SSLC ಪರೀಕ್ಷೆ ಬರೆಯಲು ಸಜ್ಜಾದ ವೈಭವ್​: ಹಾಲ್​ ಟಿಕೆಟ್ ಕೊಟ್ಟು ಅಚ್ಚರಿಯ ಹೇಳಿಕೆ ನೀಡಿದ ಪ್ರಿನ್ಸಿಪಾಲ್​! Vaibhav Suryavanshi ​

SSLC ಪರೀಕ್ಷೆ ಬರೆಯಲು ಸಜ್ಜಾದ ವೈಭವ್​ ( Vaibhav Suryavanshi )
SSLC ಪರೀಕ್ಷೆ ಬರೆಯಲು ಸಜ್ಜಾದ ವೈಭವ್​ ( Vaibhav Suryavanshi )
Published on

ಪ್ರಮುಖ ಮುಖ್ಯಾಂಶಗಳು

  • ವೈಭವ್​ ಸೂರ್ಯವಂಶಿ, ಟೀಮ್​​ ಇಂಡಿಯಾದ ಭವಿಷ್ಯದ ಭರವಸೆ ಆಟಗಾರ
  • ಮೈದಾನದಲ್ಲಿ ಬೌಂಡರಿ ಮತ್ತು ಸಿಕ್ಸರ್​ಗಳ ಸುರಿಮಳೆಗೈದು ಬೌಲರ್‌ಗಳ ಬೆವರಿಳಿಸುವ ವೈಭವ್​
  • ಕ್ರಿಕೆಟ್​ಗೆ ಬ್ರೇಕ್​ ಹಾಕಿ ತರಗತಿಯಲ್ಲಿ ಕುಳಿತು ಪರೀಕ್ಷೆ ಬರೆಯಲು ಸಜ್ಜಾದ ಸೂರ್ಯವಂಶಿ
  • ಫೆ. 17 ರಿಂದ ಆರಂಭವಾಗುವ ಸಿಬಿಎಸ್‌ಇ 10ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಲಿದ್ದಾರೆ ವೈಭವ್
Vaibhav Suryavanshi : ವೈಭವ್​ ಸೂರ್ಯವಂಶಿ, ಟೀಮ್​​ ಇಂಡಿಯಾದ ಭವಿಷ್ಯದ ಭರವಸೆ ಆಟಗಾರ ಅನ್ನೋದು ಎಲ್ಲರಿಗೂ ತಿಳಿದಿದೆ. ಮೈದಾನದಲ್ಲಿ ಅಬ್ಬರಿಸಿ ಬೊಬ್ಬಿರಿಯುವ ಈ ಯುವ ಪ್ರತಿಭೆ, ಕೇವಲ 14ನೇ ವಯಸ್ಸಿನಲ್ಲಿ ದಾಖಲೆಗಳ ಸರಮಾಲೆಯನ್ನೇ ತನ್ನ ಬತ್ತಳಿಕೆಗೆ ಸೇರಿಸಿಕೊಳ್ಳುತ್ತಿದ್ದಾರೆ. ನಿನ್ನೆಯವರೆಗೂ ಮೈದಾನದಲ್ಲಿ ಬೌಂಡರಿ ಮತ್ತು ಸಿಕ್ಸರ್​ಗಳ ಸುರಿಮಳೆಗೈದು ಬೌಲರ್‌ಗಳ ಬೆವರಿಳಿಸುತ್ತಿದ್ದ ವೈಭವ್, ಇದೀಗ ತರಗತಿಯಲ್ಲಿ ಕುಳಿತು ಪರೀಕ್ಷೆ ಬರೆಯಲು ಸಜ್ಜಾಗಿದ್ದಾರೆ.
ಹೌದು, ಫೆಬ್ರವರಿ 17 ರಿಂದ ಪ್ರಾರಂಭವಾಗುವ ಸಿಬಿಎಸ್‌ಇ 10ನೇ ತರಗತಿಯ ಬೋರ್ಡ್ ಪರೀಕ್ಷೆಗಳಿಗೆ ವೈಭವ್ ಹಾಜರಾಗಲಿದ್ದಾರೆ. ಬಿಹಾರದ ಸಮಷ್ಟಿಪುರದಲ್ಲಿರುವ ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಈ ಪರೀಕ್ಷೆಗಳನ್ನು ಬರೆಯಲಿದ್ದಾರೆ.

ಯಾವುದೇ ಸೌಲಭ್ಯ ಇಲ್ಲ

ಈ ಬಗ್ಗೆ ಮಾತನಾಡಿರುವ ಶಾಲೆಯ ಪ್ರಾಂಶುಪಾಲ ನೀಲ್ ಕಿಶೋರ್ ಸಿನ್ಹಾ, ವೈಭವ್ ಸೂರ್ಯವಂಶಿ ನಮ್ಮ ಶಾಲೆಯಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯಲಿದ್ದಾರೆ. ನಾವು ಈಗಾಗಲೇ ಆತನಿಗೆ ಪ್ರವೇಶ ಪತ್ರವನ್ನು ನೀಡಿದ್ದೇವೆ. ವೈಭವ್ ಆಗಮನಕ್ಕಾಗಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರು ಕಾತರದಿಂದ ಕಾಯುತ್ತಿದ್ದಾರೆ. ಆತ ಇನ್ನೂ ವಿದ್ಯಾರ್ಥಿಯಾಗಿರುವುದರಿಂದ ಯಾವುದೇ ವಿಶೇಷ ಸೌಲಭ್ಯಗಳನ್ನು ಆತನಿಗೆ ಒದಗಿಸಲಾಗಿಲ್ಲ. ಆತ ಮಿಶ್ರ ಸ್ವರೂಪದಲ್ಲಿ ಪರೀಕ್ಷೆಗಳನ್ನು ಬರೆಯುತ್ತಾನೆ. ಅದಕ್ಕೆ ಅನುಗುಣವಾಗಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದಿದ್ದಾರೆ.
‘ಪರೀಕ್ಷಾ ಕೊಠಡಿಯಲ್ಲಿ ವೈಭವ್ ಅವರನ್ನು ಇತರ ವಿದ್ಯಾರ್ಥಿಗಳಂತೆಯೇ ನಡೆಸಿಕೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ನೀಲ್ ಕಿಶೋರ್ ಸಿನ್ಹಾ ಅವರು ಒತ್ತಿ ಹೇಳಿದ್ದಾರೆ.
ಅಂದಹಾಗೆ, 14 ವರ್ಷದ ವೈಭವ್, 2025ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ಪರ ಪಾದರ್ಪಣೆ ಮಾಡಿ ಕೇವಲ 15 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಎಲ್ಲರ ಗಮನ ಸೆಳೆದರು. ಅದಾದ ನಂತರ, ಭಾರತ-ಎ ತಂಡ ಮತ್ತು ಅಂಡರ್-19 ತಂಡದಲ್ಲೂ ರೋಮಾಂಚಕ ಪ್ರದರ್ಶನ ನೀಡಿದರು. ಇತ್ತೀಚೆಗೆ ನಡೆದ ಅಂಡರ್-19 ವಿಶ್ವಕಪ್‌ನಲ್ಲೂ ವೈಭವ್​ ಮಿಂಚಿದರು.
ಇಂಗ್ಲೆಂಡ್ ವಿರುದ್ಧದ ಅಂಡರ್-19 ವಿಶ್ವಕಪ್‌ನ ಫೈನಲ್‌ನಲ್ಲಿ 15 ಬೌಂಡರಿ ಮತ್ತು 15 ಸಿಕ್ಸರ್​ಗಳ ನೆರವಿನಿಂದ ಕೇವಲ 80 ಎಸೆತಗಳಲ್ಲಿ 175 ರನ್ ಗಳಿಸಿದ ವೈಭವ್, ಭಾರತವನ್ನು ಚಾಂಪಿಯನ್ ಆಗಿ ಮಾಡಿದರು. ಒಟ್ಟು 439 ರನ್ ಗಳಿಸಿದ ವೈಭವ್ 'ಟೂರ್ನಮೆಂಟ್‌ನ ಆಟಗಾರ'ನೆಂಬ ಗೌರವಕ್ಕೆ ಪಾತ್ರರಾದರು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net