ಷರೀಫ್ ಉಸ್ಮಾನ್ ಹಾದಿ ಹತ್ಯೆ ಬೆನ್ನಲ್ಲೇ ಬಾಂಗ್ಲಾದಲ್ಲಿ ಮತ್ತೊಬ್ಬ ಯುವ ನಾಯಕನ ಮೇಲೆ ಗುಂಡಿನ ದಾಳಿ | Bangladesh

Bangladesh
Bangladesh
Published on
ಢಾಕಾ: ಬಾಂಗ್ಲಾ ದೇಶದಲ್ಲಿ(Bangladesh) ವಿದ್ಯಾರ್ಥಿಯ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬೆನ್ನಲ್ಲೇ ಇಂದು(ಡಿ. 22) ಬೆಳಗ್ಗೆ 11.45ರ ಸುಮಾರಿಗೆ ಮತ್ತೊಬ್ಬ ಎನ್​​ಸಿಪಿ ಯುವ ನಾಯಕನ ಮೇಲೆ ಅಪರಿಚಿತರರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಖುಲ್ನಾದ ಸೋನದಂಗಾ ಪ್ರದೇಶದಲ್ಲಿ ಎನ್​ಸಿಪಿಯ ಕಾರ್ಮಿಕ ಸಂಘಟನೆಯ ಕೇಂದ್ರ ನಾಯಕ 42 ವರ್ಷದ ಮುಹಮ್ಮದ್ ಮೋತಬೆಲ್ ಸಿಕ್ದರ್ ಮೇಲೆ ಅವರ ಮನೆಯಲ್ಲಿ ಗುಂಡು ಹಾರಿಸಲಾಗಿದೆ ಎಂದು ಬಾಂಗ್ಲಾದ ಪತ್ರಿಕೆ ಪ್ರೋಥೋಮ್ ಅಲೋ ವರದಿ ಮಾಡಿದೆ.
ಪಕ್ಷದ ನಾಯಕರ ಪ್ರಕಾರ, ಮುಂಬರುವ ದಿನಗಳಲ್ಲಿ ಖುಲ್ನಾದಲ್ಲಿ ನಡೆಯಲಿರುವ ವಿಭಾಗೀಯ ಕಾರ್ಮಿಕ ರ್ಯಾಲಿಯ ಸಿದ್ಧತೆಗಳಲ್ಲಿ ಸಿಕ್ದರ್ ಭಾಗಿಯಾಗಿದ್ದರು. ಗುಂಡು ಅವರ ತಲೆಬುರುಡೆಗೆ ತಗುಲಿದ್ದು, ಸ್ಥಿತಿ ಈಗ ಸ್ಥಿರವಾಗಿದೆ ಎಂದು ಎನ್ನಲಾಗಿದೆ.
ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಯಾದ ಕೆಲವು ದಿನಗಳ ಬಳಿಕ ಈ ಗುಂಡಿನ ದಾಳಿ ನಡೆದಿದೆ. ಹಾದಿಯವರ ಸಾವು ಬಾಂಗ್ಲಾದೇಶದಾದ್ಯಂತ ವ್ಯಾಪಕ ಹಿಂಸಾಚಾರದ ಪ್ರತಿಭಟನೆಯನ್ನು ಹುಟ್ಟುಹಾಕಿದೆ. ಡಿಸೆಂಬರ್ 12 ರಂದು ಢಾಕಾದ ಬಿಜೋಯ್‌ನಗರ ಪ್ರದೇಶದಲ್ಲಿ ಬ್ಯಾಟರಿ ಚಾಲಿತ ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದಾಗ ಹಾದಿಯವರ ಮೇಲೆ ಗುಂಡು ಹಾರಿಸಲಾಗಿತ್ತು.
ತಕ್ಷಣ ಅವರನ್ನು ಢಾಕಾದ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಬಳಿಕ ಗಾಯಗಳ ಗಂಭೀರತೆಯನ್ನು ಪರಿಗಣಿಸಿ, ಡಿ. 15ರಂದು ಸಿಂಗಾಪುರಕ್ಕೆ ವಿಮಾನದ ಮೂಲಕ ಸ್ಥಳಾಂತರಿಸಲಾಗಿತ್ತು. ಸಿಂಗಾಪುರ ಜನರಲ್ ಆಸ್ಪತ್ರೆಯಲ್ಲಿ ತೀವ್ರ ವೈದ್ಯಕೀಯ ಚಿಕಿತ್ಸೆಗಳ ಪ್ರಯತ್ನದ ಹೊರತಾಗಿಯೂ ಡಿ. 18ರಂದು ಷರೀಫ್ ಉಸ್ಮಾನ್ ಹಾದಿ ಮೃತಪಟ್ಟಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net