ವಾಷಿಂಗ್ಟನ್​ನಲ್ಲಿ ಸಹ್ಯಾದ್ರಿ ಕನ್ನಡ ಸಂಘದಿಂದ ವಿಶ್ವ ಮಹಿಳಾ ದಿನಾಚರಣೆ

Washington
Published on

ಬೆಂಗಳೂರು: ಅಮೆರಿಕದ ವಾಷಿಂಗ್ಟನ್​ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಕನ್ನಡ ಕಲರವ ಕೇಳಿಬಂದಿದೆ. ಅದಕ್ಕೆ ಕಾರಣ ಸಹ್ಯಾದ್ರಿ ಕನ್ನಡ ಸಂಘ.

ಹೌದು.. ಮಾ. 8ರ ಅಂತಾರಾಷ್ಟ್ರೀಯ ಮಹಿಳಾ ದಿನದ ಪ್ರಯುಕ್ತ ರಾಜ್ಯದ ಸಹ್ಯಾದ್ರಿ ಕನ್ನಡ ಸಂಘವು ವಾಷಿಂಗ್ಟನ್​ನಲ್ಲಿ ಮಾ.11ರಂದು ಅದನ್ನು ಆಚರಣೆ ಮಾಡಿದೆ.

ವಿಶೇಷವೆಂದರೆ ಇಂಥದ್ದೊಂದು ಅಪರೂಪದ ಕಾರ್ಯಕ್ರಮದಲ್ಲಿ ನೂರಕ್ಕೂ ಮಿಕ್ಕಿ ಸದಸ್ಯರು ಪಾಲ್ಗೊಂಡಿದ್ದು, ಈ ವಿಶೇಷ ಸಮಾರಂಭದಲ್ಲಿ ವಿಜಯವಾಣಿ ಪತ್ರಿಕೆಯ ಅಂಕಣಕಾರ ಡಾ.ಪುತ್ತೂರಾಯ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಸೀಟಲ್​ನ ಗುರುಕುಲದಲ್ಲಿ ಪ್ರಾಂಶುಪಾಲೆಯಾಗಿ ಹಲವು ವರ್ಷಗಳಿಂದ ಕನ್ನಡವನ್ನು ಬೋಧಿಸುತ್ತಿರುವ ಗೌರಿ ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net