

ಬೆಂಗಳೂರು: ಹೌದು ನೋಡದಕ್ಕೆ ಅದು ಸ್ಟೀಲ್ ಗ್ಯಾಸ್ ಸ್ಟವ್ - ಅದರಲ್ಲೇನೂ ವಿಶೇಷವಿಲ್ಲ. ಮೇಲ್ನೋಟಕ್ಕೆ ಅದರ ಮೌಲ್ಯ ಬಹಳ ಕಡಿಮೆ ಅನಿಸುತ್ತದೆ. ವಾಸ್ತವವಾಗಿ ಅದರ ಬೆಲೆ ಸರಿ ಸಮಾರು ಕೋಟಿಯ ಆಸುಪಾಸಿತ್ತು! ಅದನ್ನು ಕಸ್ಟಮ್ಸ್ ಗುಪ್ತಚರ ಅಧಿಕಾರಿಗಳು ಗ್ರಹಿಸಿದ್ದರು!
ಆ ಸ್ಟೀಲ್ನೆಸ್ ಸ್ಟವ್ ಅನ್ನು ಆಸ್ಟ್ರೇಲಿಯಾಕ್ಕೆ ರಫ್ತು ಮಾಡಲಾಗುತ್ತಿತ್ತು. ಬೆಂಗಳೂರಿನಿಂದ ಆಸ್ಟೇಲಿಯಾಕ್ಕೆ ಹೋಗುವುದಕ್ಕೆ ಸಜ್ಜಾಗಿ ಈ ಸ್ಟವ್ ಬೆಂಗಳೂರು ಅಂತಾರಾಷ್ಟ್ರೀಯ ಕೊರಿಯರ್ ಸೆಂಟರ್ ತಲುಪಿತ್ತು. ಈ ಬಗ್ಗೆ ಖಚಿತ ಮಾಹಿತಿಯೊಂದು ಬೆಂಗಳೂರಿನ ಕಸ್ಟಮ್ಸ್ ಅಧಿಕಾರಿಗಳಿಗೆ ಲಭಿಸಿತ್ತು. ಕೂಡಲೆ ಕಾರ್ಯಪ್ರವೃತ್ತರಾದ ಕಸ್ಟಮ್ಸ್ನ ಗುಪ್ತಚರ ವಿಭಾಗದ ಅಧಿಕಾರಿಗಳು ಕೊರಿಯರ್ ಸೆಂಟರ್ಗೆ ದಾಳಿ ನಡೆಸಿ, ಸ್ಟೀಲ್ ಗ್ಯಾಸ್ ಸ್ಟವ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡರು.
ಸ್ಟವ್ ಅನ್ನು ಕೂಲಂಕಷವಾಗಿ ಪರಿಶೀಲಿಸಿದರು. ಆ ಸ್ಟವ್ ನ ಕಾಲನ್ನು ಕತ್ತರಿಸಿ ನೋಡಿದಾಗ ಅದರೊಳಗೆ ಬಿಳಿ ಬಣ್ಣದ ಪೌಡರಿನ ಪ್ಲಾಸ್ಟಿಕ್ ಕಟ್ಟು ಇರುವುದು ಕಾಣಿಸಿತು. ಅದನ್ನು ಓಪನ್ ನೋಡಿದರೆ ಎಫೆಡ್ರೇನ್ ಎಂಬುದು ಮನವರಿಕೆಯಾಗಿತ್ತು. 1983 ಗ್ರಾಂ ತೂಕ ಇತ್ತು. ಕಸ್ಟಮ್ಸ್ ಅಧಿಕಾರಿಗಳು ಅದನ್ನು ಕೂಡಲೇ ಜಪ್ತಿ ಮಾಡಿಕೊಂಡಿದ್ದಾರೆ. ಅದರ ಮೌಲ್ಯ ಅಂದಾಜು 79 ಲಕ್ಷ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ವಿಚಾರವನ್ನು ಕಾರ್ಯಾಚರಣೆಯ ವಿಡಿಯೋವನ್ನು ಬೆಂಗಳೂರು ಕಸ್ಟಮ್ಸ್ ಕಚೇರಿ ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಬೆಂಗಳೂರು ಅಂತರಾಷ್ಟ್ರೀಯ ಕೊರಿಯರ್ ಸೆಂಟರ್-ಗುಪ್ತಚರ ವಿಭಾಗದ ಅಧಿಕಾರಿಗಳು ಆಸ್ಟ್ರೇಲಿಯಾಕ್ಕೆ ರಫ್ತು ರವಾನೆಯಾಗಲು ನಿಗದಿಪಡಿಸಲಾಗಿದ್ದ “ಸ್ಟೀಲ್ ಗ್ಯಾಸ್ ಸ್ಟೌವ್”ನ್ನು ತಡೆದಿದ್ದು, ಅದರಿಂದ 1983 ಗ್ರಾಂ ಎಫೆಡ್ರೈನ್ ಅನ್ನು (ಮೌಲ್ಯ ರೂ. 79 ಲಕ್ಷಗಳು (ಅಂದಾಜು)) ವಶಪಡಿಸಿಕೊಂಡಿದ್ದಾರೆ.