ಈ ಕುರಿತು ಮಾತನಾಡಿರುವ ಕಾಟ್ಜ್, ಈ ದಿನವಿಡೀ ಎಲ್ಲಾ ವಿಭಾಗಗಳಲ್ಲಿ ಗಮನಾರ್ಹ ವಿಷಯಗಳು ಬರಲಿವೆ. ಇತ್ತೀಚೆಗೆ ಹೊಸದಾಗಿ ನಡೆಸಿದ ಏರ್ಸ್ಟ್ರೈಕ್ನಲ್ಲಿ ಇರಾನ್ ಗುಪ್ತಚರ ಮುಖ್ಯಸ್ಥ ಖತೀಬ್ ಅವರನ್ನು ಹತ್ಯೆ ಮಾಡಲಾಗಿದೆ. ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು, ಹೆಚ್ಚುವರಿ ಅನುಮೋದನೆಗಳನ್ನು ಪಡೆಯದೇ ಇರಾನಿನ ಯಾವುದೇ ಅಧಿಕಾರಿ & ಮುಖ್ಯಸ್ಥನನ್ನು ಕೊಲ್ಲಲು ಸೇನೆಗೆ ಮುಕ್ತವಾದ ಸ್ವಾತಂತ್ರ್ಯ ನೀಡಿದ್ದಾರೆ ಎಂದು ಹೇಳಿದ್ದಾರೆ.