ಅಂತರಾಷ್ಟ್ರೀಯ ಬಿಯರ್​ ದಿನ 2023; ಆಚರಣೆ ಹಿಂದಿನ ಉದ್ದೇಶವೇನು?

BEER
Published on

ನವದೆಹಲಿ: ಬಿಯರ್​ ಎಂದಾಕ್ಷಣ ಮದ್ಯಪಾನ ಪ್ರಿಯರು ಒಮ್ಮೆಲೆಗೆ ಚುರುಕಾಗುವುದು ಸಹಜ. ಅದರಲ್ಲೂ ಮಧ್ಯಾಹ್ನದ ಉರಿ ಬಿಸಿಲಿನಲ್ಲಿ ಚಿಲ್ಡ್​ ಬಿಯರ್​ ಸಿಕ್ಕರೆ ಹೊಟ್ಟೆ ತಂಪಾಗೋದಂತು ಪಕ್ಕಾ. ಬಿಯರ್​ ಬಗ್ಗೆ ಇವರು ಇಷ್ಟೆಲ್ಲಾ ಯಾಕೆ ಮಾತನಾಡುತ್ತಿದ್ದಾರೆ ಎಂದು ಊಹಿಸುತ್ತಿದ್ದೀರಾ. ಏಕೆಂದರೆ ಇಂದು ಅಂತರಾಷ್ಟ್ರೀಯ ಬಿಯರ್​ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

ಆಂತರಾಷ್ಟ್ರೀಯ ಬಿಯರ್​ ದಿನವನ್ನು ಆಗಸ್ಟ್​ ತಿಂಗಳ ಮೊದಲ ಶುಕ್ರವಾರದೊಂದು ಆಚರಿಸಲಾಗುತ್ತಿದೆ. ಈ ವರ್ಷ ಅಂತರಾಷ್ಟ್ರೀಯ ಬಿಯರ್​ ದಿನಾಚರಣೆಯು ಆಗಸ್ಟ್​ 4ರಂದು ಆಚರಿಸಲಾಗುತ್ತಿದ್ದು, ಇದರ ಇತಿಹಾಸ ಹಾಗೂ ಮಹತ್ವ ಇಲ್ಲಿದೆ.

ಉತ್ತಮ ಅವಕಾಶ

ಆಂತರಾಷ್ಟ್ರೀಯ ಬಿಯರ್​ ದಿನವನ್ನು ಆಚರಿಸುವುದು ಮದ್ಯಪಾನ ಪ್ರಿಯರಿಗೆ ತಮ್ಮ ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಕುಟುಂಬದೊಂದಿಗೆ ಸಮಯ ಕಳೆಯಲು ಒಂದು ಉತ್ತಮ ಅವಕಾಶವಾಗಿದೆ. ವಿವಿಧ ರೀತಿಯ ಬಿಯರ್ ಬ್ರ್ಯಾಂಡ್​ಗಳು ಮತ್ತು ಸ್ಥಳೀಯ ಬ್ರೂವರೀಸ್ ಉತ್ತೇಜಿಸುವ ನಿಟ್ಟಿನಲ್ಲಿ ಪ್ರತಿನಿತ್ಯ ಅಂತರಾಷ್ಟ್ರೀಯ ಬಿಯರ್​ ದಿನವನ್ನು ಆಚರಿಸಲಾಗುತ್ತಿದೆ.

2007ರಲ್ಲಿ ಕ್ಯಾಲಿಫೋರ್ನಿಯಾದ ಸಾಂಟಾ ಕ್ರೂಜ್​ನಲ್ಲಿ ಸ್ನೇಹಿತರ ಗುಂಪೊಂದು ಬಿಯರ್​ ಪಾರ್ಟಿಯನ್ನು ಆಯೋಜಿಸಿತ್ತು. ಇದು ತೀವ್ರ ಖ್ಯಾತಿ ಪಡೆದ ಪರಿಣಾಮ ಅಂದಿನಿಂದ ಆಗಸ್ಟ್​ ತಿಂಗಳ ಮೊದಲ ಶುಕ್ರವಾರದಂಉ ಅಂತರಾಷ್ಟ್ರೀಯ ಬಿಯರ್​ ದಿನವನ್ನಾಗಿ ಆಚರಿಸಲಾಗುತ್ತಿದೆ.

Beer Drink

ಬಿಯರ್​ ಕುರಿತಾದ ಪ್ರಮುಖ ಆಂಶಗಳು

  • ಬಿಯರ್​ ಅತ್ಯಂತ ಹಳೆಯ ಆಲ್ಕೋಹಾಲ್​ಯುಕ್ತ ಪಾನೀಯವಾಗಿದ್ದು, ಮೊದಲಿಗೆ ಇದನ್ನು ಸುಮೇರಿಯನ್ನರು ತಯಾರಿಸಿದ್ದರು.
  • ಬಿಯರ್​ ಪ್ರಾಚೀನ ನಾಗರೀಕತೆಯನ್ನು ತೋರಿಸುತ್ತದೆ. ಆರಂಭಿಕ ದಿನಗಳಲ್ಲಿ ಜನರು ತಮ್ಮ ಪ್ರತಿನಿತ್ಯದ ಆಹಾರದಲ್ಲಿ ಬಿಯರ್​ಅನ್ನು ಸೇವಿಸುತ್ತಿದ್ದರು ಎಂದು ನಂಬಲಾಗಿದೆ. ಇದರ ಜೊತೆಗೆ ಧಾರ್ಮಿಕ ಆಚರಣೆಗಳಿಗು ಸಹ ಬಳಸುತ್ತಿದ್ದರು ಎಂದು ಹೇಳಲಾಗಿದೆ.
  • ಹಾಪ್ಸ್​ಅನ್ನು ಹಾಕುವ ಮೂಲಕ ಬಿಯರ್​ಅನ್ನು ದೀರ್ಘಕಾಲದವರೆಗೆ ಶೇಖರಿಸಬಹುದಾಗಿದೆ. ಹಾಪ್ಸ್​ಗಳು ಬಿಯರ್​ಗಳ ಜೀವಿತಾವಧಿಯನ್ನು ಹೆಚ್ಚಿಸುತ್ತವೆ ಎಂದು ತಿಳಿದು ಬಂದಿದೆ.
  • ಬಿಯರ್​ಅನ್ನು 768ADಯಲ್ಲಿ ಅನ್ವೇಷಿಸಲಾಯಿತು. ಜರ್ಮನಿಯ ಬವೇರಿಯಾದ ಫ್ರೈಸಿಂಗ್‌ನಲ್ಲಿರುವ ವೈಹೆನ್‌ಸ್ಟೆಫನ್ ಬ್ರೂವರಿ ವಿಶ್ವದ ಅತ್ಯಂತ ಹಳೆಯ ಬಿಯರ್​ ಎಂದು ವರದಿಯಾಗಿದೆ.
  • ಯುಎಸ್​ಎ, ಜರ್ಮನಿ, ಚೀನಾ, ಬ್ರೆಜಿಲ್​ ಮತ್ತು ಜರ್ಮನಿ ವಿಶ್ವದ ಅಗ್ರ ಐದು ಬಿಯರ್ ಉತ್ಪಾದಿಸುವ ದೇಶಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net