ಅಂತಾರಾಷ್ಟ್ರೀಯ ಶಾಂತಿಯ ದಿವಸ

22
Published on

ಮೈಸೂರು: ಕಾರ್ಮಿಕ ಸಂಘಟನೆಗಳ ಅಂತಾರಾಷ್ಟ್ರೀಯ ಶಾಂತಿಯ ದಿವಸವನ್ನು ಸಿಐಟಿಯು ಜಿಲ್ಲಾ ಸಮಿತಿಯಿಂದ ನಗರದ ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಭಾನುವಾರ ಆಚರಿಸಲಾಯಿತು. ಈ ವೇಳೆ ಯುದ್ಧ ಬೇಡ ಶಾಂತಿ ಬೇಕು, ಸಾಮ್ರಾಜ್ಯಶಾಹಿ ಯುದ್ಧಕೋರ ನೀತಿಗೆ ಧಿಕ್ಕಾರ ಕೂಗಿದರು. ಅಲ್ಲದೆ, ಪ್ಯಾಲೆಸ್ಟೈನ್ ನರಮೇಧವನ್ನು ತೀವ್ರವಾಗಿ ಖಂಡಿಸಿದರು.
ಪ್ರತಿ ವರ್ಷ ಸೆ.1 ರಂದು ಕಾರ್ಮಿಕ ಸಂಘಟನೆಗಳ ಅಂತಾರಾಷ್ಟ್ರೀಯ ಶಾಂತಿಗಾಗಿ, ಸೌಹಾರ್ದತೆಗಾಗಿ ಆಚರಿಸುತ್ತಿದೆ. ಈ ವರ್ಷ ಡಬ್ಲ್ಯೂಎಫ್‌ಟಿಯು ತನ್ನ ತಾಯಿ ನಾಡಿನಲ್ಲಿ ನರಮೇಧವನ್ನು ಅನುಭವಿಸುತ್ತಿರುವ ಪ್ಯಾಲೆಸ್ಟೈನ್ ಜನತೆಗೆ ಸೌಹಾರ್ದತೆ ವ್ಯಕ್ತಪಡಿಸಲು ಕರೆ ನೀಡಿದೆ. ಇಸ್ರೇಲ್ ಹಾಗೂ ನ್ಯಾಟೋ ಜೊತೆಗಾರರಿಂದ ಪ್ಯಾಲೆಸ್ಟೈನ್ ದೇಶದ ನಾಗರಿಕರು ತಮ್ಮ ದೇಶದಲ್ಲೇ ಪರಕೀಯರಾಗುತ್ತಿದ್ದಾರೆ. ಅಮೆರಿಕಾ ನಾಯಕತ್ವದ ಯುದ್ಧ ಕೋರ ನೀತಿಗಳು ಅಲ್ಲಿಯ ಜನರ ಬದುಕನ್ನು ತಿಂದು ಹಾಕಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಕೆ. ಬಾಲಾಜಿ ರಾವ್, ಜಿಲ್ಲಾ ಖಜಾಂಚಿ ಅಣ್ಣಪ್ಪ, ಪ್ರಮುಖರಾದ ಮೆಹಬೂಬ್, ಜಗದೀಶ್ ಸೂರ್ಯ, ಜಗನ್ನಾಥ್, ಎನ್.ವಿಜಯ್ ಕುಮಾರ್, ಜಿ.ರಾಜೇಂದ್ರ, ಎನ್.ಸುಬ್ರಹ್ಮಣ್ಯ, ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net