ಬೆಂಗಳೂರಿನಲ್ಲಿ ಪದವಿ ಪಡೆದ ನಂತರ, ಕಂಪ್ಯೂಟರ್ ಸೈನ್ಸ್‌ನಲ್ಲಿ ಪಿಎಚ್‌ಡಿ ಪಡೆಯಲು ವಾಷಿಂಗ್ಟನ್ ವಿಶ್ವವಿದ್ಯಾಲಯಕ್ಕೆ ತೆರಳಿದ ಅಮರ್, AIಗೆ ತರಬೇತಿ ನೀಡುವ ಒಂದು ವಿಧಾನದ ಬಗ್ಗೆ ಅಧ್ಯಯನ ನಡೆಸಿದರು. ಇದರ ಜತೆಗೆ ಶ್ರವ್ಯ-ದೃಶ್ಯ ಮಾದರಿಗಳನ್ನು ಸಹ ಪ್ರಯೋಗಿಸಿ, ಮಲ್ಟಿಮೋಡಲ್ AI ನ ಆರಂಭಿಕ ರೂಪಗಳನ್ನು ಅನ್ವೇಷಿಸಿದರು. ಅಮರ್ನ ಈ ಅಧ್ಯಯನವು 2007ರಲ್ಲಿ ಪ್ರತಿಷ್ಠಿತ ಮೈಕ್ರೋಸಾಫ್ಟ್ ರಿಸರ್ಚ್ ಗ್ರಾಜುಯೇಟ್ ಫೆಲೋಶಿಪ್ ಅನ್ನು ಮತ್ತು 2009ರಲ್ಲಿ ತಮ್ಮ ಪಿಎಚ್‌ಡಿ ಮುಗಿಸುವ ಹೊತ್ತಿಗೆ, ಸಂಕೀರ್ಣ ಸಿದ್ಧಾಂತವನ್ನೂ ಪ್ರಾಯೋಗಿಕ ಪರಿಹಾರಗಳಾಗಿ ಪರಿವರ್ತಿಸಬಲ್ಲ ಸಂಶೋಧಕರಾಗಿ ಖ್ಯಾತಿ ಗಳಿಸಿದ್ದರು.