ಆದರೆ, ಮನೆಗೆ ಬೇರೆ ಮಹಿಳೆಯನ್ನು ಕರೆತಂದು ಆಕೆಗೆ ಪತ್ನಿಯ ಸ್ಥಾನಮಾನ ನೀಡುವುದನ್ನು ವೃದ್ಧನ ಕುಟುಂಬ ಸದಸ್ಯರು ಸಹಿಸಲಿಲ್ಲ. ಈ ವಿವಾದ ಹಲವು ವರ್ಷಗಳ ಕಾಲ ಮುಂದುವರೆಯಿತು ಮತ್ತು 2021 ರಲ್ಲಿ ಈ ವಿವಾದ ಜೋರಾಯಿತು. ಈ ವೇಳೆ ವೃದ್ಧನು ತನ್ನ ಗೆಳತಿಯನ್ನು ಎರಡನೇ ಬಾರಿಗೆ ಮದುವೆಯಾಗುವುದಾಗಿ ಘೋಷಿಸಿದನು. ಆದರೆ, ತಂದೆಯ ನಿರ್ಧಾರವನ್ನು ಒಪ್ಪದ ಎರಡನೇ ಮಗ, ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದನು. 2017 ರಲ್ಲಿ ಉಂಟಾದ ಅಪಘಾತದಿಂದ ನನ್ನ ತಂದೆಯ ಮಾನಸಿಕ ಸ್ಥಿತಿ ಹದಗೆಟ್ಟಿದೆ. ಆದ್ದರಿಂದ, ನನ್ನ ತಂದೆಗೆ ಎರಡನೇ ಬಾರಿಗೆ ಮದುವೆಯಾಗಲು ಅವಕಾಶ ನೀಡಬಾರದು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಕೋರಿದನು. ಅದೇ ಸಮಯದಲ್ಲಿ, ತನ್ನ ತಂದೆಯ ಗೆಳತಿ ಆಸ್ತಿಯನ್ನು ಕದ್ದಿದ್ದಾಳೆ ಎಂದು ಮಗ ಆರೋಪಿಸಿದನು.