ಟ್ರಂಪ್ ಒಬ್ಬ ಹುಚ್ಚ...ಯುದ್ಧವನ್ನು ಸೋತ ಏಕೈಕ ಅಧ್ಯಕ್ಷ: ಡೊನಾಲ್ಡ್​ ಟ್ರಂಪ್​ ವಿರುದ್ಧ ಸಿಡಿದೆದ್ದ ಸಂಸದರು! Donald Trump

ಮಧ್ಯಪ್ರಾಚ್ಯ ಯುದ್ಧದಲ್ಲಿ ಟ್ರಂಪ್​ ತೆಗೆದುಕೊಂಡ ನಿರ್ಧಾರಗಳನ್ನು ವಿರೋಧಿಸುತ್ತಿರುವ ಅಮೆರಿಕದ ಸಂಸದರು
ಮಧ್ಯಪ್ರಾಚ್ಯ ಯುದ್ಧದಲ್ಲಿ ಟ್ರಂಪ್​ ತೆಗೆದುಕೊಂಡ ನಿರ್ಧಾರಗಳನ್ನು ವಿರೋಧಿಸುತ್ತಿರುವ ಅಮೆರಿಕದ ಸಂಸದರು
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯ ಯುದ್ಧದಲ್ಲಿ ಟ್ರಂಪ್​ ತೆಗೆದುಕೊಂಡ ನಿರ್ಧಾರಗಳನ್ನು ವಿರೋಧಿಸುತ್ತಿರುವ ಅಮೆರಿಕದ ಸಂಸದರು
  • ಯುದ್ಧ ಆರಂಭಿಸಿ ಸೋತ ಮೊದಲ ಅಧ್ಯಕ್ಷ ಟ್ರಂಪ್​: ಜೇಕ್ ಆಚಿನ್‌ಕ್ಲಾಸ್
  • ಟ್ರಂಪ್​ ಒಬ್ಬ ಹುಚ್ಚ: ಮಾರ್ಜೋರಿ ಟೇಲರ್ ಗ್ರೀನ್
ವಾಷಿಂಗ್​ಟನ್​: ಕಳೆದ ಒಂದು ತಿಂಗಳಿನಿಂದ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ನಡೆಯುತ್ತಿದ್ದು, ಇದು ದಿನಕಳೆದಂತೆ ಶಾಂತ ರೂಪವನ್ನು ತಾಳುವ ಬದಲಿಗೆ ವಿಕೋಪಕ್ಕೆ ದಾರಿ ಮಾಡಿಕೊಡುತ್ತಿದೆ.
ಇರಾನ್​ ಮೇಲಿನ ದಾಳಿಯ ಕುರಿತಾದ ಹಾಗೂ ಯುದ್ಧದ ಬಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ (Donald Trump) ​ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಈಗ ಅಮೆರಿಕದ ಸಂಸದರಲ್ಲಿಯೇ ಅಸಮಾಧಾನ ಉಂಟಾಗಿರುವುದು ಕಂಡು ಬರುತ್ತಿದೆ.

ಅಧ್ಯಕ್ಷ ಟ್ರಂಪ್​ ಈ ಯುದ್ಧದಲ್ಲಿ ಸೋತಿದ್ದಾರೆ

ಅಮೆರಿಕದ ಇತಿಹಾಸದಲ್ಲಿ ಯುದ್ಧವನ್ನು ಆರಂಭಿಸಿ ಸೋತಿರುವ ಏಕೈಕ ಅಧ್ಯಕ್ಷನೆಂದರೆ ಅದು ಡೊನಾಲ್ಡ್​ ಟ್ರಂಪ್​ ಎಂದು ಅಮೆರಿಕದ ಕಾಂಗ್ರೆಸ್ ಸದಸ್ಯ ಜೇಕ್ ಆಚಿನ್‌ಕ್ಲಾಸ್ ಹೇಳಿದ್ದಾರೆ.
ಕಾಂಗ್ರೆಸ್​ ಈ ಕುರಿತು ನಿರ್ಧಾರವನ್ನು ತೆಗೆದುಕೊಳ್ಳಬೇಕು
ಮಧ್ಯಪ್ರಾಚ್ಯದಲ್ಲಿನ ಸಂಘರ್ಷವನ್ನು ಟ್ರಂಪ್​ ನಿರ್ವಹಿಸುತ್ತಿರುವ ರೀತಿಯನ್ನು ಟೀಠಿಸಿರುವ ಅಮೆರಿಕದ ಸೆನೆಟರ್ ಬರ್ನಿ ಸ್ಯಾಂಡರ್ಸ್ ಎಕ್ಸ್ (ಟ್ವಿಟರ್​) ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ರಂಪ್​ ಒಬ್ಬ ಅಪಾಯಕಾರಿ ಮನಸ್ಥಿತಿಯುಳ್ಳ ವ್ಯಕ್ತಿಯಾಗಿದ್ದಾರೆ. ಭಾನುವಾರ (ಏ.5) ಅಧ್ಯಕ್ಷ ಟ್ರಂಪ್​ ಇರಾನ್​ ಮೇಲಿನ ಯುದ್ಧವನ್ನು ಬೇಗ ಕೊನೆಗೊಳಿಸಬೇಕೆಂದರೆ, ಕಾಂಗ್ರೆಸ್​ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದ್ದಾರೆ, ಈ ವ್ಯಕ್ತಿಯಿಂದ ನಾವೇನು ಆಶಿಸಲು ಸಾಧ್ಯ ಎಂದು ಬರ್ನಿ ಬರೆದುಕೊಂಡಿದ್ದಾರೆ.

ಟ್ರಂಪ್​ ಅಪಾಯಕಾರಿ ವ್ಯಕ್ತಿ: ಚಕ್ ಶುಮರ್

ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಹುಚ್ಚನಂತೆ ಅಸಂಬದ್ಧವಾಗಿ ಮಾತನಾಡುತ್ತಿದ್ದಾರೆ. ವಿಶ್ವಕ್ಕೆ ಯುದ್ಧದ ಬೆದರಿಕೆಯನ್ನು ಒಡ್ಡುತ್ತಿದ್ದಾರೆ ಹಾಗೆಯೇ ತಮ್ಮ ಸಹದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕುತ್ತಿದ್ದಾರೆ. ಈ ನಮ್ಮ ಅಧ್ಯಕ್ಷ ಅತ್ಯಂತ ಅಪಾಯಕಾರಿ ವ್ಯಕ್ತಿ ಆಗಿದ್ದಾರೆ ಎಂದು ಚಕ್ ಶುಮರ್ ಹೇಳಿದ್ದಾರೆ.

ಟ್ರಂಪ್​ ಒಬ್ಬ ಹುಚ್ಚ: ಮಾರ್ಜೋರಿ ಟೇಲರ್ ಗ್ರೀನ್

ಟ್ರಂಪ್​ ಮತ್ತು ಅವನ ಆಡಳಿತ ಸಹಾಯಕರು ಮೊದಲು ದೇವರಲ್ಲಿ ಕ್ಷಮೆ ಕೇಳಬೇಕು. ಟ್ರಂಪ್​ ಈ ಯುದ್ಧದಿಂದ ಸಂಪೂರ್ಣವಾಗಿ ಹುಚ್ಚರಾಗಿದ್ದಾರೆ ಎಂದು ಟ್ರಂಪ್​ನ ಮಾಜಿ ಸಹಾಯಕಿ ಮತ್ತು ಕಾಂಗ್ರೆಸ್​ ಸಂಸದೆಯಾಗಿದ್ದ ಮಾರ್ಜೋರಿ ಟೇಲರ್ ಗ್ರೀನ್ ಕಿಡಿ ಕಾರಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net