More

    ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ಭೀಕರ ಉಗ್ರ ದಾಳಿ; 29 ಮಂದಿ ಸಾವು, 61 ಜನರಿಗೆ ಗಾಯ

    ಕಾಬೂಲ್​: ಅಫ್ಘಾನಿಸ್ತಾನದ ಕಾಬೂಲ್​ನಲ್ಲಿ ನಡೆದ ಉಗ್ರರ ದಾಳಿಗೆ ಸುಮಾರು 29 ಮಂದಿ ಬಲಿಯಾಗಿದ್ದು, 61 ಮಂದಿ ಗಾಯಗೊಂಡಿದ್ದಾರೆ.

    ಆಫ್ಘಾನ್​ನ ಪ್ರಮುಖ ರಾಜಕೀಯ ಪಕ್ಷ ಹೆಜ್ಬ್-ಇ ವಹ್ದತ್​ನ ನಾಯಕಾಗಿದ್ದ ಅಬ್ದುಲ್​ ಅಲಿ ಮಜಾರಿ ಅವರ ಮರಣ ವಾರ್ಷಿಕೋತ್ಸವದ ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವನ್ನು ಗುರಿಯಾಗಿಟ್ಟುಕೊಂಡು ಶುಕ್ರವಾರ ಉಗ್ರರು ದಾಳಿ ನಡೆಸಿದ್ದಾರೆ ಎಂದು ಆಫ್ಘಾನ್​ ಆಂತರಿಕ ಸಚಿವಾಲಯ ಮಾಹಿತಿ ನೀಡಿದೆ.

    ಹಜಾರಸ್​ ಸಮುದಾಯದ ಪ್ರಮುಖ ನಾಯಕನೆನಿಸಿಕೊಂಡಿದ್ದ ಮಜಾರಿ ಸ್ಮರಣಾರ್ಥ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಹಲವು ರಾಜಕೀಯ ಪ್ರಮುಖರು ಭಾಗವಹಿಸಿದ್ದರು. ಅನೇಕರ ಸ್ಥಿತಿ ತೀರ ಗಂಭೀರವಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.

    ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್​ ಘನಿ ಈ ದಾಳಿಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಇದೊಂದು ಮಾನವೀಯತೆ ಹಾಗೂ ದೇಶದ ಏಕತೆಯ ವಿರುದ್ಧ ನಡೆದ ದಾಳಿ ಎಂದು ಟ್ವೀಟ್ ಮಾಡಿದ್ದಾರೆ.

    ಕಾಬೂಲ್​ ಮೇಲೆ ನಡೆದ ಉಗ್ರದಾಳಿಯನ್ನು ಭಾರತ ಖಂಡಿಸಿದೆ. ಈ ಭೀಕರ ಉಗ್ರದಾಳಿಯಲ್ಲಿ ಮೃತಪಟ್ಟ ಕುಟುಂಬದವರಿಗೆ ನೋವು ಸಹಿಸುವ ಶಕ್ತಿಯನ್ನು ದೇವರು ಕೊಡಲಿ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸಂತಾಪ ವ್ಯಕ್ತಪಡಿಸಿದೆ.

    ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿದ್ದು, ತನ್ನ ವೆಬ್​ಸೈಟ್​ನಲ್ಲಿ ಈ ಬಗ್ಗೆ ಪ್ರಕಟಣೆ ಬರೆದುಕೊಂಡಿದೆ ಎನ್ನಲಾಗಿದೆ. ಇತ್ತೀಚೆಗಷ್ಟೇ ಅಮೆರಿಕ ಮತ್ತು ತಾಲಿಬಾನ್ ನಡುವೆ ಶಾಂತಿ ಒಪ್ಪಂದ ಆಗಿತ್ತು. ಒಪ್ಪಂದದ ಷರತ್ತಿನ ಅನ್ವಯ ತಾಲಿಬಾನ್​ನಲ್ಲಿದ್ದ ತಮ್ಮ ಸೈನಿಕರ ಪಡೆಯ ಅರ್ಧದಷ್ಟನ್ನು ಅಮೆರಿಕ ವಾಪಸ್ ಕರೆಸಿಕೊಂಡಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts