ವಿಮಾನ ನಿಲ್ದಾಣದಲ್ಲಿ ಕುವೆಂಪು ನಾಮಫಲಕ ಅಳವಡಿಸಿ

Kannada Workers' Defense Forum protest
ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಪದಾಧಿಕಾರಿಗಳು ವಿಮಾನ ನಿಲ್ದಾಣ ವ್ಯವಸ್ಥಾಪಕ ನಿರ್ದೇಶಕ ಶಮತ್ ಅವರಿಗೆ ಮನವಿ ಸಲ್ಲಿಸಿದರು. ವಾಟಾಳ್ ಮಂಜುನಾಥ, ಪ್ರಶಾಂತ್, ನಿತಿನ್ ರೆಡ್ಡಿ, ರವಿ ಸಾಧುಶೆಟ್ಟಿ, ಸತೀಶ್‌ಗೌಡ ಇತರರಿದ್ದರು.
Published on

ಶಿವಮೊಗ್ಗ: ಕುವೆಂಪು ವಿಮಾನ ನಿಲ್ದಾಣದಲ್ಲಿ ಕನ್ನಡಕ್ಕೆ ಆದ್ಯತೆ ನೀಡುವ ಜತೆಗೆ ರಾಷ್ಟ್ರಕವಿ ಕುವೆಂಪು ಅವರ ನಾಮಫಲಕ ಹಾಕಬೇಕೆಂದು ಆಗ್ರಹಿಸಿ ಕನ್ನಡ ಕಾರ್ಮಿಕರ ರಕ್ಷಣಾ ವೇದಿಕೆ ಪದಾಧಿಕಾರಿಗಳು ಶುಕ್ರವಾರ ವಿಮಾನ ನಿಲ್ದಾಣದ ಟರ್ಮಿನಲ್ ಎದುರು ಪ್ರತಿಭಟನೆ ನಡೆಸಿದರು.

ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡುವ ಫಲಕಗಳಲ್ಲಿ ಆಂಗ್ಲ, ಹಿಂದಿ ಭಾಷೆಗೆ ಒತ್ತು ನೀಡಲಾಗಿದೆ. ಕನ್ನಡ ಭಾಷೆಯ ಕಡೆಗಣನೆ ಮಾಡಲಾಗಿದೆ. ತಕ್ಷಣವೇ ಹಿಂದಿ ಮತ್ತು ಆಂಗ್ಲ ಭಾಷೆಯ ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ವಿಮಾನ ನಿಲ್ದಾಣದಲ್ಲಿ ಕುವೆಂಪು ವಿಮಾನ ನಿಲ್ದಾಣ ಎಂಬ ಹೆಸರು ಎಲ್ಲಿಯೂ ಕಾಣುತ್ತಿಲ್ಲ. ಶೀಘ್ರವೇ ನಾಮಫಲಕ ಅಳವಡಿಸುವ ಕೆಲಸ ಆಗಬೇಕೆಂದು ನಿಲ್ದಾಣದ ವ್ಯವಸ್ಥಾಪಕ ಶಮತ್ ಅವರಿಗೆ ಮನವಿ ಸಲ್ಲಿಸಿದರು.
ವೇದಿಕೆ ಅಧ್ಯಕ್ಷ ವಾಟಾಳ್ ಮಂಜುನಾಥ, ಗೌರವಾಧ್ಯಕ್ಷ ಪ್ರಶಾಂತ್, ಕಾರ್ಯದರ್ಶಿ ನಿತಿನ್ ರೆಡ್ಡಿ, ಉಪಾಧ್ಯಕ್ಷ ರವಿ ಸಾಧುಶೆಟ್ಟಿ, ಪದಾಧಿಕಾರಿಗಳಾದ ಸತೀಶ್‌ಗೌಡ, ಆಲ್ಬರ್ಟ್ ವಿಜಯ್, ಪರಮೇಶ್, ಅನ್ವರ್, ಅರ್ಚನಾ ನಿರಂಜನ್, ಜಾನ್ಹವಿ, ಫ್ರಾೃಕ್ಲಿನ್ ಸಾಲೋಮನ್ ಸಂತೋಷ್, ಲೋಕೇಶ್, ಅಕ್ಬರ್ ಪಾಷಾ, ರಾಘವೇಂದ್ರ, ಎಸ್.ಮಂಜುನಾಥ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net