ಇರಾನ್ ಮೇಲೆ ಅಮೆರಿಕದ ಭೀಕರ ವಾಯುದಾಳಿ: IRGC ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಸಾವು! Majid Khademi
ಇರಾನ್‌ನ IRGC ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಸಾವು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ
ಟೆಹ್ರಾನ್ ಮೇಲೆ ಅಮೆರಿಕ ವೈಮಾನಿಕ ದಾಳಿ
ಇರಾನ್‌ನ IRGC ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ ಸಾವು
ಇರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಪ್ರಾರಂಭವಾಗಿ ಸರಿ ಸುಮಾರು ಆರು ವಾರಗಳು ಕಳೆದಿದೆ. ಆದರೆ ಈ ಸಂಘರ್ಷವು ಶಾಂತಿ ಒಪ್ಪಂದದೊಂದಿಗೆ ಕೊನೆಗೊಳ್ಳುವ ಬದಲು ದಿನಕ್ಕೊಬ್ಬ ಅಧಿಕಾರಿಯ ಸಾವಿನ ಸರಣಿ ಮುಂದುವರಿದಿದೆ.
ಸೋಮವಾರ (ಏ.6) ಟೆಹ್ರಾನ್ ಮೇಲೆ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಇರಾನಿನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಗುಪ್ತಚರ ಮುಖ್ಯಸ್ಥ ಮಜೀದ್ ಖಾದೇಮಿ (Majid Khademi) ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಗುಪ್ತಚರ ಸಂಸ್ಥೆಯ ಪ್ರಭಲ ವ್ಯಕ್ತಿಯಾಗಿದ್ದ ಮೇಜರ್ ಜನರಲ್ ಮಜೀದ್ ಖಾದೇಮಿ ಇಂದು (ಏ.6) ಮುಂಜಾನೆ ಅಮೆರಿಕ-ಇಸ್ರೇಲ್ ದಾಳಿಯಲ್ಲಿ ಮೃತಪಟ್ಟಿದ್ದಾರೆ ಎಂದು IRGC ಟೆಲಿಗ್ರಾಮ್ನಲ್ಲಿ ದೃಢ ಪಡಿಸಿದೆ.
ಯಾರು ಈ ಮಜೀದ್ ಖಾದೇಮಿ?
ಜೂನ್ 2025 ರಲ್ಲಿ IRGC ಮುಖ್ಯಸ್ಥರಾಗಿದ್ದ ಮೊಹಮ್ಮದ್ ಕಜೆಮಿ ಸಾವನ್ನಪ್ಪಿದ ನಂತರ ಮಜೀದ್ ಖಾದೇಮಿ IRGC ಯ ನೇತೃತ್ವ ವಹಸಿಕೊಂಡರು. ಈ ಸ್ಥಾನಕ್ಕೇರುವ ಪೂರ್ವದಲ್ಲಿ ಖಾದೇಮಿ, ಇರಾನಿನ ಗುಪ್ತಚರ ಇಲಾಖೆ ಮತ್ತು ರಕ್ಷಣಾ ಸಚಿವಾಲಯದಲ್ಲಿ ಸಹ ತಮ್ಮ ಸೇವೆಯನ್ನು ಸಲ್ಲಿಸಿದ್ದರು.
ಅಲಿ ಲಾರಿಜಾನಿ, ಎಸ್ಮಾಯಿಲ್ ಖತೀಬ್, ಮೊಹಮ್ಮದ್ ಪಕ್‌ಪೋರ್, ಘೋಲಮ್ರೆಜಾ ಸೊಲೈಮಾನಿ ಮತ್ತು ಅಜೀಜ್ ನಾಸಿರ್ಜಾದೆ ಸೇರಿದಂತೆ ಉನ್ನತ ಅಧಿಕಾರಿಗಳ ಸಾವಿನ ಈಗ ಮಜೀದ್ ಖಾದೇಮಿ ಸಾವನ್ನಪ್ಪಿದ್ದಾರೆ,(ಏಜನ್ಸೀಸ್).