ನಾಗಾರ್ಜುನ ಎನ್ ಕನ್ವೆನ್ಷನ್ ಹಾಲ್​ನೆಲಸಮಕ್ಕೆ ಹೈಕೋರ್ಟ್​ ತಡೆಯಾಜ್ಞೆ

HYDRA officials start demolishing actor Nagarjunas N Convention at Madhapur
Published on

ಹೈದರಾಬಾದ್: ಟಾಲಿವುಡ್​ ಹಿರಿಯನಟ ಅಕ್ಕಿನೇನಿ ನಾಗಾರ್ಜುನ ಒಡೆತನದ ಮಾದಾಪುರದ ಎನ್ ಕನ್ವೆನ್ಷನ್ ಹಾಲ್​ನೆಲಸಮ ಮಾಡುವುದನ್ನು ಕೂಡಲೇ ನಿಲ್ಲಿಸುವಂತೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ತಡೆ ಆದೇಶ ನೀಡಿದೆ.

ಈ ಸಂಬಂಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಟಿ. ವಿನೋದ್‌ಕುಮಾರ್‌ ಕಟ್ಟಡದ ನೆಲಸಮವನ್ನು ನಿಲ್ಲಿಸುವಂತೆ ತೆಲಂಗಾಣ ಸರ್ಕಾರಕ್ಕೆ ಸೂಚಿಸಿದೆ.

''ಕೆಲ ವರ್ಷಗಳ ಹಿಂದೆ ಸ್ವರ್ಜಿತಂ ಸಂಸ್ಥೆ ಖರೀದಿಸಿದ ಜಾಗದಲ್ಲಿ ಅಕ್ಕಿನೇನಿ 2012ರಲ್ಲಿ ನಟ ನಾಗಾರ್ಜುನ ಎನ್. ಕನ್ವೆನ್ಷನ್ ಹಾಲ್​ ನಿರ್ಮಿಸಿದ್ದರು. ಆದರೆ ಈ ಸ್ಥಳ ಕೆರೆಯ ಸರಹದ್ದಿನಲ್ಲಿ ಬರುವುದಾಗಿ ಸರ್ಕಾರ ನೋಟಿಸ್ ಜಾರಿ ಮಾಡಿತ್ತು.

ಆದರೆ ಈ ಜಮೀನಿನ ಕೆರೆ ಅಂಗಳಕ್ಕೆ ಬರುವುದಿಲ್ಲವೆಂದು ಮೂರ್ನಾಲ್ಕು ಸರ್ವೆ ವರದಿಗಳನ್ನು ನಾಗಾರ್ಜುನ ನ್ಯಾಯಾಲಯಕ್ಕೆ ಸಲ್ಲಿಸಿದ್ದು, ತಮಗೆ ನಷ್ಟಪರಿಹಾರವಾಗಿ 9 ಕೋಟಿ ರೂ.ಗಳನ್ನು ಠೇವಣಿಯಾಗಿ ಪಾವತಿಸುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net