More

    ಹಾಲಿವುಡ್‍ನಲ್ಲಿ ಬರಹಗಾರರ ಬಂಡಾಯ! ಸಂಕಷ್ಟಕ್ಕೆ ಸಿಲುಕಿತಾ ಶ್ರೀಮಂತ ಚಿತ್ರರಂಗ?

    ಲಾಸ್‍ ಏಂಜಲೀಸ್‍: ಇದೀಗ ಹಾಲಿವುಡ್​ನಲ್ಲಿ ಸಿನಿಮಾ ಬರಹಗಾರರು ಸಿಡಿದೆದ್ದಿದ್ದು, “ನಮಗೂ ಹೆಚ್ಚಿನ ವೇತನ ಸಿಗಬೇಕು” ಎಂದು ಬೇಡಿಕೆ ಇಟ್ಟಿದ್ದಾರೆ.

    ಹಾಲಿವುಡ್ ಇದೀಗ ಅತಿದೊಡ್ಡ ಕಾರ್ಮಿಕ ಹೋರಾಟಕ್ಕೆ ಸಾಕ್ಷಿಯಗುತ್ತಿದ್ದು, ನಿರ್ಮಾಪಕರು ಹಾಗೂ ವಿತರಕರ ವಿರುದ್ಧ ಸಿನಿಮಾ ಬರಹಗಾರರು​ ಸಿಡಿದೆದ್ದಿದ್ದಾರೆ. ಇದರಿಂದಾಗಿ ಜಗತ್ತಿನ ಶ್ರೀಮಂತ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದ್ದು, ಕೆಲ ದಿನಗಳ ಕಾಲ ಪ್ರೊಡಕ್ಷನ್‍ ಕೆಲಸ ಸ್ಥಗಿತಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

     

    ಪ್ರತಿಭಟನಾ ನಿರತರು, ನಟರು, ಬರಹಗಾರರು, ತಂತ್ರಜ್ಞರಿಗೆ ಉತ್ತಮ ಸೌಲಭ್ಯ ನೀಡುವಂತೆ ಒತ್ತಾಯ ಮಾಡುತ್ತಿದ್ದು,  ಪ್ರೊಡಕ್ಷನ್​ ಕಂಪನಿಗಳ ಜತೆ ನಡೆಸಿದ್ದ ಮಾತುಕಥೆ ಸಂಧಾನ ವಿಫಲವಾಗಿದೆ. 11 ವಾರಗಳ ಪ್ರತಿಭಟನೆಗೆ ಸ್ಪಂದಿಸಿದ ಕಾರಣ ಹಾಲಿವುಡ್‍ನ ಕಾರ್ಮಿಕರು ಕೆಲಸ ತೊರೆದಿದ್ದಾರೆ. ಅದಲ್ಲದೇ ಬರಹಗಾರರು, ಟೆಕ್‍ನೀಷಿಯನ್‍ಗಳಿಗೆ ಕೃತಕ ಬುದ್ಧಿಮತ್ತೆ ಮೇಲೂ ಸಿಟ್ಟಿದೆ ಎನ್ನಲಾಗಿದೆ.

    ಹಾಲಿವುಡ್‍ನಲ್ಲಿ ಬರಹಗಾರರ ಬಂಡಾಯ! ಸಂಕಷ್ಟಕ್ಕೆ ಸಿಲುಕಿತಾ ಶ್ರೀಮಂತ ಚಿತ್ರರಂಗ?

    ನೇರ ಏಟು OTT ಮೇಲೆ!

    ಹಾಲಿವುಡ್‍ನಲ್ಲಿ ಬರಹಗಾರರ ಬಂಡಾಯ! ಸಂಕಷ್ಟಕ್ಕೆ ಸಿಲುಕಿತಾ ಶ್ರೀಮಂತ ಚಿತ್ರರಂಗ?

    OTT ಸಂಸ್ಥೆಗಳಾದ ನೆಟ್​ಫ್ಲಿಕ್ಸ್​, ಅಮೇಜಾನ್​, ಡಿಸ್ನಿ ಸಂಸ್ಥೆಗಳ ಮೇಲೆ ಈ ಪ್ರತಿಭಟನೆ ಪರಿಣಾಮ ಬೀರುತ್ತಿದ್ದು ಸಿನಿಮಾ ಪ್ರೊಡಕ್ಷನ್‍ನಲ್ಲಿ ತೊಡಕು ಉಂಟಾಗಿದೆ. ಇನ್ನು, ಬರಹಗಾಗರರಿಗೆ ಕಲಾವಿದರು ಹಾಗೂ ತಂತ್ರಜ್ಞರು ಸಾಥ್​ ನೀಡುತ್ತಿದ್ದು, ಸರಿಯಾದ ವೇತನ ನೀಡುವಂತೆ ಬೀದಿಗಳಿದು ಹೋರಾಟ ನಡೆಸುತ್ತಿದ್ದಾರೆ.

    ಬೇಡಿಕೆಗಳೇನು?

    ಹೋರಾಟಗಾರರು, ಬರುವ ಆದಾಯದಲ್ಲಿ ಸಮಪಾಲು ನೀಡುವಂತೆ ಪಟ್ಟು ಹಿಡಿದಿದ್ದಾರೆ. OTT ಪ್ಲಾಟ್‍ಫಾರ್ಮ್‍ನಲ್ಲಿ ಸದ್ಯಕ್ಕೆ ಯಾವ ಸಿನಿಮಾಗೆ ಎಷ್ಟು ವೀವ್ಸ್ ಬರುತ್ತಿದೆ ಎನ್ನುವ ಲೆಕ್ಕಾಚಾರ ಮಾಡಲಾಗುತ್ತಿಲ್ಲ. ಇದರಿಂದಾಗಿ ಬರಹಗಾರರ ಸಂಬಳದಲ್ಲಿ ಏರಿಕೆಗೆ ಆಸ್ಪದವೇ ಇರುವುದಿಲ್ಲ. ಇದರಿಂದಾಗಿ ಆಕ್ರೋಶಿತರಾಗಿರುವ ಬರಹಗಾರರು ಬೀದಿಗೆ ಇಳಿದಿದ್ದಾರೆ. ಹೀಗಾಗಿ ಕೆಲಸಕ್ಕೆ ಸರಿಯಾದ ವೇತನ ಸಿಗಲು ಅಗತ್ಯ ಫಾರ್ಮುಲಾ ಕಂಡು ಹಿಡಿಯುವುದೂ ಪ್ರತಿಭಟನಾ ನಿರತರ ಬೇಡಿಕೆಗಳಲ್ಲಿ ಒಂದು.

    40 ವರ್ಷಗಳ ನಂತರ ನಡೆಯುತ್ತಿದೆ ಮಹಾ ಮುಷ್ಕರ

    ಬರೋಬ್ಬರಿ 40 ವರ್ಷಗಳ ನಂತರ ಈ ರೀತಿಯ ಮುಷ್ಕರ ಹಾಲಿವುಡ್‍ನಲ್ಲಿ ನಡೆಯುತ್ತಿದೆ. ಈ ಹಿಂದೆಯೂ ಸಮರ್ಪಕ ವೇತನಕ್ಕಾಗಿ ಹೋರಾಟ ನಡೆದಿದ್ದಾಗ ಕೋಟಿ ಕೋಟಿ ಲೂಟಿ ಮಾಡುತ್ತಾರೆ ಎಂದು ನಿರ್ಮಾಪಕರ ವಿರುದ್ಧ ದೂರುಗಳು ಕೇಳಿಬಂದಿದ್ದವು. ಈ ಬಾರಿಯೂ ಇದೇ ಕಾರಣ ಇಟ್ಟುಕೊಂಡು ಹೋರಾಟಗಾರರು, ನಿರ್ಮಾಪಕರು ಹಾಗೂ ಸಿನಿಮಾ ನಿರ್ಮಾಣ ಸಂಸ್ಥೆಗಳ ವಿರುದ್ಧ ಸಿಡಿದೆದ್ದಿದ್ದಾರೆ.  

    ಹಾಲಿವುಡ್‍ನಲ್ಲಿ ಬರಹಗಾರರ ಬಂಡಾಯ! ಸಂಕಷ್ಟಕ್ಕೆ ಸಿಲುಕಿತಾ ಶ್ರೀಮಂತ ಚಿತ್ರರಂಗ?

    ಕೆಲಸ ನಿಲ್ಲಿಸಿದ 1 ಲಕ್ಷದ 60 ಸಾವಿರ ಸಿನಿಮಾ ತಂತ್ರಜ್ಞರು!

    ಸದ್ಯ ಹಾಲಿವುಡ್‍ ಮುಷ್ಕರದಲ್ಲಿ ಒಂದು ಲಕ್ಷದ ಅರವತ್ತು ಸಾವಿರಕ್ಕೂ ಅಧಿಕ ಸಿನಿಮಾ ತಂತ್ರಜ್ಞರು ಕೆಲಸ ನಿಲ್ಲಿಸಿ ಹೋರಾಟಕ್ಕೆ ಇಳಿದಿದ್ದಾರೆ. ಇನ್ನು ಮುಷ್ಕರದಲ್ಲಿ ಕೆಲ ನಟರೂ ಭಾಗಿಯಾಗುತ್ತಿದ್ದು, ಅವರಿಗೆ ಮುಂಬರುವ ದಿನಗಳಲ್ಲಿ ಸಿನಿಮಾದಲ್ಲಿ ಅವಕಾಶ ಸಿಗುವುದು ಕಠಿಣ ಎನ್ನಲಾಗುತ್ತಿದೆ. ಈ ಹೋರಾಟದಿಂದಾಗಿ ಸಿನಿಮಾ ನಿರ್ಮಾಪಕರಿಗೂ ದೊಡ್ಡ ಹೊಡೆತ ಬೀಳಲಿದೆ ಎನ್ನಲಾಗುತ್ತಿದ್ದು ಏನೇನು ನಡೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts