ಸೂರ್ಯವಂಶಿ ಅವರು ಬಿಹಾರದ ಸಮಷ್ಠಿಪುರ ಜಿಲ್ಲೆಯ ತಾಜ್ಪುರದ ನಿವಾಸಿ. ಇಲ್ಲಿನ ಮಾಡೆಸ್ಟಿ ಸ್ಕೂಲ್ನಲ್ಲಿ ಓದುತ್ತಿರುವ ಸೂರ್ಯವಂಶಿ, ಫೆಬ್ರವರಿ 17 ರಿಂದ ಮಾರ್ಚ್ 11ರವರೆಗೆ ನಡೆಯಲಿರುವ ಎಸ್ಸೆಸ್ಸೆಲ್ಸಿ ಬೋರ್ಡ್ ಪರೀಕ್ಷೆಗೆ ಹಾಜರಾಗಬೇಕಿತ್ತು. ಆದಾಗ್ಯೂ, ಕ್ರಿಕೆಟ್ನಲ್ಲಿ ನಿರಂತರವಾಗಿ ಬಿಜಿಯಾದ್ದರಿಂದ ಮನೆ ಮತ್ತು ಶಾಲೆಯಿಂದ ದೂರ ಉಳಿಯಬೇಕಾಯಿತು. ಇದರಿಂದಾಗಿ ಸೂರ್ಯವಂಶಿ, ಪರೀಕ್ಷೆಗೆ ಸಿದ್ಧತೆ ನಡೆಸಲು ಸಾಧ್ಯವಾಗಿಲ್ಲ. ಹಾಗಾಗಿ, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಿಂದ ಸೂರ್ಯವಂಶಿ ದೂರ ಉಳಿಯಲಿದ್ದಾರೆ.