ಹುಸಿ ಬಾಂಬ್ ಬೆದರಿಕೆಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ: ಇಂಡಿಗೋ ವಿಮಾನದಲ್ಲಿ ಆಗಿದ್ದೇನು? ಸಂಪೂರ್ಣ ಮಾಹಿತಿ ಇಲ್ಲಿದೆ..IndiGo Flight

ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ
ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ
Published on

ಪ್ರಮುಖ ಮುಖ್ಯಾಂಶಗಳು

  • ಇಂಡಿಗೋ ವಿಮಾನದ ಶೌಚಾಲಯದಲ್ಲಿ ಬಾಂಬ್​ ಬೆದರಿಕೆ ಚೀಟಿ
  • ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಇಂಡಿಗೋ ವಿಮಾನ
  • ತಪಾಸಣೆಯ ನಂತರ ಹುಸಿ ಬಾಂಬ್​ ಬೆದರಿಕೆ ಎಂದು ದೃಢ
ಬೆಂಗಳೂರು: ಶನಿವಾರ (ಏ.4) ಸಂಜೆ ಬೆಂಗಳೂರಿನಿಂದ ದೆಹಲಿಗೆ ಹೊರಡಲಿದ್ದ ಇಂಡಿಗೋ ವಿಮಾನ (IndiGo Flight) ದ ಶೌಚಗೃಹದಲ್ಲಿ ಬಾಂಬ್​ ಬೆದರಿಕೆಯ ಚೀಟಿ ದೊರೆತ ಕಾರಣ ಪ್ರಯಾಣದ ಸಮಯದಲ್ಲಿ ವ್ಯತ್ಯಯ ಕಂಡುಬಂದಿದೆ ಎಂದು ವರದಿಯಾಗಿದೆ. ಪ್ರಯಾಣಿಕರೊಬ್ಬರು ಶೌಚಾಲಯಕ್ಕೆ ತೆರಳಿದ್ದಾಗ ಅವರಿಗೆ ಈ ಬಾಂಬ್​ ಬೆದರಿಕೆಯ ಚೀಟಿ ದೊರೆತಿದ್ದು, ಕೆಲ ಕಾಲ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಇದೊಂದು ಹುಸಿ ಬಾಂಬ್​ ಬೆದರಿಕೆ!

ಈ ಬೆದರಿಕೆಯ ಚೀಟಿ ದೊರೆತ ಕೂಡಲೇ ವಿಮಾನ ನಿಲ್ದಾಣ ಸಿಬ್ಬಂದಿಗಳು ಜಾಗೃತರಾಗಿದ್ದಾರೆ. ಕೂಡಲೇ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ ಒಬ್ಬೊಬ್ಬರನ್ನೇ ಪ್ರತ್ಯೇಕವಾಗಿ ತಪಾಸಣೆ ನಡೆಸಿದ್ದಾರೆ.
ವಿಮಾನದ ಪ್ರಯಾಣದ ಸಮಯವನ್ನು ಬದಲಿಸಿ, ವಿಮಾನವನ್ನು ಸಂಪೂರ್ಣ ತಪಾಸಣೆ ಮಾಡಿದ್ದಾರೆ. ಆದರೆ ವಿಮಾನದಲ್ಲಿ ಯಾವುದೇ ರೀತಿಯ ಸ್ಪೋಟಕಗಳು ಪತ್ತೆಯಾಗದ ಹಿನ್ನಲೆಯಲ್ಲಿ ಇದೊಂದು ಹುಸಿ ಬಾಂಬ್​ ಬೆದರಿಕೆ ಎಂದು ತೀರ್ಮಾನಿಸಲಾಗಿದೆ.

ಹುಸಿ ಬಾಂಬ್​ ಬೆದರಿಕೆ ಹಾಕುತ್ತಿದ್ದ ಮೈಸೂರಿಗನ ಬಂಧನ!

ಕೆಲ ದಿನಗಳ ಹಿಂದೆ ನೂರಾರು ಶಾಲೆ, ವಿಮಾನ ನಿಲ್ದಾಣ, ಆಸ್ಪತ್ರೆ, ನ್ಯಾಯಾಲಯಗಳಿಗೆ ಸುಮಾರು 1,100 ಬಾರಿ ಹುಸಿ ಬಾಂಬ್​ ಬೆದರಿಕೆ ಹಾಕಿದ್ದ ಮೈಸೂರಿನ ಶ್ರೀನಿವಾಸ್​ ಲೂಯಿಸ್​ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸದ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಇವನು ಕೆಲ ದಿನಗಳ ಹಿಂದೆ ದೆಹಲಿ ಹೈಕೋರ್ಟ್​ಗೆ ಬಾಂಬ್​ ಬೆದರಿಕೆ ಹಾಕಿದ್ದು, ಆ ಪ್ರಕರಣವನ್ನು ಬೆನ್ನತ್ತಿ ಬಂದ ದೆಹಲಿ ಪೊಲೀಸರು, ಸ್ಥಳೀಯ ಪೊಲೀಸರ ಸಹಾಯದಿಂದ ಶನಿವಾರ (ಏ.4) ರಂದು ಇವನನ್ನು ಮೈಸೂರಿನಲ್ಲಿ ಬಂಧಿಸಿದ್ದಾರೆ. ಇವನೊಬ್ಬ ಮಾನಸಿಕ ಅಸ್ವಸ್ಥನಾಗಿದ್ದು, ತನಿಖೆಯ ವೇಳೆ ನಾನೇ ಈ ಎಲ್ಲಾ ಹುಸಿ ಬಾಂಬ್​ ಬೆದರಿಕೆಯನ್ನು ಒಡ್ಡಿದ್ದಾಗಿ ಬಾಯಿ ಬಿಟ್ಟಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net