ಜಲಪಾತದ ಬಳಿ ಸೆಲ್ಫಿ ತೆಗೆಯಲು ಹೋಗಿ ನೀರಿನಲ್ಲಿ ಕೊಚ್ಚಿ ಹೋದ ಪ್ರವಾಸಿಗ

Sandeep
ಮೃತ ಪ್ರವಾಸಿಗ
Published on

ಕೊಡಗು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರವಾಸಿಗರೊಬ್ಬರು ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಹಾರಂಗಿ ಜಲಾಶಯದ ಮುಂಭಾಗ ಇರುವ ಸೇತುವೆ ಬಳಿ ನಡೆದಿದೆ.

ಮೃತರನ್ನು ಬೆಂಗಳೂರು ನಗರದ ವಿದ್ಯಾರಣ್ಯಪುರ ಮೂಲದ ಸಂದೀಪ್​ ಎಂದು ಗುರುತಿಸಲಾಗಿದ್ದು, ಮೂವರು ಸ್ನೇಹಿತರೊಂದಿಗೆ ಹಾರಂಗಿ ಜಲಾಶಯವನ್ನು ನೋಡಲು ಬಂದಿದ್ದರು. ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಮೃತದೇಹದ ಹುಡುಕಾಟದಲ್ಲಿ ನಿರತರಾಗಿದ್ಧಾರೆ.

Harangi Water

ಘಟನೆ ನಡೆದು ನಾಲ್ಕು ಘಂಟೆ ಕಳೆಯುತ್ತಾ ಬಂದರು ಸಂದೀಪ್​ ಮೃತದೇಹ ಪತ್ತೆಯಾಗಿಲ್ಲದಿರದಿರುವುದರಿಂದ ಕತ್ತಲಿನಲ್ಲೂ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಸಂದೀಫ್​ ಮೃತದೇಹದ ಹುಡುಕಾಟಕ್ಕಾಗಿ ರಾಫ್ಟಿಂಗ್ ಪರಿಣಿತರನ್ನು ಸಹ ಕರೆಸಲಾಗಿದೆ.

ಇತ್ತ ಡ್ಯಾಂನ ಒಳ ಹೊರಿವ ಹೆಚ್ಚಳವಾಗುತ್ತಿರುವುದರಿಂದ ಅಧಿಕಾರಿಗಳು ನೀರನ್ನು ಬಿಡಬೇಕು ಎಂದು ಹೇಳುತ್ತಿದ್ದಾರೆ. ಒಂದು ವೇಳೆ ಹಾಗೆ ಮಾಡಿದ್ದಲ್ಲಿ ಸಂದೀಪ್​ ಮೃತದೇಹ ನೀರಿನಲ್ಲಿ ಕೊಚ್ಚಿ ಹೋಗುವ ಸಾಧ್ಯತೆ ಹೆಚ್ಚಿದೆ. ಸ್ಥಳಕ್ಕೆ ಭೇಟಿ ನೀಡಿದ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಂದೀಪ್​ ಸ್ನೇಹಿತರನ್ನು ವಿಚಾರಣೆಗೆ ಒಳಪಡಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net