ಭಾರತೀಯ ಅಡುಗೆ ಮನೆಯಲ್ಲಿ ಹುಣಸೆಹಣ್ಣಿಗೆ (Tamarind) ವಿಶೇಷ ಸ್ಥಾನವಿದೆ. ಸಾರು, ಚಟ್ನಿ ಅಥವಾ ಸ್ನ್ಯಾಕ್ಸ್ ಯಾವುದೇ ಇರಲಿ, ಹುಣಸೆಹಣ್ಣಿನ ಹುಳಿ ರುಚಿ ನೀಡುವ ಮಜವೇ ಬೇರೆ. ಆದರೆ ಹುಣಸೆಹಣ್ಣು ಕೇವಲ ನಾಲಿಗೆಗೆ ರುಚಿ ನೀಡುವುದಷ್ಟೇ ಅಲ್ಲ, ಆಯುರ್ವೇದದ ಪ್ರಕಾರ ಇದೊಂದು ಅಮೂಲ್ಯವಾದ ಔಷಧಿಯಾಗಿದೆ. ಇದರಲ್ಲಿ ವಿಟಮಿನ್ ಸಿ, ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂಶ ಹೇರಳವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಹುಣಸೆಹಣ್ಣನ್ನು ಬಳಸುವುದರಿಂದ ಸಿಗುವ 6 ಪ್ರಮುಖ ಆರೋಗ್ಯ ಪ್ರಯೋಜನಗಳು ಇಲ್ಲಿವೆ