More

    ಬಲೂಚ್​ನಲ್ಲಿ ತೈಲ,ಅನಿಲ ಕಾರ್ಮಿಕ ಕಾವಲು ಪಡೆ ಮೇಲೆ ಉಗ್ರ ದಾಳಿ: 7 ಯೋಧರು ಸೇರಿ 14 ಬಲಿ

    ಕರಾಚಿ: ಬಲೂಚಿಸ್ತಾನದಲ್ಲಿ ಸರ್ಕಾರಿ ಸ್ವಾಮ್ಯದ ಆಯಿಲ್ ಆ್ಯಂಡ್ ಗ್ಯಾಸ್ ಡೆವಲಪ್​ಮೆಂಟ್​ ಕಂಪನಿಯ ಕೆಲಸಗಾರರನ್ನು ಗ್ವಾದಾರ್ ಜಿಲ್ಲೆಯ ಒರ್ಮಾರಾ ಪಟ್ಟಣದಲ್ಲಿ ಕರೆದೊಯ್ಯುತ್ತಿರುವಾಗ ಉಗ್ರರು ದಾಳಿ ನಡೆಸಿದ್ದಾರೆ. ಪರಿಣಾಮ ಏಳು ಯೋಧರು ಸೇರಿ ಒಟ್ಟು 14 ಜನ ಸಾವನ್ನಪ್ಪಿದ್ದಾರೆ.

    ಪಾಕಿಸ್ತಾನ ಸೇನೆಯ ಮಾಧ್ಯಮ ವಿಭಾಗ ಇಂಟರ್ ಸರ್ವೀಸ್ ಪಬ್ಲಿಕ್ ರಿಲೇಷನ್ಸ್​ ಗುರುವಾರ ನಡೆದ ಈ ದಾಳಿಯ ವಿಚಾರವನ್ನು ಖಚಿತಪಡಿಸಿದೆ. ಈ ದಾಳಿ ಸಂದರ್ಭದಲ್ಲಿ ಪಾಕಿಸ್ತಾನದ ಸೆವೆನ್ ಫ್ರಂಟಿಯರ್ ಕಾರ್ಪ್ಸ್ ನ ಏಳು ಯೋಧರು ಮತ್ತು ಖಾಸಗಿ ಸೆಕ್ಯುರಿಟಿ ಸಂಸ್ಥೆಯ ಏಳು ಗಾರ್ಡ್​​ಗಳು ಮೃತಪಟ್ಟಿದ್ದಾರೆ.

    ಇದನ್ನೂ ಓದಿ: ಕರೊನಾ ಕರಿನೆರಳಿನಲ್ಲಿ ನಾಡಹಬ್ಬ ದಸರಾ, ನಾಳೆ ವಿಧ್ಯುಕ್ತ ಚಾಲನೆ

    ಉಗ್ರರು ಒರ್ಮಾರ ಸಮೀಪದಲ್ಲಿ ಬಲೂಚಿಸ್ತಾನ-ಹಬ್​​ ಕಚಾರಿ ಕೋಸ್ಟಲ್ ಹೈವೇಯ ಹತ್ತಿರ ಬೆಟ್ಟ ಮೇಲಿಂದ ಕಾವಲುಪಡೆ ಮೇಲೆ ದಾಳಿ ನಡೆಸಿದ್ದರು. ಪರಸ್ಪರ ಗುಂಡಿನ ದಾಳಿ ಆಗಿದೆ. ದಾಳಿಯ ಸಂದರ್ಭದಲ್ಲಿ ಕಾರ್ಮಿಕರು ಯಾರೂ ಇರಲ್ಲಿಲ್ಲ. ಈ ಬೆಂಗಾವಲು ಪಡೆಯವರು ಅವರನ್ನು ತೈಲ ಪ್ಲಾಂಟ್​ಗೆ ಬಿಟ್ಟು ಬರುತ್ತಿದ್ದ ವೇಳೆ ದಾಳಿ ನಡೆದಿರುವಂಥದ್ದು. ಉಳಿದವರೆಲ್ಲ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಡಸಿದ್ದಾರೆ. (ಏಜೆನ್ಸೀಸ್)

    ಹೊಸ ವರ್ಷ ಆರಂಭವಾಗ್ತಾ ಇದ್ದಂಗೆ ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಧ್ಯಕ್ಷರು* ಬರ್ತಾರಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts