ಭಾನುವಾರ ನಡೆದ ಪಂದ್ಯದಲ್ಲಿ ಹಿಟ್ ವಿಕೆಟ್ ವಿವಾದ ಮುನ್ನೆಲೆಗೆ ಬಂದಿತು. ಈ ಪಂದ್ಯದಲ್ಲಿ ಅಮೋಘ ಆಟವಾಡಿ 55 ರನ್ ಗಳಿಸಿದ ವೃಂದಾ ದಿನೇಶ್ ಅವರನ್ನು ಪಾಕಿಸ್ತಾನದ ವಿಕೆಟ್ ಕೀಪರ್ ಯುಸ್ರಾ ಅಮೀರ್ ಮೋಸದಿಂದ ಔಟ್ ಮಾಡಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗಲಿಲ್ಲ. ವೃಂದಾ ದಿನೇಶ್ ಬ್ಯಾಟಿಂಗ್ ಮಾಡುತ್ತಿದ್ದಾಗ, ಚೆಂಡು ಪ್ಯಾಡಿಗೆ ಬಡಿದು ನಿಧಾನವಾಗಿ ವಿಕೆಟ್ಗಳ ಕಡೆ ಸಾಗುತ್ತಿತ್ತು. ಈ ವೇಳೆ ಕೂಡಲೇ ಎಚ್ಚೆತ್ತುಕೊಂಡ ವೃಂದಾ ದಿನೇಶ್, ತಮ್ಮ ಬ್ಯಾಟ್ನಿಂದ ಚೆಂಡನ್ನು ತಡೆಯಲು ಪ್ರಯತ್ನಿಸಿದರು. ಆದರೆ, ಅದೇ ಸಮಯದಲ್ಲಿ ಅಲ್ಲಿಗೆ ಬಂದ ವಿಕೆಟ್ ಕೀಪರ್ ಯುಸ್ರಾ ಅಮೀರ್, ಚೆಂಡು ವಿಕೆಟ್ಗಳಿಗೆ ಬಡಿದಿದೆ ಎಂದು ಕಾಣುವಂತೆ ಮಾಡಲು ಪ್ರಯತ್ನಿಸಿದರು. ಅವರು ಚೆಂಡನ್ನು ನಿಧಾನವಾಗಿ ವಿಕೆಟ್ಗಳ ಕಡೆಗೆ ತಳ್ಳಿದರು.