ಪತಿ ಆದಿತ್ಯನ ಸಿನಿಮಾದಲ್ಲಿ ಯಾಮಿ ಗೌತಮ್​ ಎಂಟ್ರಿ: ಎರಡು ನಿಮಿಷದ ಸೀನ್​ಗೆ ನಟಿ ಪಡೆದ ಸಂಭಾವನೆ ಎಷ್ಟು ಗೊತ್ತಾ? Yami Gautam in Dhurandhar 2

ಪತಿಯ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಯಾಮಿ ಗೌತಮ್​
ಪತಿಯ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಯಾಮಿ ಗೌತಮ್​
Published on

ಪ್ರಮುಖ ಮುಖ್ಯಾಂಶಗಳು

  • ಆದಿತ್ಯ ಧರ್​ ನಿರ್ದೇಶನದ ಸಿನಿಮಾ ಧುರಂಧರ್​ 2
  • ಪತಿಯ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡ ಯಾಮಿ ಗೌತಮ್​
  • ಎರಡು ನಿಮಿಷದ ಪಾತ್ರಕ್ಕೆ 8 ಕೋಟಿ ಪಡೆದ ನಟಿ
ಬಾಲಿವುಡ್​: ಆದಿತ್ಯ ಧರ್​ ನಿರ್ದೇಶನದ ಹಾಗೂ ರಣವೀರ್​ ಸಿಂಗ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಧುರಂಧರ್​ 2 ಭಾರತೀಯ ಸಿನಿಮಾ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವ ಸಿನಿಮಾ ಎಂದರೆ ತಪ್ಪಾಗದು. ಈ ಚಲನಚಿತ್ರವು ಬಿಡುಗಡೆಯಾದ ಕೇವಲ 17 ದಿನಗಳಲ್ಲಿ 1,700 ಕೋಟಿಗೂ ಅಧಿಕ ಕಲೆಕ್ಷನ್​ ಮಾಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ 2,000 ಕೋಟಿ ಕ್ಲಬ್​ನ್ನು ಸೇರಲಿದೆ.
ಈ ಸಿನಿಮಾವನ್ನು ನಿಜ ಜೀವನದಲ್ಲಿ ನಡೆದ ಘಟನೆಗಳನ್ನು ಬಹಳ ಸುಂದರವಾಗಿ ಸಿನಿಮಿಕರಣ ಮಾಡಿದ್ದರಿಂದ ಈ ಸಿನಿಮಾ ಒಂದು ರೀತಿಯ ಡಾಕ್ಯುಮೆಂಟರಿ ಎಂಬಂತೆ ಭಾಸವಾಗುತ್ತದೆ. ಇದುವೇ ಈ ಸಿನಿಮಾ ಇಷ್ಟೊಂದು ಯಶಸ್ಸನ್ನು ಕಾಣಲು ಸಧ್ಯವಾಗಿಸಿದ ಫಾರ್ಮುಲಾ ಎನ್ನುವುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

2 ನಿಮಿಷ ತೆರೆಯ ಮೇಲೆ ಬಂದ ಯಾಮಿ ಗೌತಮ್​

ಈ ಸಿನಿಮಾದ ನಿರ್ದೇಶಕರಾದ ಆದಿತ್ಯ ಧರ್​ ಅವರ ಪತ್ನಿ ಯಾಮಿ ಗೌತಮ್ (Yami Gautam in Dhurandhar 2)​ ಸಹ ಈ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದಾರೆ. ಯಾಮಿ ಸಹ ಬಹಳ ವರ್ಷದಿಂದ ಬಾಲಿವುಡ್​ನಲ್ಲಿ ನಟಿಸುತ್ತಿದ್ದು, ಇದೇ ಮೊದಲ ಭಾರಿಗೆ ಪತಿಯ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.
ಸಿನಿಮಾದಲ್ಲಿ ಪಾಕಿಸ್ತಾನದಲ್ಲಿರುವ ಭಯೋತ್ಪಾದಕರನ್ನು ಕೊಲ್ಲಲು ಅನಾಮಿಕ (Unknown Man) ಪ್ರಾರಂಭ ಮಾಡಿದಾಗ, ಯಾಮಿ ಗೌತಮ್​ ದಾದಿ (Nurse) ವೇಶದಲ್ಲಿ ಬಂದು ರೋಗಿಯಾಗಿ ಮಲಗಿರುವ ಭಯೋತ್ಪಾದಕನೊಬ್ಬನಿಗೆ ಇಂಜೆಕ್ಷನ್​ನಲ್ಲಿ ವಿಷವನ್ನು ನೀಡಿ ಯಾಮಿ ಕೊಲ್ಲುವ ದೃಶ್ಯವನ್ನು ಸಿನಿಮಾದಲ್ಲಿ ನೋಡಬಹುದಾಗಿದೆ.
ವರದಿಗಳ ಪ್ರಕಾರ ಕೇವಲ ಎರಡು ನಿಮಿಷಗಳ ಈ ಸೀನ್​ಗೆ ಯಾಮಿ ಗೌತಮ್​ ಬರೊಬ್ಬರಿ 8 ಕೋಟಿಯನ್ನು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಇದರ ಕುರಿತು ಯಾಮಿಯಾಗಲೀ, ಅವರ ಪತಿ ಆದಿತ್ಯ ಧರ್​ನಾಗಲಿ ಇಲ್ಲಿವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಯಾರು ಈ ಯಾಮಿ ಮತ್ತು ಆದಿತ್ಯ?

ಯಾಮಿ ಗೌತಮ್ ಬಾಲಿವುಡ್‌ನ ಪ್ರತಿಭಾವಂತ ನಟಿಯರಲ್ಲಿ ಒಬ್ಬರಾಗಿದ್ದು, ಇವರು ಕನ್ನಡದ 'ಉಲ್ಲಾಸ ಉತ್ಸಾಹ' ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಆರಂಭಿಸಿದರು. ನಂತರ ವಿಕ್ಕಿ ಡೋನರ್, ಬಾಲಾ ಮತ್ತು ಉರಿ: ದ ಸರ್ಜಿಕಲ್ ಸ್ಟ್ರೈಕ್ ನಂತಹ ಹಿಟ್ ಚಿತ್ರಗಳ ಮೂಲಕ ಭಾರತದಾದ್ಯಂತ ಜನಪ್ರಿಯತೆ ಗಳಿಸಿದರು. ಸದ್ಯ ಇವರ ನಟನೆಯ ಹಕ್​ ಎಂಬ ಸಿನಿಮಾ ತ್ರಿವಳಿ ತಲಾಕ್​ನ ಕರಾಳತೆಯನ್ನು ಬಿಚ್ಚಿಟ್ಟಿದೆ.
ಇನ್ನು ಆದಿತ್ಯ ಧರ್ ಅವರು ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ಲೇಖಕರಾಗಿದ್ದು, 2019ರ ಬ್ಲಾಕ್‌ಬಸ್ಟರ್ ಚಿತ್ರ 'ಉರಿ: ದ ಸರ್ಜಿಕಲ್ ಸ್ಟ್ರೈಕ್' ಅನ್ನು ನಿರ್ದೇಶಿಸುವ ಮೂಲಕ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದಾರೆ.
ಈ ಜೋಡಿಯ ಪ್ರೇಮಕಥೆ ಶುರುವಾಗಿದ್ದು ಉರಿ ಚಿತ್ರದ ಚಿತ್ರೀಕರಣದ ಸಮಯದಲ್ಲಿ. ಸುಮಾರು ಎರಡು ವರ್ಷಗಳ ಕಾಲ ತಮ್ಮ ಪ್ರೀತಿಯನ್ನು ಗೌಪ್ಯವಾಗಿಟ್ಟಿದ್ದ ಈ ಜೋಡಿಯು, 2021ರ ಜೂನ್ 4 ರಂದು ಹಿಮಾಚಲ ಪ್ರದೇಶದ ಮಂಡಿಯಲ್ಲಿ ಅತ್ಯಂತ ಸರಳವಾಗಿ ಮತ್ತು ಆಪ್ತೇಷ್ಟರ ಸಮ್ಮುಖದಲ್ಲಿ ವಿವಾಹವಾದರು. ಇತ್ತೀಚೆಗೆ ಈ ದಂಪತಿಗೆ ವೇದಾವಿದ್ ಎಂಬ ಗಂಡು ಮಗು ಜನಿಸಿದ್ದು, ಸಿನಿಮಾ ರಂಗದ ಅತ್ಯಂತ ಸುಸಂಸ್ಕೃತ ಮತ್ತು ಪ್ರಬುದ್ಧ ಜೋಡಿಗಳಲ್ಲಿ ಒಬ್ಬರು ಎಂದು ಇವರು ಗುರುತಿಸಿಕೊಂಡಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net