ಫೋಟೋ ಫ್ರೇಮ್​, ಬಳೆಗಳಲ್ಲಿ ಇತ್ತು ಬರೋಬ್ಬರಿ 13 ಕೋಟಿ ಮೌಲ್ಯದ ಡ್ರಗ್ಸ್​!

drugs
Published on

ಬೆಂಗಳೂರು: ಬಾಲಿವುಡ್​ನಿಂದ ಸ್ಯಾಂಡಲ್​ವುಡ್​ವರೆಗೆ ದೇಶಾದ್ಯಂತ ಸದ್ದು ಮಾಡುತ್ತಿರುವ ಡ್ರಗ್ಸ್ ದಂಧೆಯ ಕರಾಳತೆ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಈ ನಡುವೆ ಡಿಆರ್​ಐ (ಡೈರೆಕ್ಟೋರೇಟ್​ ಆಫ್​ ರೆವಿನ್ಯೂ ಇಂಟೆಲಿಜೆನ್ಸ್​) ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬರೋಬ್ಬರಿ 13 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ ಮಾಡಿದ್ದಾರೆ.

ಇಷ್ಟೊಂದು ದೊಡ್ಡ ಪ್ರಮಾದ ಡ್ರಗ್ಸ್​ ಪತ್ತೆಯಾಗಿದ್ದು ಫೋಟೋ ಫ್ರೇಮ್, ಫೋಟೋ ಅಲ್ಬಮ್‌, ಬಳೆಗಳಲ್ಲಿ. ಯಾರಿಗೂ ಅನುಮಾನ ಬಾರದಂತೆ ಬೆಂಗಳೂರು ಮಾರ್ಗವಾಗಿ ವಿದೇಶಕ್ಕೆ ಡ್ರಗ್ಸ್​ ಸಾಗಿಸಲು ದಂಧೆಕೋರರು ಫೋಟೋ ಫ್ರೇಮ್​ ಮತ್ತು ಬಳೆಗಳನ್ನೇ ಅಸ್ತ್ರವನ್ನಾಗಿಸಿಕೊಂಡ ರಹಸ್ಯ ಬಯಲಾಗಿದೆ.

ಡ್ರಗ್ಸ್​ ದಂಧೆಕೋರರು ಡ್ರಗ್ಸ್ ಸಾಗಟಕ್ಕೆ ಎಂದೇ ಫೋಟೋ ಫ್ರೇಮ್, ಫೋಟೋ ಅಲ್ಬಮ್‌ ಮತ್ತು ಬಳೆಗಳಲ್ಲಿ ಪ್ರತ್ಯೇಕ ಕಂಪಾರ್ಟ್​ಮೆಂಟ್ಸ್​ ನಿರ್ಮಿಸಿದ್ದರು. ಅದರೊಳಗೆ ಹೈ ಎಂಡ್ ಡ್ರಗ್ಸ್ ತಯಾರು ಮಾಡಲು ಬಳಸುವ ಮಾದಕ ವಸ್ತು ಇಟ್ಟು ಚೆನ್ನೈನಿಂದ ಬೆಂಗಳೂರು ಮಾರ್ಗವಾಗಿ ಆಸ್ಟ್ರೇಲಿಯಾಗೆ ರವಾನಿಸಿದ್ದರು.

ಆಸ್ಟ್ರೇಲಿಯಾಗೆ ಹೋದ ಪಾರ್ಸಲ್​ ಬಾಕ್ಸ್ ಡ್ರಗ್ಸ್​ ಎಂದು ಮಾಹಿತಿ ತಿಳಿದ ಡಿಆರ್​ಐ ಅಧಿಕಾರಿಗಳು ಬೆಂಗಳೂರು ಏರ್​ಪೋರ್ಟ್​ಗೆ ಅದನ್ನು ವಾಪಸ್​ ತರಿಸಿಕೊಂಡು ಪರಿಶೀಲಿಸಿದಾಗ ಅಂತಾರಾಷ್ಟ್ರೀಯ ಮಟ್ಟದ ಡ್ರಗ್ಸ್​ ಜಾಲದ ಜಾಡು ಸಿಕ್ಕಿದೆ. ಈ ಬಾಕ್ಸ್​ನಲ್ಲಿದ್ದ ಮಾದಕ ವಸ್ತುವಿನ ಬೆಲೆ ಅಂತಾರಾಷ್ಟ್ರೀಯ ‌ಮಾರ್ಕೆಟ್​ನಲ್ಲಿ 1 ಕೆಜಿಗೆ 1 ಕೋಟಿ ರೂಪಾಯಿ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net