ಇಂಜಿನ್ ಸ್ಫೋಟಗೊಂಡಿದೆ ಎಂದು ಅರಿವಾದ ತಕ್ಷಣ, ತುರ್ತಾಗಿ ವಿಮಾನವನ್ನು ಬೆನಿನ್ ವಿಮಾನ ನಿಲ್ದಾಣಕ್ಕೆ ಪೈಲಟ್ ತಿರುಗಿಸಿದರು. ಕಠಿಣ ಪರಿಸ್ಥಿತಿಗಳ ಹೊರತಾಗಿಯೂ, ವಿಮಾನವು ಬೆನಿನ್ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು. ಇದು ಗೊತ್ತಾಗುತ್ತಿದ್ದಂತೆ ಒಳಗಿದ್ದ ಎಲ್ಲಾ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಪ್ರಯಾಣಿಕರಲ್ಲಿ ಯಾವುದೇ ಸಾವುನೋವುಗಳು ಸಂಭವಿಸದ ಕಾರಣ ಪೈಲಟ್ ಅವರ ಜಾಣ್ಮೆಯನ್ನು ಎಲ್ಲರೂ ಶ್ಲಾಘಿಸಿದರು.