

ಬೆಂಗಳೂರು: ಇನ್‌ಸ್ಪೈರ್ ಇನ್‌ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸ್ (Inspire Institute of Sports) ತನ್ನ 8ನೇ ಸಂಸ್ಥಾಪನಾ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಅಂಗವಾಗಿ ವಿಜಯನಗರ ಕ್ಯಾಂಪಸ್‌ನಲ್ಲಿ 'ಇನ್‌ಸ್ಪೈರ್ ಮ್ಯೂಸಿಯಂ' (
Inspire Museum
) ಅನ್ನು ಲೋಕಾರ್ಪಣೆ ಮಾಡಿದೆ. ಕಳೆದ ಕೆಲವು ವರ್ಷಗಳಲ್ಲಿ ಸಂಸ್ಥೆಯ ಯಶಸ್ಸಿಗೆ ಕಾರಣರಾದ ಕ್ರೀಡಾಪಟುಗಳು, ತರಬೇತುದಾರರು ಮತ್ತು ಅವರ ಕ್ರೀಡಾ ಸಾಧನೆಗಳಿಗೆ ಇದು ಸಮರ್ಪಿತವಾದ ಗೌರವವಾಗಿದೆ. ಈ ಮ್ಯೂಸಿಯಂ IIS ನ ಇದುವರೆಗಿನ ಪಯಣವನ್ನು ಕೊಂಡಾಡುವುದರ ಜೊತೆಗೆ, ಇಲ್ಲಿ ತರಬೇತಿ ಪಡೆದು ಬೆಳೆದ ಕ್ರೀಡಾಪಟುಗಳ ಸಾಧನೆಗಳು, ಮೈಲಿಗಲ್ಲುಗಳು ಮತ್ತು ಅವರ ಸ್ಫೂರ್ತಿದಾಯಕ ಕಥೆಗಳನ್ನು ಪರಿಚಯಿಸುತ್ತದೆ.