

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು (ಜು.15) ಯುನೈಟೆಡ್ ಅರಬ್ ಎಮಿರೇಟ್ಸ್ ಗೆ (ಯುಎಇ) ಆಗಮಿಸುತ್ತಿದ್ದಂತೆ, ಭಾರತೀಯ ನೌಕಾಪಡೆಯ ಹಡಗು INS ತ್ರಿಖಂಡ್ ಪರ್ಷಿಯನ್ ಗಲ್ಫ್ ಮತ್ತು ಒಮಾನ್ ಕೊಲ್ಲಿಯಲ್ಲಿ ಸಜ್ಜಾಗಿ ನಿಂತಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ಪ್ರಧಾನಿ ಮೋದಿಯ ಕನಸನ್ನು ಸಾಕಾರಗೊಳಿಸಿದ ಐಎನ್ಎಸ್ ತ್ರಿಖಂಡ್, ಸುರಕ್ಷಿತ ವ್ಯಾಪಾರ ಚಲನೆಯನ್ನು ಖಾತ್ರಿಪಡಿಸುತ್ತಾ ಪ್ರಾದೇಶಿಕ ಕಡಲ ಭದ್ರತೆಗೆ ಕೊಡುಗೆ ನೀಡಲಿದೆ.
ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯಲ್ಲಿ ನಿಯೋಜಿಸಲಾದ ಭಾರತೀಯ ನೌಕಾಪಡೆಯ ರಹಸ್ಯ ಯುದ್ಧನೌಕೆ INS ತ್ರಿಖಂಡ್, ತನ್ನ ಕಾರ್ಯಾಚರಣೆಯಿಂದ, ಈ ಪ್ರದೇಶದಲ್ಲಿ #maritimesecurity ಗೆ ಕೊಡುಗೆ ನೀಡುತ್ತಿದೆ. ವ್ಯಾಪಾರದ ಮಾರ್ಗಗಳು ಸುರಕ್ಷಿತವಾಗಿವೆ ಎಂದು ಇದು ಖಚಿತಪಡಿಸುತ್ತದೆ. ಈ ಮೂಲಕ ಪ್ರಧಾನಿ @narendramodi ಅವರ #SAGAR ದೃಷ್ಟಿಕೋನವನ್ನು ಸಾಕಾರಗೊಳಿಸುತ್ತದೆ" ಎಂದು ಭಾರತೀಯ ನೌಕಾಪಡೆ ಟ್ವೀಟ್ ಮಾಡಿದೆ.
2015ರಲ್ಲಿ ಸಾಗರ್ ಯೋಜನೆಯನ್ನು ಅನಾವರಣಗೊಳಿಸಲಾಯಿತು. ಈ ಮೂಲಕ, ಹಿಂದು ಮಹಾಸಾಗರಲ್ಲಿ ವ್ಯಾಪಾರದ ಮಾರ್ಗಗಳನ್ನು ಸುರಕ್ಷಿತವಾಗಿ ಇರಿಸುವುದು ಭಾರತದ ಗುರಿಯಾಗಿ ಇರಲಿದೆ. ಇತ್ತೀಚಿನ ದಿನಗಳಲ್ಲಿ ಸಾಗರದಲ್ಲಿನ ಸಹಕಾರ, ಮತ್ತು ಭದ್ರತೆಯ ಮಹತ್ವದ ಬಗ್ಗೆ ತಿಳುವಳಿಕೆ ಹೆಚ್ಚುತ್ತಿದೆ.
‘ಸಾಗರ’ದ ಮೂಲಕ, ಭಾರತವು ತನ್ನ ನೆರೆಹೊರೆಯವರೊಂದಿಗೆ ಆರ್ಥಿಕ ಮತ್ತು ಭದ್ರತಾ ಸಹಕಾರವನ್ನು ಮತ್ತೊಂದು ಹಂತಕ್ಕೆ ಏರಿಸಲು ಮತ್ತು ಅವರ ಸೈನ್ಯದ ಕಡಲಿನಲ್ಲಿನ ಭದ್ರತಾ ಸಾಮರ್ಥ್ಯಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ.
ಇದಕ್ಕೂ ಮೊದಲು, ಜೂನ್‍ನಲ್ಲಿ, ಭಾರತ, ಫ್ರಾನ್ಸ್ ಮತ್ತು ಯುಎಇ ನಡುವಿನ ತ್ರಿಪಕ್ಷೀಯ ಕಡಲ ಯುದ್ಧಾಭ್ಯಾಸದ ಮೊದಲ ಆವೃತ್ತಿಯು ಮೇಲ್ಮೈ ಯುದ್ಧದಂತಹ ಕಾರ್ಯಾಚರಣೆಗಳಿಗೆ ಸಾಕ್ಷಿಯಾಗಿತ್ತು.(ಏಜೆನ್ಸೀಸ್)