ಕೋಲ್ಕತ್ತಾ ಕೊಲೆ ಆರೋಪಿಗೆ ಪಾಲಿಗ್ರಾಫ್ ಪರೀಕ್ಷೆ..ಇದರಲ್ಲಿ ಸುಳ್ಳು ಪತ್ತೆ ಹೇಗೆ ಮಾಡ್ತಾರೆ ? ಡೀಟೇಲ್ಸ್​ ಇಲ್ಲಿದೆ..

jail
Published on

ಕೋಲ್ಕತ್ತಾ: ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಂಜಯ್ ರಾಯ್ ಜೊತೆಗೆ ಇತರ 6ಮಂದಿಯನ್ನು ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಪಾಲಿಗ್ರಾಫ್ ಪರೀಕ್ಷೆ ಅಥವಾ ಸುಳ್ಳು ಪತ್ತೆಕಾರಕದ ಮೂಲಕ ಈ ಪ್ರಕರಣದಲ್ಲಿ ಅಪರಾಧ ನಡೆದಿದೆಯೇ ಅಥವಾ ಇಲ್ಲವೇ ಎಂಬುದನ್ನು ವಿಧಿವಿಜ್ಞಾನ ತಜ್ಞರು ನಿರ್ಧರಿಸುತ್ತಾರೆ. ಹಾಗಾದರೆ ಏನಿದು ಪಾಲಿಗ್ರಾಪ್​? ಯಾರು? ಹೇಗೆ ಪರೀಕ್ಷೆ ಮಾಡುತ್ತಾರೆ ಎಂಬುದರ ಬಗ್ಗೆ ತಿಳಿಯೋಣ..

ದೆಹಲಿಯಲ್ಲಿ ನಡೆದಿದ್ದ ನಿರ್ಭಯ ರೇಪ್​ ಮತ್ತು ಹತ್ಯೆ ಪ್ರಕರಣದ ನಂತರ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಕೋಲ್ಕತ್ತಾದ ಆರ್ ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಟ್ರೈನಿ ವೈದ್ಯೆ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ಅಧಿಕಾರಿಗಳು ತೀವ್ರಗೊಳಿಸಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ, ಪ್ರಮುಖ ಆರೋಪಿ ಸಂಜಯ್ ರಾಯ್ ಸೇರಿದಂತೆ ಇತರ ಆರು ಮಂದಿಗೆ ಪಾಲಿಗ್ರಾಫ್ ಪರೀಕ್ಷೆ ನಡೆಸಲಾಗುತ್ತಿದೆ. ಸದ್ಯ ಆರೋಪಿಯನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಸಿಬಿಐ ಅಧಿಕಾರಿಗಳು ಜೈಲಿನಲ್ಲಿಯೇ ಈ ಪಾಲಿಗ್ರಾಫ್ ಪರೀಕ್ಷೆಗೆ ವ್ಯವಸ್ಥೆ ಮಾಡಿದ್ದಾರೆ.

ಈ ಪಾಲಿಗ್ರಾಫ್ ಪರೀಕ್ಷೆ ನಡೆಸಲು ವಿಶೇಷ ತಜ್ಞರ ತಂಡ ಈಗಾಗಲೇ ದೆಹಲಿಯಿಂದ ಕೋಲ್ಕತ್ತಾ ತಲುಪಿದೆ. ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ ತಂಡವು ಸುಳ್ಳು ಪತ್ತೆ ಯಂತ್ರದ ಮೂಲಕ ಆರೋಪಿಗಳಿಂದ ನಿಜವನ್ನು ಬಾಯಿ ಬಿಡಿಸುತ್ತಾರೆ.

ಪ್ರಮುಖ ಆರೋಪಿ ಸಂಜಯ್ ರಾಯ್, ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್, ಅತ್ಯಾಚಾರ ನಡೆದ ದಿನ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿದ್ದ ನಾಲ್ವರು ವೈದ್ಯರು ಮತ್ತು ನಾಗರಿಕ ಸ್ವಯಂಸೇವಕನಿಗೆ ಪಾಲಿಗ್ರಾಫ್ ಪರೀಕ್ಷೆ ನಡೆಸುತ್ತಿದ್ದಾರೆ.

ಪಾಲಿಗ್ರಾಫ್ ಪರೀಕ್ಷೆಯು ಸುಳ್ಳು ಪತ್ತೆಕಾರಕದಂತೆಯೇ ಇರುತ್ತದೆ. ಈ ಪಾಲಿಗ್ರಾಫ್ ಪರೀಕ್ಷೆಯಿಂದ ಯಾವುದೇ ಪ್ರಕರಣದ ಆರೋಪಿಗಳು ತನಿಖಾಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಸತ್ಯ ಹೇಳುತ್ತಿದ್ದಾರೆಯೇ ಅಥವಾ ಸುಳ್ಳು ಹೇಳುತ್ತಿದ್ದಾರೆಯೇ ಎಂಬುದನ್ನು ನಿರ್ಧರಿಸಬಹುದು. ಆದರೆ ಈ ಲೈ ಡಿಟೆಕ್ಟರ್‌ನಲ್ಲಿ ಯಾವುದೇ ಔಷಧ ಅಥವಾ ಮಾದಕ ದ್ರವ್ಯಗಳನ್ನು ಬಳಸುವುದಿಲ್ಲ. ಆರೋಪಿಗಳಿಗೆ ಮಾತ್ರ ಕಾರ್ಡಿಯೋ ಕಫ್‌ಗಳು ಅಥವಾ ಲೈಟ್ ಎಲೆಕ್ಟ್ರೋಡ್‌ಗಳು ಮತ್ತು ಇತರ ಸಾಧನಗಳನ್ನು ಅಳವಡಿಸಲಾಗುತ್ತದೆ. ಅದರ ಆಧಾರದ ಮೇಲೆ ವ್ಯಕ್ತಿಯು ಬಿಪಿ ಮತ್ತು ಉಸಿರಾಟದ ಪ್ರಮಾಣವನ್ನು ಮೇಲ್ವಿಚಾರಣೆ ಮಾಡುವ ಮೂಲಕ ಅವನು ಸತ್ಯ ಹೇಳುತ್ತಿದ್ದಾನೋ ಅಥವಾ ಸುಳ್ಳುಹೇಳುತ್ತಿದ್ದಾನೋ ಎಂಬುದನ್ನು ಕಂಡುಕೊಳ್ಳುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net