ಬಲೂಚಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ: ಕಣಿವೆಗೆ ಬಸ್ ಬಿದ್ದು 40 ಪ್ರಯಾಣಿಕರ ದುರ್ಮರಣ; 8 ಜನರ ಸ್ಥಿತಿ ಗಂಭೀರ! Balochistan Bus Accident

ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾ ಗಡಿಯಲ್ಲಿ ಭೀಕರ ಬಸ್ ಅಪಘಾತ!
ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾ ಗಡಿಯಲ್ಲಿ ಭೀಕರ ಬಸ್ ಅಪಘಾತ!
Published on

ಪ್ರಮುಖ ಮುಖ್ಯಾಂಶಗಳು

  • ಬಲೂಚಿಸ್ತಾನ ಮತ್ತು ಖೈಬರ್ ಪಖ್ತುಂಖ್ವಾ ಗಡಿಯಲ್ಲಿ ಭೀಕರ ಬಸ್ ಅಪಘಾತ!
  • ಓವರ್‌ಲೋಡ್ ಹಾಗೂ ಅತಿ ವೇಗದಿಂದಾಗಿ ಪ್ರಪಾತಕ್ಕೆ ಉರುಳಿದ ಬಸ್
  • ಮಿತಿ ಮೀರಿ ತುಂಬಿಕೊಂಡು ಸಾಗುತ್ತಿದ್ದ ಬಸ್ ಕಣಿವೆಗೆ ಬಿದ್ದು 40 ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ
ಬಲೂಚಿಸ್ತಾನ: ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಬಸ್ಸೊಂದು ಕಣಿವೆಗೆ ಬಿದ್ದ ಪರಿಣಾಮ ಸುಮಾರು 40 ಜನ ಮೃತಪಟ್ಟಿದ್ದು, 8 ಜನ ಗಾಯಗೊಂಡಿರುವ ಘಟನೆ ಶುಕ್ರವಾರ (ಜು.3) ಬಲೂಚಿಸ್ತಾನ (Balochistan Bus Accident) ದಲ್ಲಿ ವರದಿಯಾಗಿದೆ.
ಈ ಘಟನೆಯು ಬಲೂಚಿಸ್ತಾನ್ ಮತ್ತು ಖೈಬರ್ ಪಖ್ತುಂಖ್ವಾ ಪ್ರಾಂತ್ಯಗಳ ಗಡಿ ಪ್ರದೇಶದಲ್ಲಿ ನಡೆದಿದ್ದು, ಬಸ್ಸಿನಲ್ಲಿ ಮಿತಿಗಿಂತ ಹೆಚ್ಚಿನ ಪ್ರಯಾಣಿಕರಿದ್ದು, ಜೊತೆಗೆ ಅಧಿಕ ವೇಗದ ಕಾರಣದಿಂದ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

40 ಪ್ರಯಾಣಿಕರ ದುರ್ಮರಣ!

ಈ ಘಟನೆ ಬಗ್ಗೆ ಮಾಹಿತಿ ನೀಡಿರುವ ಬಲೂಚಿಸ್ತಾನ್ ಸರ್ಕಾರದ ವಕ್ತಾರ ಶಾಹಿದ್ ರಿಂದ್​, ಅಫಘಾತಕ್ಕೆ ಒಳಗಾಗಿರುವ ಬಸ್ಸಿನಲ್ಲಿ ಅದರ ಮಿತಿ ಮಿರಿ ಪ್ರಯಾಣಿಕರನ್ನು ಕೊಂಡೊಯ್ಯಲಾಗುತ್ತಿತ್ತು. ಕೆಲ ಸಮಯದ ಹಿಂದೆ ಬಸ್ಸೊಂದು ಕೆಟ್ಟುನಿಂತ ಹಿನ್ನಲೆ ಈ ಬಸ್ಸಿನಲ್ಲಿಯೇ ಎರಡು ಬಸ್ಸಿನ ಜನ ಪ್ರಯಾಣಿಸಿಸುತ್ತಿದ್ದರೆಂದು ಶಾಹಿದ್ ರಿಂದ್​ ಮಾಹಿತಿ ನೀಡಿದ್ದಾರೆ.
ನಂತರ ಕಿರಿದಾದ ಕಲ್ಲಿನ ಕಣಿವೆ ಪ್ರದೇಶದಲ್ಲಿ ಸಂಚರಿಸುವಾಗ ಚಾಲಕ ಬಸ್ಸಿನ ಮೇಲೆ ತಾನು ಹೊಂದಿದ್ದ ಹಿಡಿತವನ್ನು ಕಳೆದುಕೊಂಡಿದ್ದು, ಕಣಿವೆಗೆ ಬಸ್ಸು ಬಿದ್ದಿದೆ. ಈ ಅಫಘಾತದಲ್ಲಿ ಸುಮಾರು 40 ಜನ ಸ್ಥಳದಲ್ಲೇ ಮೃತ ಪಟ್ಟಿದ್ದಾರೆಂಬ ಮಾಹಿತಿ ದೊರೆತಿದೆ. ಒಟ್ಟು 8 ಜನ ಗಾಯಗೊಂಡಿದ್ದು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ನಾಯಕರ ಸಂತಾಪ!

ಈ ಘಟನೆಗೆ ಸಂಬಂಧಿಸಿದಂತೆ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸಂತಾಪ ಸೂಚಿಸಿದ್ದು, ಮೃತರ ಹಾಗೂ ಅವರ ಕುಟುಂಬದ ಜೊತೆ ತಾವಿದ್ದೆವೆ, ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಹಾಗೆಯೇ ಬಲೂಚಿಸ್ತಾನದ ಮುಖ್ಯಮಂತ್ರಿ ಸರ್ಫ್ರಾಜ್ ಬುಗ್ತಿ ಕೂಡ ಕಣ್ಣೀರು ಸುರಿಸಿದ್ದು, ಮೃತರಿಗೆ ಸ್ವರ್ಗ ಪ್ರಾಪ್ತಿಯಾಗಲೆಂದು ದೇವರಲ್ಲಿ ಕೇಳಿಕೊಳ್ಳುತ್ತೆನೆ, ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಲೂಚಿಸ್ತಾನದಲ್ಲಿ ರಸ್ತೆ ಅಫಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳಪೆ ರಸ್ತೆ, ಹಾಳಾದ ವಾಹನಗಳು, ಅಧಿಕ ವೇಗದಲ್ಲಿ ವಾಹನ ಚಾಲನೆಗಳೇ ಈ ಅವಗಢಗಳಿಗೆ ಮೂಲ ಕಾರಣ ಎನ್ನುವುದು ಬಲೂಚ್​ ಜನರ ಆರೋಪವಾಗಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net