ರೀಲ್ಸ್ ಪ್ರಿಯರಿಗೆ ಗುಡ್ ನ್ಯೂಸ್, 10 ನಿಮಿಷ ವಿಡಿಯೋಗೆ ಅವಕಾಶ!

ಇನಮಿಷ
Published on

Instagram update: ರೀಲ್ಸ್ ಇಲ್ಲದ ಜೀವನವೇ ಇಲ್ಲದಾಗಿದೆ. ರೀಲ್ಸ್ ಮಾಡುವವರಿಗೆ ಹಾಗೂ ವೀಕ್ಷಿಸುವರಿಗೆ ಇದೀಗ ಗುಡ್ ನ್ಯೂಸ್. ಇನ್‌ಸ್ಟಾ ರೀಲ್ಸ್ ಮಿತಿಯನ್ನು 10 ನಿಮಿಷಕ್ಕೆ ಏರಿಸಲಾಗಿದೆ.


ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್‌ಸ್ಟಾ ರೀಲ್ಸ್ ಪ್ರತಿಯೊಬ್ಬರನ್ನು ಮೋಡಿ ಮಾಡಿದೆ. ಇದೀಗ ಇನ್‌ಸ್ಟಾಗ್ರಾಂ ರೀಲ್ಸ್ ಅಪ್‌ಗ್ರೇಡ್ ಮಾಡುತ್ತಿದೆ.


ಯೂಟ್ಯೂಬ್‌ಗೆ ಸೆಡ್ಡು ಹೊಡೆಯಲು ಸಜ್ಜಾಗಿರುವ ಇನ್‌ಸ್ಟಾಗ್ರಾಂ ಇದೀಗ ರೀಲ್ಸ್ ವಿಡಿಯೋ ಮಿತಿಯನ್ನು 10 ನಿಮಿಷಕ್ಕೆ ಏರಿಸಿ ಮತ್ತಷ್ಟು ಫೋಟೋ ಮತ್ತು ವಿಡಿಯೋಗಳನ್ನ ಹೆಚ್ಚು ನಿಮಿಷಗಳ ಕಾಲ ಹಂಚಿಕೊಳ್ಳಲು ಅವಕಾಶ ಕಲ್ಪಿಸಿದೆ.


ಮೆಟಾ ತನ್ನ ರೀಲ್ಸ್ ವಿಡಿಯೋ ಕುರಿತು ಯಾವುದೇ ಅಪ್‌ಡೇಟ್ ಮಾಡಿಲ್ಲ. ಆದರೆ ಕೆಲವೇ ದಿನಗಳಲ್ಲಿ ಇನ್‌ಸ್ಟಾ ರೀಲ್ಸ್ ಮಿತಿಯನ್ನು10ನಿಮಿಷಕ್ಕೆ ಏರಿಸಲಾಗುತ್ತಿದೆ. ಈಗಾಗಲೇ ಟೆಸ್ಟಿಂಗ್ ವಿಡಿಯೋ ಪಕ್ರಿಯೆನಡೆಯುತ್ತಿದೆ.


ಈಗಾಗಲೇ ಟಿಕ್​ಟಾಕ್​​ ತನ್ನ ಗ್ರಾಹಕರಿಗೆ 10 ನಿಮಿಷದ ರೀಲ್ಸ್ ವಿಡಿಯೋಗೆ ಅವಕಾಶ ಮಾಡಿದೆ. ಹೆಚ್ಚುವರಿ ಹಣ ಪಾವತಿ ಮಾಡಿದ ಗ್ರಾಹಕರಿಗೆ 20 ನಿಮಿಷದ ರೀಲ್ಸ್ ವಿಡಿಯೋಗೆ ಟಿಕ್‌ಟಾಕ್ ಅವಕಾಶ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net