೇಲ್‌ಗಳನ್ನು ಎಪ್ಸ್ಟೀನ್ ಬಹಿರಂಗ ಪಡಿಸಿದ್ದಾನೆ.